ಮೋಟಾರ್ ಸೈಕಲ್ ನಿರ್ಲಕ್ಷ್ಯತನದಿಂದ ಚಲಾಯಿಸಿ ಮಹಿಳೆ ಸಾವು.
ಕೊಟ್ಟೂರು ಸಪ್ಟೆಂಬರ್.16

ಸಿ.ಎಂ.ನಾಗರಾಜ ತಂದೆ ಲೇಟ್ ಮಲ್ಲಪ್ಪ ವ 66ವರ್ಷ, ಲಿಂಗಾಯ್ತರ ಜನಾಂಗ, ವ್ಯವಸಾಯ ಕೆಲಸ ವಾಸ, ಸಂಗಮೇಶ್ವರ ಗ್ರಾಮ,ಇವರು ನೀಡಿದ ದೂರಿನನ್ವಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಕಲಂ ,279.304(ಎ), ಐಪಿಸಿ ಪ್ರಕರಣ ದಾಖಲಾಗಿದ್ದು ದಿನಾಂಕ: 15-09-2023 ರಂದು ಮದ್ಯಾಹ್ನ 2-15 ಗಂಟೆ ಸುಮಾರಿಗೆ ಕೊಟ್ಟೂರು ತಾಲ್ಲೂಕಿನ ಕುಡಿತಿನಿಮಗ್ಗಿ ಕ್ರಾಸ್ ಹತ್ತಿರ ಶಿವನಾಗಪ್ಪ ಎಂಬುವರ ಹೊಲದ ಬಳಿ ಕೊಟ್ಟೂರು ಇಟ್ಟಿಗೆ ರಸ್ತೆಯಲ್ಲಿ, ಆರೋಪಿ ಕೆ.ಸಣ್ಣಮಲ್ಲಪ್ಪ ಈತನು ಮೋಟಾರ್ ಸೈಕಲ್ ನಂಬರ್ ಕೆ.ಎ.35/ಇ.ಎಂ.9630 ನೇದ್ದರಲ್ಲಿ ಹಿಂದುಗಡೆ ಪಿರ್ಯಾದಿಯ ಹೆಂಡತಿ ಶ್ರೀಮತಿ ಚಿನಿವಾಲರ ನಾಗರತ್ನ ಇವರನ್ನು ಕೂಡಿಸಿಕೊಂಡು ಕುಡಿತಿನಿಮಗ್ಗಿ ಗ್ರಾಮದಿಂದ ಅಲಬೂರು ಹೋಗುತ್ತಿರುವಾಗ, ಆರೋಪಿತನು ಮೋಟಾರ್ ಸೈಕಲ್‌ನ್ನು ನಿರ್ಲಕ್ಷತನದಿಂದ ಅತೀ ಜೋರಾಗಿ ಚಲಾಯಿಸಿಕೊಂಡು ಹೋಗಿ ರಸ್ತೆಯಲ್ಲಿದ್ದ ಗುಂಡಿಯನ್ನು ಇಳಿಸಿ ಹತ್ತಿಸಿದ್ದರಿಂದ ಮೋಟಾರ್ ಸೈಕಲ್‌ನಲ್ಲಿ ಹಿಂದೆ ಕುಳಿತ್ತಿದ್ದ ನಾಗರತ್ನಳು ಆಯಾತಪ್ಪಿ ರಸ್ತೆಗೆ ಹಿಂತಲೆಯಾಗಿ ಬಿದ್ದಿದ್ದು, ನಾಗರತ್ನಳ ತಲೆಗೆ ಒಳಪಟ್ಟಾಗಿ ಬಲಕಿವಿಯಲ್ಲಿ ರಕ್ತ ಸೋರಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಮೋಟಾರ್ ಸೈಕಲ್ ಚಾಲಕ ಆರೋಪಿ ಕೆ.ಸಣ್ಣಮಲ್ಲಪ್ಪನ ವಿರುದ್ಧ ಕಾನೂನು ಕ್ರಮ ಜರುಗಿಸಲು ಇದ್ದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.ಎಂದು ಗೀತಾಂಜಲಿ ಶಿಂಧೆ ಪಿ.ಎಸ್.ಐ.ಕೊಟ್ಟೂರು ಪೊಲೀಸ್ ಠಾಣೆ ತಿಳಿಸಿದ್ದಾರೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು