ಕೋಗಳಿ ಬಾಲಕಿಯರ ಕಬ್ಬಡ್ಡಿ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ.
ಕೋಗಳಿ ಸಪ್ಟೆಂಬರ್.15

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಕೋಗಳಿ ಸರ್ಕಾರಿ ಪ್ರೌಢ ಶಾಲೆಯ ಶಾಲಾ ಬಾಲಕಿರ ತಂಡ ವಿಜೇತರಾಗಿದ್ದಾರೆ.ದಿನಾಂಕ 14 -9-2023 ರಂದು ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ತಾಲೂಕು ಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಸರ್ಕಾರಿ ಪ್ರೌಢಶಾಲೆ ಕೋಗಳಿ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ತಂಡದ ನಾಯಕಿ ಮಂಗಳ ಮತ್ತು ಚೌಡಮ್ಮ ಪೂಜಾ ಐಶ್ವರ್ಯ ಗಾಳಿಬಾಯಿ ಅನುಷ ಲಕ್ಷ್ಮಿ ದೂಗಿ ಬಾಯಿ ರುಕ್ಮಿಣಿ ಬಾಲಕಿಯರು ವಿಜಯ ಶಾಲಿಗಳಾಗಿದ್ದರಿಂದ ಹಿರಿಯ ಶಿಕ್ಷಕರಾದ ಶಶಿಕಲಾ ಲೋಕೇಶ್ ದೈಹಿಕ ಶಿಕ್ಷಕರಾದ ಡಿ ಸಿದ್ದೇಶ್ ತಂಡದ ವ್ಯವಸ್ಥಾಪಕರು ಚಂದ್ರಶೇಖರ್ ಅಕ್ಕಮಹಾದೇವಿ ಮತ್ತು ಶಾಲಾ ಸಿಬ್ಬಂದಿ ಗ್ರಾಮದ ಗ್ರಾಮಸ್ಥರು ಅಭಿನಂದಿಸಿದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್. C ಕೊಟ್ಟೂರು.