ಮೊಳಕಾಲ್ಮುರು ಪಟ್ಟಣದಲ್ಲಿ ತಾಲೂಕ ವತಿಯಿಂದ ಶ್ರೀ ಕ್ರಷ್ಣ ಜಯಂತ್ಯೋತ್ಸವವನ್ನು ಎನ್.ವೈ.ಗೋಪಾಲಕೃಷ್ಣ ಶಾಸಕರ ನೇತೃತ್ವದಲ್ಲಿ ಚಾಲನೆ ನೀಡಿದರು.

ಮೊಳಕಾಲ್ಮುರು ಸಪ್ಟೆಂಬರ್.23

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಪಟ್ಟಣದಲ್ಲಿ ತಾಲೂಕು ಯಾದವ ಸಂಘದ ವತಿಯಿಂದ ಶ್ರೀ ಕೃಷ್ಣ ಜಯಂತೋತ್ಸವವನ್ನು 23.09.2023ರಂದು ಹಮ್ಮಿಕೊಂಡಿದ್ದು ಬೆಳ್ಳಿ ರಥದ ಮೇಲೆ ಶ್ರೀ ಕೃಷ್ಣನ ಫೋಟೋವನ್ನು ಇಟ್ಟು ಮತ್ತು ಸಣ್ಣ ಮಕ್ಕಳನ್ನು ಕೂಡಿಸಿ ಕೃಷ್ಣನ ವೇಷವನ್ನು ಧರಿಸಿ ಡೊಳ್ಳು ತಮಟೆ ಯುವಕರು ಕುಣಿತದಿಂದ ಮೆರವಣಿಗೆ ಮುಖಾಂತರ ಸಾಗಿತು ಆದಮೇಲೆ ತಾಲೂಕು ಪಂಚಾಯತಿ ಆವರಣದಲ್ಲಿ ಸಭೆ ನಡೆಸಿ ಈ ಸಭೆಗೆ ಹಾಜರಾದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಮತ್ತು ಯಾದವ ಸಂಘದ ಗುಂಡ್ಲೂರು ಕರಿಯಣ್ಣ ಗುಬ್ಬಿ ಪ್ರಿನ್ಸಿಪಾಲರು ವಿಧಾನಪರಿಷತ್ ಸದಸ್ಯರಾದ ನಾಗರಾಜ್ ವಕ್ತರ್ ಚಳ್ಳಕೆರೆ ಡಿವೈಎಸ್ಪಿ ಪಿರಾಜಣ್ಣ ವೃತ್ತ ನಿರೀಕ್ಷಕರಾದ ವಸಂತ ಅಸುದಿ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಪಿಎಸ್ಐ ಪಾಂಡುರಂಗಪ್ಪ ಹಾಗೂ ಯಾದವ ಸಮಾಜದ ಪ್ರಮುಖರು ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಪ್ರಕಾಶ್ ರೈತ ಸಂಘದ ಅಧ್ಯಕ್ಷ ರವಿಕುಮಾರ್ ಸುಭಾನ್ ಸಾಬು ಖಾದರ್ ಪಟ್ಟಣದ ಗಣ್ಯಮಾನ್ಯರು ಸಾರ್ವಜನಿಕರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಿ ದೀಪ ಬೆಳಸುವುದರ ಮೂಲಕ ಎನ್ ವೈ ಗೋಪಾಲಕೃಷ್ಣ ಶಾಸಕರ ನೇತೃತ್ವದಲ್ಲಿ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಯಾದವ್ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಮಾನ್ಯ ಶಾಸಕರಿಂದ ಸನ್ಮಾನ ಮಾಡಲಾಯಿತು.

ವಿಧಾನಪರಿಷತ್ ಸದಸ್ಯರಾದ ನಾಗರಾಜ್ ವಕ್ತಾರ್ ಇವರು ಎನ್ ವೈ ಗೋಪಾಲಕೃಷ್ಣ ಶಾಸಕರು ಕೃಷ್ಣ ಪರಮಾತ್ಮರು ಇದ್ದಾಗೆ ಇವರು ಸುಮಾರು ಏಳು ಬಾರಿ ಶಾಸಕರಾಗಿ ಏಳು ಲಕ್ಷ ಜನ ಮತದಾರರನ್ನು ಗೆದ್ದಿರುವ ಕರ್ನಾಟಕದ ಇತಿಹಾಸದಲ್ಲಿ ಕಂಡಿರುವ ಎನ್ ವೈ ಗೋಪಾಲಕೃಷ್ಣ ಶಾಸಕರು ಮಾತ್ರ ಅಂತ ಹೇಳೋದಕ್ಕೆ ಇಚ್ಛೆಪಡುತ್ತೇನೆ ಏಕೆಂದರೆ ಇವರು ಯಾವುದೇ ಪಕ್ಷಕ್ಕೆ ಹೋಗಿ ಶಾಸಕರಾಗಲಿ ಒಳ್ಳೆ ಯೋಜನೆಗಳು ಅಭಿವೃದ್ಧಿಗಳು ಮತ್ತು ಮೂಲಭೂತ ಸೌಕರ್ಯಗಳು ಆ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದವರಿಗೆ ರೂಪಿಸಿ ಬಂದಂತ ಎನ್ ವೈ ಗೋಪಾಲಕೃಷ್ಣ ಶಾಸಕರು ಮುಂದಿನ ವರ್ಷಗಳಲ್ಲಿ ಸಚಿವ ಸ್ಥಾನ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇವರು ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕೆಂದು ಕಾತುರದಲ್ಲಿ ಕಾಯುತ್ತಿದ್ದಾರೆ ಏಕೆಂದರೆ ಎನ್ ವೈ ಗೋಪಾಲಕೃಷ್ಣ ಶಾಸಕರು ನ್ಯಾಯ ನೀತಿ ಧರ್ಮದಿಂದ ಬಂದಿರತಕ್ಕಂಥ ಶಾಸಕರು 18ರ ಚುನಾವಣೆಯಲ್ಲಿ ಆಕಸ್ಮಿಕವಾಗಿ ಬೇರೆ ಪಕ್ಷಕ್ಕೆ ಹೋಗಿದ್ದು ಆ ಪಕ್ಷಕ್ಕೆ ಗೆಲವು ಸಿಕ್ಕಂತಾಯ್ತು ಆದರೆ ನಾವು ಎಂಥಾ ವ್ಯಕ್ತಿಯನ್ನು ದೂರ ಮಾಡಿದೆವು ಎಂದು ಮನಸಲ್ಲಿ ಅಂದುಕೊಂಡು ಮತ್ತೆ ಈ 23 ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಎನ್ ವೈ ಗೋಪಾಲಕೃಷ್ಣ ಇವರನ್ನು ಬರಮಾಡಿಕೊಂಡು ಶ್ರೀ ಕೃಷ್ಣನ ಪರಮಾತ್ಮನ ಶಕ್ತಿಯನ್ನು ಮತ್ತು ಬಲವನ್ನು ಬಂದಂತಾಗಿದೆ ನಮಗೆ ಎಂದು ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ವಕ್ತರ್ ಮತ್ತು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಮನಸಲ್ಲಿ ಇರುತ್ತದೆ ಎಂದು ಹೇಳಿದರು ಏಕೆಂದರೆ ಎನ್ ವೈ ಗೋಪಾಲಕೃಷ್ಣ ಶಾಸಕರು ಒಂದು ಮಾತು ಹೇಳಿದರು ನಮ್ಮ ತಾಯಿ ಸಹ ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಗಿನ ಕಾಲದಲ್ಲಿ ನಮ್ಮ ತಾಯಿ ಹೇಳುತ್ತಿದ್ದರು ನೀನು ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಎಂಬುದು ಮರೆಯಬೇಡ ನಮ್ಮ ಮನೆ ದೇವರು ಇದ್ದಹಾಗೆ ಕಾಂಗ್ರೆಸ್ ಪಕ್ಷ ಅಂತ ನೀನು ಗೆಲವು ಸಾಧಿಸು ಮತ್ತು ಸರ್ಕಾರದ ಮೂಲಭೂತ ಸೌಕರ್ಯಗಳು ಎಲ್ಲಾ ಬಡವರ್ಗದ ಸಮುದಾಯದವರಿಗೆ ಯೋಜನೆಗಳು ಅಭಿವೃದ್ಧಿಗಳ ರೂಪಿಸು ಎಂದು ನಮ್ಮ ತಾಯಿಯವರು ಹೇಳಿದ ಮಾತು ಅದನ್ನೇ ಇವತ್ತಿನವರೆಗೂ ನಾನು ಪಾಲನೆ ಮಾಡಿಕೊಂಡ ಬಂದರ್ತಕ್ಕಂತ ಶಾಸಕರು ಮತ್ತು ಈ ಮೊಳಕಾಲ್ಮುರು ಕ್ಷೇತ್ರಕ್ಕೆ ಶತಾಯಗತಾಯವಾಗಿ ನೀರಾವರಿ ಸೌಲಭ್ಯ ರೂಪಿಸಬೇಕು ಎಂದು ಪಣತೊಟ್ಟಿರುತ್ತೇನೆ ಏಕೆಂದರೆ ನನ್ನ ಬೆನ್ನೆಲುಬಾಗಿ ನಾಗರಾಜ್ ವಕ್ತಾರ್ ಇವರು ನಿಂತಿದ್ದಾರೆ ಈ ಮೊಳಕಾಲ್ಮೂರು ತಾಲೂಕು ಮಳೆ ಬೇಸಾಯದ ತಾಲೂಕಾಗಿ ಕಾಣುತ್ತದೆ ಆದಕಾರಣ ಅಪ್ಪರ್ ಭದ್ರ ಮತ್ತು ತುಂಗಭದ್ರ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಇನ್ನು ಎರಡು ವರ್ಷದಲ್ಲಿ ಯೋಜನೆ ರೂಪಿಸಬೇಕೆಂಬ ಮಾನ್ಯ ಎನ್ ವೈ ಗೋಪಾಲಕೃಷ್ಣ ಶಾಸಕರು ಪಣತೊಟ್ಟಿದ್ದಾರೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳ.ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button