ಪ್ರಜಾಪ್ರಭುತ್ವ ದಿನ ಅಂಗವಾಗಿ ಸಂವಿಧಾನ ಪೀಠಿಕೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕರು.

ಮೊಳಕಾಲ್ಮೂರು ಸಪ್ಟೆಂಬರ್.16

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಆಡಳಿತ ಸೌಧ ಆವರಣದಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಪ್ರಜಾಪ್ರಭುತ್ವ ದಿನ ಅಂಗವಾಗಿ ಸಂವಿಧಾನ ಪೀಠಿಕೆ ಓದುವ ಮೂಲಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು* ಮತ್ತು ಸರ್ ಎಂ ವಿಶ್ವೇಶ್ವರಯ್ಯ ಇಂಜಿನೀಯರ್ ಮತ್ತು ಬಾಬಾ ಅಂಬೇಡ್ಕರ್ ಸಾಹೇಬರು ಫೋಟೋಕ್ಕೆ ಪುಷ್ಪ ನಮನ ಮಾನ್ಯ ಶಾಸಕರು ಸಲ್ಲಿಸಿದರುಈ ಸಂದರ್ಭದಲ್ಲಿ ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್ ವೈ ಗೋಪಾಲಕೃಷ್ಣ ಶಾಸಕರು ಸಂವಿಧಾನವೆಂಬುವುದು ನಾವು ನಡೆದಾಡುವಂತಹ ಭೂಮಿಯಿಂದಲೂ ಪ್ರಕೃತಿಯಿಂದಲೂ ಎಲ್ಲಾ ಧರ್ಮದವರಿಗೂ ಮತ್ತು ಕುರಾನ್ ಬೈಬುಲ್ಲ ಎಲ್ಲಾ ವರ್ಗದಲ್ಲು ಬಡವರು ಹಿಂದುಳಿದವರು ಎಸ್ ಸಿ ಎಸ್ ಟಿ ಸಮುದಾಯಗಳು ತುಳಿತಕ್ಕೆ ಒಳಗಾದವರನ್ನು ಮೇಲೆಬ್ಬಿಸಲು ಸಂವಿಧಾನದಲ್ಲಿ ಕಾನೂನು ರೀತಿಯಾಗಿ ಸಲಹೆ ಸೂಚನೆಯಂತೆ ಮತ್ತು ಮೂಲಭೂತ ಸೌಕರ್ಯಗಳನ್ನು ಪಡೆದು ನಮ್ಮ ಬದುಕನ್ನು ಹಸನು ಮಾಡುವುದೇ ಒಂದು ಒಳ್ಳೆಯ ದೊಡ್ಡ ಗುಣ ಎಂದು ತಿಳಿಯಬೇಕಾಗುತ್ತದೆ.

ಮತ್ತು ಇದರಲ್ಲೂ ಮೇಲು ಕೀಳು ಭೇದ ಭಾವ ಮರೆತು ಎಲ್ಲಾ ಒಂದೇ ಸಮುದಾಯದವರೆಂದು ಭಾವಿಸಿ ಬಂದಿರ್ತಕ್ಕಂತ ಪಕ್ಷ ಅಂದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಬಡವರ ಪಕ್ಷ ಈಗ 5 ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದ ನಮ್ಮ ಕಾಂಗ್ರೆಸ್ ಪಕ್ಷ ಬಡವರ ಬಾಳಿಗೆ ಬೆಳಕು ತಂದು ಇಡೀ ಕರ್ನಾಟಕ ರಾಜ್ಯದ ಮನೆ ಕುಟುಂಬಕ್ಕೆ ಆರ್ಥಿಕ ಪರಿಸ್ಥಿತಿಯನ್ನು ಕಾಪಾಡುವಂತ ಪಕ್ಷವೆಂದರೆ ನಮ್ಮ ಕಾಂಗ್ರೆಸ್ ಪಕ್ಷ ನಮ್ಮ ತಾಯಿ ಹೇಳುತ್ತಿದ್ದರು ನೀನು ಯಾವ ಪಕ್ಷದಲ್ಲಿದ್ದರೂ ನಮ್ಮ ಅದು ಬಡವರ ಪರವಾಗಿರುವ ಪಕ್ಷಕ್ಕೆ ಮಾತ್ರ ಸೀಮಿತವಾಗಿರು ಎಂದು ನಮ್ಮ ತಾಯಿ ಹೇಳುತ್ತಿದ್ದರು ನಾನು ಅದರಂತೆ 35 ವರ್ಷದ ರಾಜಕೀಯ ಅನುಭವದಲ್ಲಿ ಧರ್ಮದ ಹಾದಿಯಲ್ಲಿ ಮತ್ತು ನ್ಯಾಯದ ರೀತಿಯಲ್ಲಿ ಕಾನೂನು ಚೌಕಟ್ಟಿನಲ್ಲಿ ಇವತ್ತಿನವರೆಗೂ ನಾನು ಯಾವ ಕ್ಷೇತ್ರದಲ್ಲಿ ಆಗಲಿ ಅನ್ಯಾಯ ಮಾಡದಂತೆ ಎಲ್ಲಾ ವರ್ಗದ ಬಡವರ ಪರವಾಗಿ ಒಳ್ಳೆ ಒಳ್ಳೆ ಯೋಜನೆಗಳು ಅಭಿವೃದ್ಧಿಗಳು ರೂಪಿಸಿದ್ದೇನೆ.

ಎಂದು ಮಾನ್ಯ ಶಾಸಕರ ಮನಸ್ಸು ಆಗಿರುತ್ತದೆ ಕರ್ನಾಟಕ ರಾಜ್ಯದ ನಮ್ಮ ಕಾಂಗ್ರೆಸ್ ಪಕ್ಷ ಕೊಟ್ಟಿರುವ ಭಾಗ್ಯಗಳನ್ನು ಈಡೇರಿಸಿ ಇಡೀ ನಮ್ಮ ಭಾರತ ದೇಶವೇ ಕರ್ನಾಟಕ ರಾಜ್ಯದ ಕಡೆ ತಿರುಗಿ ನೋಡುತ್ತದೆ ಆದಕಾರಣ ನಾನು ಒಬ್ಬ ಶಾಸಕನಾಗಿ ಸಹ ಯಾವತ್ತಿಗೂ ರೈತರ ಬಡವರ ಪರವಾಗಿ ಯೋಜನೆಗಳು ಮತ್ತು ಅಭಿವೃದ್ಧಿಗಳು ರೂಪಿಸಿದ್ದೇನೆ ಮತ್ತು ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಸಹ ಚಿತ್ರದುರ್ಗ ಜಿಲ್ಲೆ ಲೋಕಸಭಾ ಚುನಾವಣೆಯಲ್ಲಿ ಮುಂಚೂಣಿಯಾಗಿ ಗೆಲುವಿನ ಕುದುರೆಯಂತೆ ಕಾಪಾಡುತ್ತೇನೆಂದು ಮಾನ್ಯ ಶಾಸಕರ ಮನಸು ಆಗಿರುತ್ತದೆ ಈ ಸಂದರ್ಭದಲ್ಲಿ ತಹಶೀಲ್ದಾರರ ರೂಪ ಮೇಡಂ ಜಿಲ್ಲಾ ಪಂಚಾಯತಿ ಇಲಾಖೆ ಅಧಿಕಾರಿಗಳಾದ ನಾಗನಗೌಡ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ*ತಾಲೂಕು ಮಟ್ಟದ ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳು ಮುಖಂಡರುಗಳು ಮೊದಲಾದವರು ಇದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button