ಬಿ.ಗೋನಾಳ ಮಡಿವಾಳ ಮಾಚಿದೇವರ – ಜಯಂತಿ ಆಚರಿಸಿದರು.
ಬಳ್ಳಾರಿ ಫೆ.01

ದಿನಾಂಕ 01.2.2025 ರಂದು 17 ನೇ. ವಾರ್ಡಿನ ಬಿ.ಗೋನಾಳ ಮಡಿವಾಳ ಮಾಚಿದೇವರ ಜಯಂತಿಯ ಅಂಗವಾಗಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜಿಸಿ ಗೌರವವನ್ನು ಸಲ್ಲಿಸಲಾಯಿತುಶರಣರ ಬಟ್ಟೆಯನ್ನಷ್ಟೇ ಮಡಿ ಮಾಡುವ ಮಾಚಿದೇವ ಸೋಮಾರಿಗಳ, ದುರ್ಗುಣಿಗಳ ಬಟ್ಟೆಯನ್ನು ಮುಟ್ಟದೇ ಅರಸುತನ ಮೇಲಲ್ಲ ಅಗಸತನ ಕೀಳಲ್ಲ ಎಂದು ಸಾರಿದ್ದರು. ಹೆಂಡ ಮಾರಾಟದ ವ್ಯಕ್ತಿ (ಸೀತಾರಾಮ ಕುಮಾರ್) ಅವರಿಂದ ಹೆಂಡ ಕುಡಿದ ಬಿಜ್ಜಳನ ಬಂಟ (ಶಬರೀಶ) ತನ್ನ ಬಟ್ಟೆ ಮಡಿ ಮಾಡುವಂತೆ ಒತ್ತಾಯಿಸಿದಾಗ ಅವನನ್ನು ಮಾಚಿದೇವ ಕೊಲ್ಲುತ್ತಾರೆ. ಆಗ ಬಿಜ್ಜಳನಿಗೆ ಮಡಿವಾಳನ ಕುರಿತು ಸುಳ್ಳು ದೂರು ಹೋಗುತ್ತದೆ. ರಾಜ ವಿವೇಚನೆಯಿಲ್ಲದೆ ಮಾಚಿದೇವನನ್ನು ಕೊಲ್ಲಲು ಆದೇಶಿಸುವಾಗ ಸಾವು ಮಾಚಿದೇವನ ಸನಿಹವೂ ಬರುವುದಿಲ್ಲ. ಮಂತ್ರಿ ಬಸವಣ್ಣ ನೀಡಿದ ಹಿತ ವಚನದಂತೆ ರಾಜ ವಚನಕಾರ, ಕದನ ಕಲಿ ಮಾಚಿದೇವನನ್ನು ಹಿಂಸಿಸುವುದನ್ನು ಬಿಡುತ್ತಾನೆ. ಮಾಚಿದೇವ ಅರಸನನ್ನು ಕ್ಷಮಿಸುತ್ತಾರೆ. ಪುಲಿಕೇರಿ ಎರಿಸ್ವಾಮಿ ಚಪರಿ ಎರಿಸ್ವಾಮಿ ಎ.ಗೋವಿಂದ ವೀರಭದ್ರ ಸಣ್ಣ ಮಣಿ ಶಾಂತಪ್ಪ ಹನುಮಂತ ಮಾನಯ್ಯ ಜಿಲ್ಲಾ ಉಪಾಧ್ಯಕ್ಷರು ಛಲವಾದಿ ಮಹಾಸಭಾ ಮಲ್ಲೇಶ ಸುರೇಶ ನಾಗರಾಜ್ ರಾಕೇಶ್ ರೆಡ್ಡಿ ಗ್ರಾಮದ ಮುಖಂಡರು ವಾಲ್ಮೀಕಿ ಮೌನೇಶ ತಾಯಣ್ಣ ಛಲವಾದಿ ಮಾನಯ್ಯ ಮಲ್ಲಿಕಾರ್ಜುನ ಸಿ ಮೌನೇಶ್ ಗ್ರಾಮದ ಹಿರಿಯ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.