ಹೋಳಿ ಮತ್ತು ರಂಜಾನ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಿ – ಲಕ್ಕಪ್ಪ ಜೋಡಟ್ಟಿ.
ಹುನಗುಂದ ಮಾರ್ಚ್.19

ಹಿಂದುಗಳ ಪವಿತ್ರ ಹಬ್ಬ ಹೋಳಿ ಮತ್ತು ಮುಸ್ಲಿಂರ ಪ್ರಮುಖ ಹಬ್ಬವಾದ ರಂಜಾನ ಹಬ್ಬವನ್ನು ಅತ್ಯಂತ ಶಾಂತಿ ಮತ್ತು ಕೋಮು ಸೌಹಾರ್ದತೆಯಿಂದ ಆಚರಿಸಬೇಕು ಎಂದು ಪಿಎಸ್‌ಐ ಲಕ್ಕಪ್ಪ ಜೋಡಟ್ಟಿ ಹೇಳಿದರು.ಮಂಗಳವಾರ ಸಾಯಂಕಾಲ ಪಟ್ಟಣದ ಪೊಲೀಸ್ ಕಚೇರಿಯಲ್ಲಿ ಕರೆದ ಹೋಳಿ ಮತ್ತು ರಂಜಾನ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು,ಹುನಗುಂದ ಪಟ್ಟಣ ಕೋಮು ಸೌಹಾರ್ದಕ್ಕೆ ಹೆಸರಾಗಿದ್ದು.ಹಿಂದು ಮತ್ತು ಮುಸ್ಲಿಂರು ಕೂಡಿಕೊಂಡು ಶಾಂತಿಯಿಂದ ಹಬ್ಬವನ್ನು ಆಚರಿಸಬೇಕು.ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನಗಳಿಗೆ ಆಸ್ಪದ ನೀಡಬಾರದು ಹಾಗೇನಾದರೂ ಗಲಾಟೆ ಮತ್ತು ಕಾನೂನು ಸುವ್ಯವಸ್ಥೆಗೆ ತೊಂದರೆ ಮಾಡಿದರೇ ಅಂತವರ ಮೇಲೆ ನಿರ್ಧಾಕ್ಷಣ್ಯವಾಗಿ ಕಾನೂನು ಕ್ರಮ ಕೈಕೊಳ್ಳಲಾಗುವುದು.ಸಧ್ಯ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗುತ್ತಿದ್ದು.ವಿದ್ಯಾರ್ಥಿಗಳಿಗೆ ತೊಂದರೆ ಯಾಗದಂತೆ ನೋಡಿ ಕೊಳ್ಳಬೇಕು.ಕೆಮಿಕಲ್‌ಯುಕ್ತ ಬಣ್ಣಗಳನ್ನು ಬಳಸಬಾರದು ಮತ್ತು ಒತ್ತಾಯ ಪೂರ್ವಕವಾಗಿ ಯಾರಿಗೂ ಬಣ್ಣ ಹಚ್ಚಬಾರದು.ಒತ್ತಾಯ ಪೂರ್ವಕ ಬಣ್ಣ ಹಚ್ಚೋದರಿಂದ ಜಗಳಕ್ಕೆ ಕಾರಣವಾಗುತ್ತವೆ. ಒಟ್ಟಾರೆಯಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್‌ರೊಂದಿಗೆ ಸಹಕರಿಸಿ ಎಂದರು.ಮುಖಂಡ ಮಹಾಂತೇಶ ಹಳ್ಳೂರ ಮಾತನಾಡಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಆರಂಭವಾಗುತ್ತಿದ್ದು ವಿದ್ಯಾರ್ಥಿ ಓದಿಗೆ ತೊಂದರೆಯಾಗ ದಂತೆ ರಾತ್ರಿ ೧೦ ಗಂಟೆಯವರಗೆ ಮಾತ್ರ ಹಲಗೆ ಬಾರಿಸುವಂತೆ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಹೇಳಬೇಕು. ಹೋಳಿ ಕಾಮನ ಸುಡವಾಗ ಮತ್ತು ಬಣ್ಣ ಆಚರಣೆ ದಿನದಂದು ಕೆಲವೊಂದು ಯುವಕರು ಬೈಕ್‌ಗಳ ಸೈಲೆನ್ಸರ್ ತಗೆದು ಗಾಡಿ ಜೋರಾಗಿ ಓಡಿಸುತ್ತಾ ಅಂತವರ ಬಗ್ಗೆ ಪೊಲೀಸ್ ಇಲಾಖೆಗೆ ಗಮನ ಹರಿಸಿ ಅವರ ಗಾಡಿ ಮತ್ತು ಅವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕು,ಒಟ್ಟಾರೆಯಾಗಿ ಎಲ್ಲರು ಸೇರಿ ಕೋಮು ಸೌಹಾರ್ದತೆಯಿಂದ ಹೋಳಿ ಮತ್ತು ರಂಜಾನ ಹಬ್ಬವನ್ನು ಆಚರಿಸೋಣ ಎಂದರು.ಪತ್ರಕರ್ತರ ಅಮರೇಶ ನಾಗೂರ ಮಾತನಾಡಿದರು.ಈ ಸಂದರ್ಭದಲ್ಲಿ ಬಸವರಾಜ ಗೊಣ್ಣಾಗರ,ಲಕ್ಷ್ಮಣ ಗಾಯಕವಾಡ,ವಿಜಯ ಭಾವಿಕಟ್ಟಿ,ಅಮರೇಶ ಬಂಡರಗಲ್ಲ,ರಾಘು ಬಿಸನಾಳ,ಪ್ರಕಾಶ ಸಿಂಧೆ,ಸಮೀರ ಸುತಗುಂಡರ,ಮಲ್ಲಪ್ಪ ಮಜ್ಜಗಿ,ಸಿದ್ದಪ್ಪ ದೊಡಮನಿ,ಪೊಲೀಸ್ ಸಿಬ್ಬಂದಿಗಳಾದ ಬಸವರಾಜ ಗೌಡರ,ಸಿ.ಸಿ.ಪಾಟೀಲ ಸೇರಿದ್ದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ