ಕ್ಷೇತ್ರದ ಸಾರ್ವಜನಿಕರು ನಮ್ಮ ಸರ್ಕಾರದ ಭಾಗ್ಯಗಳನ್ನು ಪಡೆದಿರುವುದರಿಂದ ಈ ಬರ ಪರಿಸ್ಥಿತಿಯಲ್ಲಿ ಏನು ಆತಂಕ ಪಡುವ ಅಗತ್ಯವಿಲ್ಲ ಎಂದ ಶಾಸಕರು.

ಮೊಳಕಾಲ್ಮೂರು ಸಪ್ಟೆಂಬರ್.24

ಇಂದು ಬೆಳಿಗ್ಗೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕರ ತೋಟದ ನಿವಾಸಕ್ಕೆ ಮೇಲಿನ ಕಣಿವೆ ಗ್ರಾಮಸ್ಥರು, ಮುಖಂಡರು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರನ್ನು ಭೇಟಿ ಮಾಡಿದರು ಈ ಸಂದರ್ಭದಲ್ಲಿ ಶಾಸಕರು ಸಾರ್ವಜನಿಕರಿಗೆ ಹೇಳುವುದೇನೆಂದರೆ ಶ್ಯಾಲೂ ಹೂವಿನ ಹಾರ ತರಬಾರದು ಏಕೆಂದರೆ ಅದೇ ಒಂದು ರೂ.500 ನಿಮ್ಮ ಹತ್ತಿರ ಇದ್ದರೆ ನಿಮ್ಮ ಮನೆ ಪರಿಸ್ಥಿತಿಗೆ ಬರುತ್ತದೆ ಮತ್ತು ಬರಗಾಲದ ಪರಿಸ್ಥಿತಿಯನ್ನು ಕಂಡು ನಮ್ಮ ಸರ್ಕಾರ ಈಗಿನ ಪರಿಸ್ಥಿತಿಯಲ್ಲಿ ನೋಡಿಕೊಂಡರೆ ಬರನೇ ಇಲ್ಲದಂತೆ ಕಾಣುವ ಕಾಲ ಬಂದಂತಾಗಿದೆ ಏಕೆಂದರೆ ಪ್ರತಿ ತಿಂಗಳು ಒಬ್ಬ ಕುಟುಂಬದ ಯಜಮಾನಿ ಒಡತಿಗೆ ಮಹಿಳೆಗೆ 2000 ಬರುತ್ತದೆ ಮನೆ ಕುಟುಂಬ ಜೀವನ ಸಾಗಿಸಬಹುದು.

ಮತ್ತು 10 ಕೆಜಿ ಅಕ್ಕಿ ಒಬ್ಬ ವ್ಯಕ್ತಿಗೆ ಪಡಿತರ ಬಿಪಿಎಲ್ ಚೀಟಿ ದಾರರಿಗೆ ನಮ್ಮ ಸರ್ಕಾರ ಕೊಡುತ್ತದೆ ಅದರಲ್ಲಿ 5 ಕೆಜಿ ಹ**** ಐದು ಕೆಜಿ ಅಕ್ಕಿಗೆ ಹಣ ಸಂದಾಯ ಮಾಡುತ್ತದೆ ಮತ್ತು ಮಹಿಳೆಯರಿಗೆ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಫ್ರೀ ಓಡಾಡಲು ಅವಕಾಶ ಕೊಟ್ಟಿದೆ ಮತ್ತು ಕರೆಂಟ್ ಬಿಲ್ಲನ್ನು ಉಚಿತವಾಗಿ ಸರ್ಕಾರವೇ ಬರಿಸುತ್ತದೆ ಮತ್ತು ನಿರುದ್ಯೋಗಿ ಯುವಕರಿಗೆ ಡಿಪ್ಲೋಮಾ ಮತ್ತು ಡಿಗ್ರಿ ಮಾಡಿದವರಿಗೆ 3000 ಮತ್ತು ಒಂದುವರೆ ಸಾವಿರದಂತೆ ಯೋಜನೆ ಸಹ ನಮ್ಮ ಸರ್ಕಾರ ರೂಪಿಸುತ್ತದೆ ಮತ್ತು ಬರಪೀಡಿತ ತಾಲೂಕಾಗಿ ಘೋಷಣೆ ಸಹ ಆಗಿದೆ ಇದರಲ್ಲಿ ನೇರವಾಗಿ ರೈತರ ಅಕೌಂಟಿಗೆ ನಿಮ್ಮ ಬೆಳೆ ಹಾಕಿದಂತ ರೈತ ಫಲಾನುಭವಿಗೆ ನೇರವಾಗಿ ಬೆಳೆ ಪರಿಹಾರಗಳು ಬರುತ್ತವೆ ಮತ್ತೆ ಇನ್ಸೂರೆನ್ಸ್ ಕಟ್ಟಿದವರ ಫಲಾನುಭವಿಗೆ ಇನ್ಸೂರೆನ್ಸ್ ಗಳ ಬರುತ್ತವೆ ಏನು ತೊಂದರೆ ಪಡುವುದು ಬೇಕಾಗಿಲ್ಲ ನಾಗರಿಕರು ಬದುಕಲಿಕ್ಕೆ ಆರಾಮಾಗಿ ಇದೆ ಎಂದು ಶಾಸಕರ ಒಂದು ಮನಸ್ಸು ಆಗಿರುತ್ತದೆ ಇದರ ಜೊತೆಗೆ ಸರ್ಕಾರದಿಂದ ಮೂಲಭೂತ ಸೌಕರ್ಯಗಳು ಒದಗಿಸಿಕೊಡುತ್ತೇನೆ ಮತ್ತು ರೈತರಿಗೆ ಬೇಕಾಗುವ ಯೋಜನೆಗಳು ಮತ್ತು ಅಭಿವೃದ್ಧಿಗಳು ರೂಪಿಸುತ್ತೇನೆ ನಾಗರಿಕರು ಏನು ಆತಂಕ ಪಡಬೇಕಾಗಿಲ್ಲ ಎಂದು ಶಾಸಕರ ಬಯಕೆ ಇರುತ್ತದೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button