ಹುನಗುಂದದಲ್ಲಿ ಸೆ.30 ರಂದು ಸರ್ಕಾರಿ ನೌಕರರ ಸಹಕಾರಿ ಬ್ಯಾಂಕಿನ 11 ನೆಯ ಶಾಖೆ ಉದ್ಘಾಟನೆ.

ಹುನಗುಂದ ಸಪ್ಟೆಂಬರ್.28

ಅಖಂಡ ವಿಜಯಪುರ ಜಿಲ್ಲೆಯ ಇದ್ದಾಗ ಸ್ಥಾಪನೆಯಾಗಿ 114 ವರ್ಷಗಳನ್ನು ಪೂರೈಸಿದ ವಿಜಯಪುರದ ಸರಕಾರಿ ನೌಕರರ ಸಹಕಾರಿ ಬ್ಯಾಂಕ್‌ನ 11 ಶಾಖೆಯನ್ನು ಹುನಗುಂದ ಪಟ್ಟಣದಲ್ಲಿ ಸೆ.3೦ ರಂದು ರವಿವಾರ ಬೆಳಗ್ಗೆ 11 ಗಂಟೆಗೆ ಸಿದ್ದಪ್ಪ ಕಡಪಟ್ಟಿ ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟನೆಯಾಗಲಿದೆ ಎಂದು ಸರಕಾರಿ ನೌಕರರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಶಾಂತ ಎಸ್.ಚನಗೊಂಡ ಹೇಳಿದರು.ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಖಂಡ ವಿಜಯಪುರ ಜಿಲ್ಲೆ ಇದ್ದಾಗ 19೦9 ರಲ್ಲಿ 1೦೦೦ ರೂ ಬಂಡಾವಳದೊಂದಿಗೆ ಸರಕಾರಿ ನೌಕರರ ಅನುಕೂಲಕಕ್ಕಾಗಿ ಪ್ರಾರಂಭವಾದ ಈ ಸಹಕಾರಿ ಬ್ಯಾಂಕ್ ಸಧ್ಯ 5೦೦ ಕೋಟಿ ದುಡಿಯುವ ಬಂಡಾವಳವನ್ನು ಹೊಂದಿದೆ.ಸಧ್ಯ 12 ಶಾಖೆಯನ್ನು ಹೊಂದಿದೆ 1995 ರಲ್ಲಿ ಜಮಖಂಡಿಯಲ್ಲಿ ಮೊದಲ ಶಾಖೆಯನ್ನು ಆರಂಭಿಸಲಾಯಿತು.2೦16 ರಲ್ಲಿ ಮತ್ತೇ ಇಂಡಿ.ಮುದ್ದೇಬಿಹಾಳ,ಸಿಂದಗಿ,ಬಾಗಲಕೋಟಿ ಮತ್ತು ಬಸವನ ಬಾಗೇವಾಡಿಯಲ್ಲಿ ಪ್ರಾರಂಭಿಸಲಾಯಿತು.ನಂತರ ಮತ್ತೇ ಚಡಚಣ,ಬನಹಟ್ಟಿ,ಬದಾಮಿ,ಹುನಗುಂದ ಮತ್ತು ತಾಳಿಕೋಟಿಯಲ್ಲಿ ಆರಂಭಿಸಲು ಆರ್.ಬಿ.ಆಯ್‌ನಿಂದ ಅನುಮತಿ ದೊರತಿದು.2೦22-23 ನೆಯ ಸಾಲಿನಲ್ಲಿ 4೦೦ ಕೋಟಿ ರೂ ಠೇವಣೆ ಹಾಗೂ 452 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ.1.38 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ.ಸುಮಾರು 2೦ ಸಾವಿರ ಸರಕಾರಿ ನೌಕರರಿಗೆ ಸುಲಭ ಸಾಲವನ್ನು ವಿತರಿಸಲಾಗಿದೆ ಹಿರಿಯ ನಾಗರಿಕರಿಗೆ,ಸೈನಿಕರಿಗೆ ಮತ್ತು ಮಾಜಿ ಸೈನಿಕರಿಗೆ ೦.5೦% ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗಿದೆ.ಸಧ್ಯ ಹುನಗುಂದದಲ್ಲಿ ಬ್ಯಾಂಕಿನ 11 ನೆಯ ಶಾಖೆಯನ್ನು ಸೆ.3೦ ರಂದು ಆರಂಭಸಲಾಗುವುದು ಎಂದರು.ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಅಲ್ಲಾಭಕ್ಷ ವಾಲಿಕಾರ,ಅರವಿಂದ ಹೂಗಾರ,ಅರ್ಜುನ ಲಮಾಣಿ,ಸದಾಶಿವ ದಳವಾಯಿ,ಪರಶುರಾಮ ಪಮ್ಮಾರ,ಮುತ್ತಣ್ಣ ಬೀಳಗಿ,ಮುತ್ತಣ್ಣ ವಡವಡಗಿ,ಡಿ.ಎಂ.ಬಾಗವಾನ,ಎಂ.ವಿ.ಪರ್ವತಿ ಸೇರಿದಂತೆ ಅನೇಕ ಸರಕಾರಿ ನೌಕರರು ಉಪಸ್ಥಿತರಿದ್ದರು.ಬಾಕ್ಸ್ ಸುದ್ದಿ-ಸರಕಾರಿ ನೌಕರರ ಸಹಕಾರಿ ಬ್ಯಾಂಕಿನ 11 ನೆಯ ಶಾಖೆ ಹುನಗುಂದ ಪಟ್ಟಣದ ಸೆ.3೦ ರಂದು ರವಿವಾರ ಬೆಳಗ್ಗೆ 11 ಗಂಟೆಗೆ ಸಿದ್ದಪ್ಪ ಕಡಪಟ್ಟಿ ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಚಿತ್ತರಗಿ ಸಂಸ್ಥಾನ ಮಠ ಇಳಕಲ್ಲದ ಗುರುಮಹಾಂತ ಶ್ರೀಗಳು ವಹಿಸಿಕೊಳ್ಳುವರು.ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಲಿದ್ದಾರೆ.ಬಾಗಲಕೋಟಿಯ ಸಹಕಾರಿ ಉಪನಿಬಂಧಕ ಎಂ.ಬಿ,ಪೂಜಾರಿ ಜ್ಯೋತಿ ಬೆಳಗಿಸಲಿದ್ದಾರೆ,ಡಿವೈಎಸ್‌ಪಿ ಪ್ರಭುಗೌಡ ಕಿರದಳ್ಳಿ,ಮಲ್ಲಿಕಾರ್ಜುನ ಬಳ್ಳಾರಿ,ಚಂದ್ರಶೇಖರ ನುಗ್ಗಿ ಬ್ಯಾಂಕ್ ಸೌಲಭ್ಯಗಳನ್ನು ಉದ್ಘಾಟಿಸುವರು,ಬ್ಯಾಂಕಿನ ಅಧ್ಯಕ್ಷ ಪ್ರಶಾಂತ ಚನಗೊಂಡ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವರು.ತಹಶೀಲ್ದಾರ ನಿಂಗಪ್ಪ ಬಿರಾದಾರ,ಸಿಪಿಐ ಸುನೀಲ ಸವದಿ,ಇಓ ಮುರಳೀಧರ ದೇಶಪಾಂಡೆ,ಬಿಇಒ ಜಾಸ್ಮಿನ ಕಿಲ್ಲೇದಾರ,ಬಸವರಾಜ ಟಕ್ಕಳಕಿ,ಸಚಿನ ಮಾಚಕನೂರ,ಮಂಜುನಾಥ ಸಿಂಗರಡ್ಡಿ,ಡಾ.ಎಸ್.ಎಸ್.ಅಂಗಡಿ,ಡಾ.ಮಂಜುನಾಥ ಅಂಕೋಲಕರ,ಗುರುಲಿಂಗಪ್ಪ ಭದ್ರಣ್ಣನವರ,ವಿ.ಎಚ್.ಹೂಲಗೇರಿ,ಎಂ.ಎಂ.ಪಾಟೀಲ,ರಾಘವೇಂದ್ರ ಪುರೋಹಿತ,ಅನ್ನಪೂರ್ಣ ಕುಬಕಡ್ಡಿ,ಪಂಚಾಕ್ಷರಯ್ಯ ಪುರಾಣಿಕಮಠ,ಎ.ಡಿ.ಬಬಲಾದಿ,ಜಿ.ಎನ್.ಕ್ಯಾಡ್,ಆರ್.ಎಂ.ಸೊನ್ನ,ಎಂ.ಎಚ್.ಕಟ್ಟಿಮನಿ,ಎಸ್.ಡಿ.ಬೇನಾಳ,ಎಸ್.ಡಿ.ಹಂಡಿ,ಪಿ.ಎಸ್.ಪಮ್ಮಾರ,ಸಿದ್ದು ಶೀಲವಂತರ,ಆರ್.ಎಂ.ಮಾಸರಡ್ಡಿ,ಎಂ.ಎಸ್.ಬೀಳಗಿ,ಸಿ.ಎಸ್.ಚೆಟ್ಟೇರ,ಜಿ.ಎಸ್.ಅಡವ ಸೇರಿದಂತೆ ಅನೇಕರು ಅತಿಥಿಗಳಾಗಿ ಆಗಮಿಸಲಿದ್ದಾರೆ.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button