ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ, ಬಿ.ಎನ್ ಜಗದೀಶ್ – ಅವರ ಹುಟ್ಟು ಹಬ್ಬದ ಆಚರಣೆ.
ದೇವರ ಹಿಪ್ಪರಗಿ ಮಾ.05

ದೇವರ ಹಿಪ್ಪರಗಿ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀಯುತ ಡಾ, ಬಿ.ಎನ್ ಜಗದೀಶ್ ಅಣ್ಣ ನವರ ಹುಟ್ಟು ಹಬ್ಬದ ನಿಮಿತ್ತವಾಗಿ ತಾಲೂಕಾ ಆಸ್ಪತ್ರೆಯ ಸಿಬ್ಬಂದಿಗಳಿಗೂ ಹಾಗೂ ರೋಗಿಗಳಿಗೂ ಹಣ್ಣು ಹಂಪಲ, ಬಿಸ್ಗೆಟಗಳನ್ನು ವಿತರಿಸಿ ಕೇಕ್ ಕಟ್ ಮಾಡಿ ಶುಭ ಕೋರಿ ಆಚರಿಸಲಾಯಿತು.


ಇದೇ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ವಕ್ತಾರರು. ಚನ್ನಪ್ಪಗೌಡ ಎಸ್, ಬಿರಾದಾರ, ಹಾಗೂ ದೇವರ ಹಿಪ್ಪರಗಿ ತಾಲೂಕಾಧ್ಯಕ್ಷರಾದ ಸಿದ್ರಾಮಪ್ಪ ಅವಟಿ, ಮತ್ತು ರಮೇಶ ರಾಠೋಡ, ಸಿಂದಗಿ ತಾಲೂಕಾ ಕಾರ್ಯಧ್ಯಕ್ಷರು, ಹಾಗೂ ಜಯ ಕರ್ನಾಟಕ ಸಂಘಟನೆ ದೇವರ ಹಿಪ್ಪರಗಿ ತಾಲೂಕಾ ಘಟಕದ ಪದಾಧಿಕಾರಿಗಳಾದ ಭೀಮನಗೌಡ ಪಾಟೀಲ, ಪರಮು ರಾಠೋಡ, ಬಸವರಾಜ ಇಂಗಳಗಿ, ಅರ್ಜುನ ಧರಿ, ಬಾಬು ರಾಠೋಡ, ಕೆರುಟಗಿ, ಸಂಗನಗೌಡ ಬಿರಾದಾರ, ಹಾಗೂ ದೇವರ ಹಿಪ್ಪರಗಿ ಪಿ.ಎಚ್.ಸಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ