ಆಶಾ ಕಾರ್ಯಕರ್ತೆಯರ ನೇಮಕದಲ್ಲಿ ಅಕ್ರಮ ವ್ಯಸಗಿದ ಅಧಿಕಾರಿಗಳನ್ನು ವಜಾಗೊಳಿಸುವಂತೆ ಮನವಿ.
ಇಂಡಿ ಸಪ್ಟೆಂಬರ್.22

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯರ ಸನ್ 2009 ರಿಂದ 2023ರ ವರೆಗಿನ ಕೆಲವು ಆಶಾ ಕಾರ್ಯಕರ್ತೆಯರ ನೇಮಕ ಮಾಡಿಕೊಳ್ಳುವಲ್ಲಿ ಸಂಬಂಧಿಸಿದ ಅಧಿಕಾರಿಗಳು ನೇಮಕದ ಕೆಲವು ಸರಕಾರದ ಆದೇಶಗಳು, ಸುತ್ತೊಲೆಗಳು ,ಗಾಳಿಗೆತೂರಿ ಆಯ್ಕೆ ಮಾಡಿರುತ್ತಾರೆ .ಅಂತಹ ಆಶಾ ಕಾರ್ಯಕರ್ತೆಯರು ಹಾಗೂ ನೇಮಕ ಮಾಡಿಕೊಳ್ಳುವಲ್ಲಿ ಶಾಮೀಲಾದ ಅಧಿಕಾರಿಗಳನ್ನು ವಜಾಗೊಳಿಸಿ ಅವರ ಮೇಲೆ ಕರ್ತವ್ಯ ಲೋಪದಡಿ ಕಾನೂನು ಕ್ರಮ ಕೈಗೊಳ್ಳಬೇಕು ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಯ ಎದರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್ )ಸಂಘಟನೆಯಇಂಡಿ ತಾಲೂಕಾ ಪದಾಧಿಕಾರಿಗಳು ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ವಿಜಯಪುರ ಇವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಆರ್.ಪಿ.ಸೇನೆಯ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ ದೇವಾಪೂರ.ರಾಜಕುಮಾರ ಕಾಖಂಡಕಿ. ಆರ್.ಪಿ.ಐ.(ಅ) ದ ತಾಲೂಕಾ ಅಧ್ಯಕ್ಷರಾದ ಚಂದ್ರಶೇಖರ ಮೆಲಿನಮನಿ.ಶಿವಾನಂದ ಹರಿಜನ. ಪರಶುರಾಮ ಉಕ್ಕಲಿ.ಶಶಿಕುಮಾರ ಹರಿಜನ.ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.
ತಾಲೂಕ ವರದಿಗಾರರು:ಶಿವಪ್ಪ.ಭೀ.ಹರಿಜನ.ಇಂಡಿ