ಲೇಖಿಲಗೆರೆ ರಾಮಸಾಗರ ಕೋಡಿಹಳ್ಳಿ ಗ್ರಾಮಗಳ ತುಂಬಿದಂಥ ಕೆರೆಗಳಿಗೆ – ಬಾಗಿನ ಅರ್ಪಿಸಿದ ಶಾಸಕರು.
ಲೇಖಿಲಗೆರೆ ನ.04

ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ಶಾಸಕರು ಕೋಡಿಹಳ್ಳಿ, ಲೇಖಿಲಗೆರೆ, ರಾಮಸಾಗರ, ಗುಂತ ಕೋಲಮ್ಮನಹಳ್ಳಿ ಕೆರೆಗಳಿಗೆ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆ ಗ್ರಾಮದ ರೈತರೆಲ್ಲ ಎನ್.ವೈ ಗೋಪಾಲಕೃಷ್ಣ ಶಾಸಕರನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮಂತ ಶಾಸಕರು ನಮಗೆ ಬೇಕಾಗಿರುತ್ತದೆ ಬರೀ ಸುಳ್ಳು ಹೇಳಿ ಹೋಗುವಂತ ಶಾಸಕರ ನಾವು ನೋಡಿದ್ದೇವೆ. ಆದರೆ ಈಗ ನಮಗೆ ಹಿರಿಯರಾದ ನಮ್ಮ ಸ್ಥಳೀಯ ಶಾಸಕರಾದ ಎನ್.ವೈ ಗೋಪಾಲಕೃಷ್ಣ ಶಾಸಕರು ಬಹಳ ಒಳ್ಳೆಯವರು ನೇರ ಮಾತುಗಳು ಎಲ್ಲಾ ಸಾರ್ವಜನಿಕರಿಗೆ ಬೇಕಾಗುವ ಯೋಜನೆಗಳು ಮಾತ್ರ ರೂಪಿಸುವಂತಹ ಶಾಸಕರು ಹಿರೇಹಳ್ಳಿ ನಾಯಕನಹಟ್ಟಿ ಆ ಭಾಗದ ರೈತರೆಲ್ಲ ಶಾಸಕರ ಮೇಲೆ ಬಹಳ ಅಭಿಮಾನವಿರುತ್ತದೆ ಎಂದು ಅಲ್ಲಿನ ಸುತ್ತಮುತ್ತಲ ಗ್ರಾಮದ ರೈತರೆಲ್ಲ ಹಾಗೂ ಸ್ಥಳೀಯ ಮುಖಂಡರುಗಳು ಚುನಾಯಿತ ಪ್ರತಿನಿಧಿಗಳು ಕಾರ್ಯಕರ್ತರು ಅಭಿಮಾನಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು. ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು

