ಆಟೋ ಚಾಲಕರಿಗೆ ಕಾನೂನು ಅರಿವು ಮತ್ತು ಸುರಕ್ಷತಾ ಬಗ್ಗೆ ಜಾಗೃತಿ — ಪಿಎಸ್ಐ ಧನಂಜಯ್.
ಕೂಡ್ಲಿಗಿ ಜುಲೈ.17

ವಿಜಯ ನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಇಂದು ಚಿದಂಬರೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಫಡೆರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್ ವತಿಯಿಂದ ಆಟೋ ಚಾಲಕರಿಗೆ ಕಾನೂನು ಅರಿವು ಹಾಗೂ ರಸ್ತೆ ಸುರಕ್ಷತಾ ಬಗ್ಗೆ ಜಾಗೃತಿ ಕಾರ್ಯಗಾರದಲ್ಲಿ ಭಾಗವಹಿಸಿ ಕೂಡ್ಲಿಗಿ ಪಿಎಸ್ಐ ಧನಂಜಯ್ ಇವರು ಮಾತಾನಾಡಿದರು. ಆಟೋಗಳಿಗೆ ನೋಂದಣಿ ಇಲ್ಲದೆ ಹಾಗೂ ಚಾಲಕರು ಚಾಲನಾ ಪರವಾನಿಗೆ ಇಲ್ಲದೆ ಓಡಿಸುವುದು ಕಾನೂನಿನ ಅಡಿಯಲ್ಲಿ ಅಪರಾಧವಾಗುತ್ತದೆ. ಆದ್ದರಿಂದ ತಮ್ಮ ವಾಹನಗಳ ಸೂಕ್ತ ದಾಖಲೆಗಳನ್ನು ಹೊಂದಿರಬೇಕು, ವಾಹನದ ಪರವಾನಗಿ, ಚಾಲಕನ ಪರವಾನಗಿ ಹಾಗೂ ವಿಮೆಯನ್ನು ಮಾಡಿಸಿ ಕೊಂಡು ಆಟೋಗಳನ್ನ ಓಡಿಸಬೇಕು.ಇದರಿಂದ ನಿಮಗೂ ಸುರಕ್ಷೆ ಹಾಗೂ ನೀವುಗಳು ಸುರಕ್ಷತೆ ಜತೆ ಪ್ರಯಾಣಿಕರು ಸಹ ಸುರಕ್ಷಿತರಾಗಿರುತ್ತಾರೆ.

ಆಕಸ್ಮಿಕವಾಗಿ ಅಪಘಾತ ಸಂಭಂದಿಸಿದಲ್ಲಿ ವಿಮೆ ಇದ್ದರೆ, ಅದನ್ನು ಕ್ಲೈಮ್ ಮಾಡಿ ಪರಿಹಾರ ನೀಡಲು ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ನೀವೇ ಭರಿಸಬೇಕಾಗುತ್ತದೆ. ಪ್ರತಿ ಆಟೋ ಚಾಲಕರ ದುಡಿಮೆ ತಮ್ಮ ಕುಟುಂಬ ಸಾಗಿಸಲು ಸಾಲುವುದಿಲ್ಲ ಆ ಕಾರಣಕ್ಕೆ ಕಡ್ಡಾಯವಾಗಿ ನಿಮ್ಮ ವಾಹನಗಳನ್ನು ಸೂಕ್ತ ದಾಖಲೆಗಳೊಂದಿಗೆ ರಸ್ತೆ ಮೇಲೆ ಓಡಿಸಬೇಕು ಎಂದರು. ಪ್ರಯಾಣಿಕರನ್ನ ಕರೆದೊಯ್ಯುವಾಗ ಅವರ ಚಲನ,ವಲನದ ಬಗ್ಗೆ ಮಾಹಿತಿ ಪಡೆದು ಕರೆದುಕೊಂಡು ಹೋಗಿ ಒಂದು ವೇಳೆ ಅನುಮಾನಸ್ಪದ ವ್ಯಕ್ತಿಗಳಿದ್ದರೆ ನಮಗೆ ಮಾಹಿತಿ ಕೊಡಿ ಇಲ್ಲವಾದಲ್ಲಿ ನೀವು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು. ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಮಿತಿಮೀರಿ ಬ್ಯಾಗ್ ಹಾಗೂ ಮಕ್ಕಳನ್ನು ಕರೆದುಕೊಂಡು ಹೋಗದಿರಿ ಅಲ್ಲದ ರಸ್ತೆಗಳಲ್ಲಿ ಸಂಚಾರ ಮಾಡುವಾಗ ಸಹ ಸವಾರರಿಗೆ ಅನುಕೂಲ ಕಲ್ಪಿಸಿಕೊಡಿ,ಮಿತಿ ಮೀರಿದ ವೇಗ ಒಳ್ಳೆಯದಲ್ಲ ಎಂದು ತಿಳಿಸಿದ ಅವರು, ಪ್ರಯಾಣಿಕರ ಜತೆ ಉತ್ತಮ ಭಾಂಧವ್ಯ ಹೊಂದಿ ಅವರ ನಂಬಿಕೆ ಜತೆ ಅವರನ್ನ ಸುರಕ್ಷಿತವಾದ ಜಾಗ ತಲುಪಿಸುವಂತೆ ಕಿವಿಮಾತು ಹೇಳಿದರು.

ಒಟ್ಟಾರೆ ಆಟೋ ಚಾಲಕರು ಕಾನೂನುಗಳನ್ನು ಗೌರವಿಸಿ ಇದರಿಂದ ಪೋಲಿಸರ ಕರ್ತವ್ಯಕ್ಕೂ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಕಾನೂನು ಸಲಹೆಗಾರ ಹಾಗೂ ವಕೀಲ ಸಿ.ವಿರುಪಾಕ್ಷಪ್ಪ ವಾಹನದ ಹಾಗೂ ಚಾಲಕರ ಪರವಾನಗಿ ಇಲ್ಲದೆ ಇದ್ದರೆ ಕಾನೂನಿನ ತೊಂದರೆ ಬಗ್ಗೆ ಮಾಹಿತಿ ನೀಡಿದರು.ಆಟೋ ಯೂನಿಯನ್ ಜಿಲ್ಲಾಧ್ಯಕ್ಷ ಸಂತೋಷ ಕಲ್ಮಠ, ಕಜಾಪ ಅಧ್ಯಕ್ಷ ಕೆ.ಎಂ.ವೀರೇಶ್, ಕಸಾಪ ಅಧ್ಯಕ್ಷ ವೀರೇಶ್ ಅಂಗಡಿ ಮಾತಾನಾಡಿದರು. ಆಟೋ ಯೂನಿಯನ್ ಜಿಲ್ಲಾ ಉಪಾಧ್ಯಕ್ಷ ಹುಸೇನ್, ತಾಲೂಕು ಅಧ್ಯಕ್ಷ ಮಂಜು ಮಯೂರ, ಕಾರ್ಯದರ್ಶಿ ಜೆ. ಕುಮಾರಸ್ವಾಮಿ, ಯೂನಿಯನ್ ಸದಸ್ಯರಾದ ನಲ್ಲಮುತ್ತಿ ದುರುಗೇಶ್, ಇಸ್ಮಾಯಿಲ್, ರಮೇಶ್, ಮಲ್ಲಿಕಾರ್ಜುನ, ಚೌಡಪ್ಪ, ಗಜನಾಗ, ಆಟೋ ರಾಜ, ಗೋವಿಂದಪ್ಪ, ಒಳಗೊಂಡಂತೆ ಅನೇಕರು ಇದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ