ಇಂದು ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲ ಮತ್ತು ಸಾಮೂಹಿಕ ವಿವಾಹ.
ಇದ್ದಲಗಿ ಸಪ್ಟೆಂಬರ್:16

ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ಮಹಾಮಹಿಮ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವ ಮತ್ತು 5೦ ನೆಯ ವರ್ಷದ ಪುರಾಣ ಸುವರ್ಣ ಮಹೋತ್ಸವ ಹಾಗೂ ಸರ್ವ ಧರ್ಮ ಸಾಮೂಹಿಕ ವಿವಾಹ ಸಮಾರಂಭ ಸೆ.17 ರಂದು ರವಿವಾರ ಮಧ್ಯಾಹ್ನ 12.28 ಗಂಟೆಗೆ ಜರುಗಲಿದೆ.ಬೆಳಗ್ಗೆ 7 ಗಂಟೆಗೆ ವೇ.ಮೂ.ಶರಣಯ್ಯ ಮಂಟೇದೇವರಮಠ ಅವರಿಂದ ಶ್ರೀ ಶರಣಬಸವೆಶ್ವರ ಮೂರ್ತಿಗೆ ಚವನಾಭೀಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ನಡೆಯಲಿದೆ.9 ಗಂಟೆಗೆ ಶ್ರೀ ಶರಣಬಸವೇಶ್ವರ ಪುರಾಣ ಗ್ರಂಥ ಹಾಗೂ ಶರಣರ ಬೆಳ್ಳಿ ಮೂರ್ತಿ ಮತ್ತು ಪಾದುಕೆಗಳ ಪಲ್ಲಕ್ಕಿ ಉತ್ಸವ ಸುಮಂಗಲಿಯರಿAದ ಆರಿತಿ,ಕಳಸ ಕನ್ನಡಿ ಹಾಗೂ ವಿವಿಧ ವೈಧ್ಯ ವೈಭವಗಳೊಂದಿಗೆ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣೆಗೆ ನಡೆಯಲಿದೆ.ಮಧ್ಯಾಹ್ನ 12.28 ಗಂಟೆಗೆ ಸಾಮೂಹಿಕ ವಿವಾಹ ಸಮಾರಂಭ ಜರುಗಲಿವೆ.ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ನಡೆಯಲಿದೆ.ಸಂಜೆ 7 ಗಂಟಗೆ ಪುರಾಣ ಪ್ರಚವನ ಮಹಾಮಂಗಲಗೊಳ್ಳಲಿದೆ.ಎಂದು ದೇವಸ್ಥಾನ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ