“ಜಗದ ಜೀವ ಕೋಟಿಗೆ ಹಸಿರೇ ಉಸಿರು”…..

ಜಗದ 84 ಲಕ್ಷ ಕೋಟಿ ಜೀವರಾಶಿಗಳ
ಮಾನವ ಮನುಕುಲ ಶ್ರೇಷ್ಠ
ಸಕಲ ಜೀವಿಗಳ ಲೇಸ ಸುಗುಣ
ಭಾರತಾಂಬೆಯ ಮಡಿಲ ಹೆತ್ತವರ ಕೃಪೆ
ಸಿಹಿ ಕ್ಷಣಗಳ ಬಾಲ್ಯದ ಆಟ ಚೆಲ್ಲಾಟ
ಮರೆಯದ ಕ್ಷಣ ಬಾಳಿನ ಬೆಳಕು
ಅಕ್ಷರದವ್ವನ ಜ್ಞಾನ ದೀವಿಗೆಯ
ಅಭ್ಯಾಸ ಶ್ರಮದಿ ನುರಿತು ಶಿಕ್ಷಣ
ಬದುಕು ಕಟ್ಟುವ ದಾರಿ ತಿರುಗಾಟ
ಶ್ರಮದ ಫಲ ನಿತ್ಯ ಕಾಯಕ
ಪ್ರಾಮಾಣೆಕತೆ ಜೀವನಕ್ಕೊಂದು
ಊರುಗೋಲು ಸಮಯ ಸಪ್ತಪದಿ ಬಾಳ
ಸಂಗಾತಿಜೋತೆ ನಿತ್ಯ ಪಯಣ
ಹೆಜ್ಜೆ ಗೆಜ್ಜೆ ನಾದ ಲಹರಿ ಸುನಾದ
ಬದುಕಿನ ಬಂಡಿಗೆ ಸತಿ ಸ್ಪೂರ್ತಿ
ವಂಶವೃಕ್ಷ ಸಂತಾನ ಪುತ್ರ ಪುತ್ರಿ
ಲಾಲನೆ ಪಾಲನೆ ಮಾನವ ಕುಲ
ಜಗದ ಜೀವ ಕೋಟಿಗೆ ಹಸಿರೇ ಉಸಿರು
ಪೋಷಿಸಿ ಬೆಳೆಸಿದ
ಸಾರ್ಥಕ ಬದುಕು ಬೆಳಕಾಗಿ
ನಿವೃತ್ತಿ ನ್ಯೂವೃತ್ತಿ ಪ್ರವೃತ್ತಿ
ವಿಶ್ರಾಂತ ಜೀವನ ಶೈಲಿ ಬಾಳ
ಹಗಲು ಇರುಳು ಸುಖದುಃಖ
ನೋವು ನಲಿವಿನ ಸಾರ್ಥಕ ಬದುಕು
ನಡೆದು ಬಿಡು ಒಂದು ದಿನ
ಶೂನ್ಯದ ಬೆಳಕಿನೆಡೆಗೆ ಎಲ್ಲ ದೈವ ಲೀಲೆ

-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿಪುರಸ್ಕೃತರು.
ಬಾಗಲಕೋಟೆ