ಬರ ಪೀಡಿತ ತಾಲೂಕ ಎಂದು ಘೋಷಣೆ.ಪೇಪರ್ ಪತ್ರಿಕೆಯಲ್ಲಿ ಇರದೆ ರೈತರಿಗೆ ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡಬೇಕು – ವಿರೂಪಾಕ್ಷಪ್ಪ.ವಕೀಲರು.
ಕೂಡ್ಲಿಗಿ ಸಪ್ಟೆಂಬರ್:25

ಪಟ್ಟಣದಲ್ಲಿ ಸೋಮವಾರ ರಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ತಾಲೂಕು ಸಂಘಟನೆಯಿಂದ ಕೂಡ್ಲಿಗಿಯ ಪ್ರಮುಖ ರಸ್ತೆಗಳ ಮೂಲಕ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೂಡ್ಲಿಗಿ ತಾಲೂಕು ಬರ ಪೀಡಿತ ತಾಲೂಕು ಎಂದು ಘೋಷಣೆ ಸರ್ಕಾರ ಮಾಡಿರುವುದು ಕೇವಲ ಪತ್ರಿಕೆಯಲ್ಲಿ ಇರದೇ ಅತಿ ಶೀಘ್ರವಾಗಿ ರೈತರ ಬೆಳೆ ನಷ್ಟ ಹೊಂದಿದ ರೈತರನ್ನು ಗುರುತಿಸಿ ಸಂಕಷ್ಟಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ,ಮಾನ್ಯ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಮುಖಾಂತರ 500 ಕ್ಕೂ ಹೆಚ್ಚು ರೈತರು ಹಾಗೂ ಕಟ್ಟಡ ಕಾರ್ಮಿಕರು ಭಾಗವಹಿಸಿ ಮನವಿ ಸಲ್ಲಿಸಲಾಯಿತು. ಕೂಡ್ಲಿಗಿ ತಾಲೂಕು ಅತಿ ಹಿಂದುಳಿದ ತಾಲೂಕು ಆಗಿರುವುದರಿಂದ ಈ ತಾಲೂಕಲ್ಲಿ ಮಳೆಯ ಆಧಾರಿತವಾಗಿ ಕೃಷಿಕರು ಮಳೆಯನ್ನು ನಂಬಿ ಬೀಜ ಬಿತ್ತನೆಯನ್ನು ಹೆಚ್ಚಾಗಿ ಮೆಕ್ಕೆಜೋಳ,ಶೇಂಗಾ, ರಾಗಿ, ಜೋಳ ,ಬಿತ್ತನೆ ಮಾಡುವುದರಿಂದ ಈ ಬಾರಿ ಮಳೆ ಸಮಯಕ್ಕೆ ಸರಿಯಾಗಿ ಬಾರದೆ ತಾಲೂಕಿನ ಎಲ್ಲಾ ರೈತಾಪಿ ಕುಟುಂಬಗಳು ಬಿತ್ತನೆ ಮಾಡಿರುವ ಯಾವ ಬೆಳೆಯು ಕೈಗೆ ಸಿಗದೆ ಸಂಪೂರ್ಣವಾಗಿ ನಷ್ಟ ಹೊಂದಿದ್ದಾರೆ ಎಂಬುವುದು ಹೋರಾಟಗಾರರ ಆರೋಪವಾಗಿದೆ, ಭೂಮಿಯನ್ನು ನಂಬಿ ಬಿತ್ತನೆ ಮಾಡಿರುವ ಯಾವ ಬೆಳೆಯು ಹಾಕಿದ ಬಂಡವಾಳವು ಸಿಗದೇ ಮಳೆ ಕೈಕೊಟ್ಟಿರುವುದರಿಂದ ಹೆಚ್ಚಾಗಿ ರೈತರು ಕಡು ಬಡತನದಿಂದ ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ.ಈ ತಾಲೂಕಿನಲ್ಲಿ ಕಾರ್ಮಿಕರಿಗೆ ಕೃಷಿಕರಿಗೆ ಯಾವುದೇ ತರಹದ ಫ್ಯಾಕ್ಟರಿಗಳು ಕಂಪನಿಗಳಂತ ಕೈಗಾರಿಕೆಗಳು ಇಲ್ಲದೆ ದಿನಗೂಲಿ ಸಹ ಸಿಗದಂತೆ ಹೆಚ್ಚಾಗಿ ವಲಸೆ ಹೋಗುವ ಪ್ರಸಂಗವು ರೈತರಿಗೆ ಹಾಗೂ ಕಾರ್ಮಿಕರಿಗೆ ಎದುರಾಗಿದೆ,

ಇದನ್ನು ಅರಿತ ಕಾರ್ಮಿಕ ಮುಖಂಡರುಗಳು ನೂರಾರು ಜನಸಂಖ್ಯೆಯ ಮೂಲಕ ಸರ್ಕಾರಕ್ಕೆ ಗಮನ ಹರಿಸುವಂತೆ ಮನವಿ ಪತ್ರ ಕೊಡುವುದರೊಂದಿಗೆ ರೈತರ ಕೆಲವು ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸುವಂತೆ ಕಾರ್ಮಿಕ ಮುಖಂಡರಾದ ವಿರೂಪಾಕ್ಷಪ್ಪ ವಕೀಲರು, ಹಾಗೂ ಕಾನೂನು ಸಲಹೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ ಹಾಗೂ ಕಾರ್ಮಿಕರ ಬೇಡಿಕೆಗಳು:- ಶೀಘ್ರವೇ ಗೋಶಾಲೆಗಳನ್ನು ತೆರೆಯಬೇಕು *ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಗಳಿಗೆ ಹೆಚ್ಚಿಸಬೇಕು.* ಬೆಳೆ ನಷ್ಟಕ್ಕೊಳಗಾದ ರೈತರಿಗೆ ಬೆಳೆ ಪರಿಹಾರ ಘೋಷಣೆ ಮಾಡಲೇಬೇಕು* ಇಂದಿನ ಸರ್ಕಾರ ಜಾರಿಗೆ ತಂದ ಕೆರೆ ನೀರು ತುಂಬಿಸುವ ಕಾರ್ಯಕ್ರಮವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು.* ಶೀಘ್ರದಲ್ಲೇ ಬರ ಪೀಡಿತ ತಾಲೂಕಿನ ಟಾಸ್ಕಪೋರ್ಟ್ ಕಮಿಟಿ ಕೆಲಸ ನಿರ್ವಹಿಸಲು ಆದೇಶ ನೀಡಬೇಕು ಎಂದು ಕೆಲವು ಬೇಡಿಕೆಗಳನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ನ್ಯಾಯ ಸಿಗುವಂತೆ ಘೋಷಣೆಗಳನ್ನು ಕೂಗಿದರು, ಈ ಸಂದರ್ಭದಲ್ಲಿ ತಾಲೂಕು ಸಿಐಟಿಯು ಜಿಲ್ಲಾ ಖಂಜಾಚಿ ಗುನ್ನಳ್ಳಿ ರಾಘವೇಂದ್ರ, ತಾಲೂಕು ಅಧ್ಯಕ್ಷರಾದ ಕರಿಯಣ್ಣ,ರಾಮಣ್ಣ, ಭಾಗ್ಯಮ್ಮ,ಕಾಪಾಳಮ್ಮ, ಮರುಳುಸಿದ್ದ ಚಾರಿ,ಶ್ರೀಧರ್ ಆಚಾರಿ, ಮಾರೇಶ್, ಸ್ವಾಮಿ, ರಾಘವೇಂದ್ರ, ಹಸೇನಿ, ಮೋಹದ್ ಸಾಬ್ ಬಂಗಾರಪ್ಪ, ಬೋರಯ್ಯ ,ಇನ್ನೂ ಇತರರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ