ಸಾಮಾಜಿಕ ಜಾಲ ತಾಣಗಳ ಗೀಳು ಬಿಟ್ಟು ಯುವಕರು ಪುಸ್ತಕ ಓದುವ ಹವ್ಯಾಸ ಬೆಳೆಸಿ ಕೊಳ್ಳಬೇಕು – ಎಸ್.ಹೆಚ್ ಶಫಿ ಉಲ್ಲಾ ಅಭಿಮತ.

ಹಿರಿಯೂರು ಅ.29

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನೆಹರು ಮೈದಾನದಲ್ಲಿ ಇರುವ ರೋಟರಿ ಭವನದಲ್ಲಿ ಇಂದು ಸಿ ವಿ ಜಿ ಪಬ್ಲಿಕೇಶನ್, ಬೆಂಗಳೂರು ಹಾಗೂ ಚಿಮ್ಮಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ ಇವರ ಸಹಯೋಗದಲ್ಲಿ ತೇಜಸ್ ಇಂಡಿಯಾ ಪ್ರಕಟಿಸಿರುವ ಎಚ್.ಎಸ್. ಶಫಿ ಉಲ್ಲಾ ರವರ “ಕಣ್ಮರೆ” ಕೃತಿಯನ್ನು ಖ್ಯಾತ ಜಾನಪದ ವಿದ್ವಾಂಸರಾದ ಡಾ, ಮೀರಾ ಸಾಬೀಹಳ್ಳಿ ಶಿವಣ್ಣರವರು ಲೋಕಾರ್ಪಣೆ ಮಾಡಿ ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಬರೆಯುವ ಕೌಶಲ್ಯ ಆಸಕ್ತಿಯನ್ನು ಬೆಳಸಿಕೊಂಡು ಈ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಸಲಹೆ ನೀಡಿದರು.

ನಂತರ ಖ್ಯಾತ ವಕೀಲರು ಹಾಗೂ ಗೌರವ ಅಧ್ಯಕರು ಆದ ಶ್ರೀಯುತ ಬಿ.ಕೆ ರೆಹಮತ್ ಉಲ್ಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ರವಿ ಕಾಣದ್ದನ್ನು ಕವಿ ಕಂಡ” ಎಂಬಂತೆ ಎಲ್ಲಿ ಪ್ರೀತಿ, ವಿಶ್ವಾಸ ಗೌರವ ಬಾಂಧವ್ಯ ಬೆಸೆಯುವ ಸಮಾನ ಶುದ್ಧ ಮನಸ್ಸು ಇರುತ್ತದೋ ಅಲ್ಲಿ ನಾವು ಏನಾದರೂ ಸಾಧಿಸಬಹುದು ಇಲ್ಲಿ ತಮ್ಮ ಅಭಿಪ್ರಾಯ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಯಾವ ಜಾತಿ ಧರ್ಮಗಳನ್ನು ಲೆಕ್ಕಿಸದೆ ಪುಸ್ತಕ ರೂಪದಲ್ಲಿ ಸಮಾಜ ಸೇವೆಯನ್ನು ಮಾಡಬಹುದು, ಅಲ್ಲದೆ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬಹುದು ಎಂದು ತಿಳಿಸಿದರು.

ಈ ಕಣ್ಮರೆ ಕೃತಿಯನ್ನು ಕುರಿತು ಕಲಾವಿದರು ಹಾಗೂ ವಿಮರ್ಶಕರು ಆದ ಜಬಿವುಲ್ಲಾ ಎಂ.ಅಸದ್ ರವರು ಪುಸ್ತಕದ ಸಾರಾಂಶವನ್ನು ಮತ್ತು ಎಲ್ಲ ಪುಟಗಳನ್ನು ಸಂಕ್ಷಿಪ್ತವಾಗಿ ವಿಮರ್ಶಿಸಿದರು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀಮತಿ ದಯಾ ಪುತ್ತೊರ್ಕರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕವಿಗಳು ಬರೆಯುವ ಪುಸ್ತಕಗಳಿಗೆ ಸರಿಯಾದ ಮನ್ನಣೆ ದೊರೆಯುತ್ತಿಲ್ಲ ಹಾಗಾಗಿ ಇದರ ಬಗ್ಗೆ ರಾಜ್ಯ ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗಳು ಗಮನ ಹರಿಸಬೇಕು, ಅಲ್ಲದೆ ಸಾಹಿತ್ಯ ಸಮ್ಮೇಳನಗಳ ಮೂಲಕ ಹಾಗೂ ಕಥಾ ಕಮ್ಮಟ ಗಳ ಮೂಲಕ ರಾಜ್ಯದ, ಜಿಲ್ಲೆಯ ತಾಲ್ಲೂಕುಗಳ , ಗ್ರಾಮೀಣ ಯುವ ಬರಹಗಾರರು ಹಾಗೂ ಕವಿಗಳಿಗೆ, ಸಾಹಿತಿಗಳಿಗೆ ಪ್ರೋತ್ಸಾಹಿಸುವುದು ಬಹು ಮುಖ್ಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಕಾರ್ಯಮದಲ್ಲಿ ಲೇಖಕರು ಮತ್ತು ಅನುವಾದಕರು ಆದ ಪ್ರೊ, ಎಂ.ಜಿ ರಂಗಸ್ವಾಮಿ ರವರು ಮಾತನಾಡಿ ರಾಜ್ಯ ಸರ್ಕಾರ ಎಲ್ಲ ಯುವಕರಿಗೆ ಮತ್ತು ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕು ಅಲ್ಲದೆ ಯಾವುದೇ ಕವಿಗಳು ಜೀವನದಲ್ಲಿ ನೊಂದು ಬೆಂದವರ, ದೀನ ದಲಿತರ, ಸೋತವರ ಬಗ್ಗೆ ಹೆಚ್ಚು ಹೆಚ್ಚು ಕವಿತೆಗಳನ್ನು ರಚಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದು ತಿಳಿಸಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಅಧ್ಯಕ್ಷರು ಮತ್ತು ಕಣ್ಮರೆ ಕೃತಿಯ ಲೇಖಕರು ಆದ ಏಚ್.ಎಸ್ ಶಫಿ ಉಲ್ಲಾ ರವರು ಮಾತನಾಡಿ ಯಾವುದೇ ಒಬ್ಬ ಕವಿಯ ಒಂದು ಕವನ ಸಂಕಲನ ಲೋಕಾರ್ಪಣೆ ಆಗಿದೆ ಎಂದರೆ ಹಿಂದೆ ಅದೆಷ್ಟೋ ವರ್ಷಗಳ ಕಷ್ಟ ನೋವು ನಲಿವು ದುಃಖ ದುಮ್ಮಾನಗಳನ್ನು ದಾಟಿ, ಹಗಲು ರಾತ್ರಿ ಎನ್ನದೆ ಶ್ರಮ ವಹಿಸಿ ಬರೆದಿರುತ್ತಾರೆ ಎಲ್ಲರೂ ಅದನ್ನು ಕೊಂಡು ಓದಿದಾಗ ಮಾತ್ರ ಅವರ ಶ್ರಮ ಸಾರ್ಥಕವಾಗುತ್ತದೆ ಎಂದು ಅವರ ಹಿಂದಿನ ಕಷ್ಟ ಕಾರ್ಪಣ್ಯಗಳನ್ನು ನೆನೆದು ಭಾವುಕರಾದರು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಯುವಕರು ಸಾಮಾಜಿಕ ಜಾಲತಾಣಗಳ ಗೀಳಿಗೆ ಬಿದ್ದು ತಮ್ಮ ಮುಂದಿನ ಅಮೂಲ್ಯ ಜೀವನ ಮತ್ತು ಭವಿಷ್ಯವನ್ನು ಹಾಳು ಮಾಡಿ ಕೊಳ್ಳುತ್ತಿರುವುದು ದುಃಖಕರ ಸಂಗತಿ ಹಾಗಾಗಿ ಜೀವನದಲ್ಲಿ ಹಸಿವು ಅವಮಾನ ಸೋಲು ಮತ್ತು ತಿರಸ್ಕಾರ ಕಳಿಸುವಷ್ಟು ಪಾಠ ಯಾವ ವಿಶ್ವ ವಿದ್ಯಾನಿಲಯವು ಕಲಿಸುವುದಿಲ್ಲ , ಒಂದು ಉತ್ತಮ ಪುಸ್ತಕವು ನೂರು ಜನ ಸ್ನೇಹಿತರಿಗೆ ಸಮ ಹಾಗಾಗಿ ಯುವಕರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಕೊಂಡು ಓದುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ನಮ್ಮ ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ಸಂಸ್ಕೃತಿ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಶೋಭಾ ಮಲ್ಲಿಕಾರ್ಜುನ್, ಉಷಾರಾಣಿ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಶಿವಮೂರ್ತಿ.ಟಿ ಕೋಡಿಹಳ್ಳಿ, ಸಾಹಿತಿ ಶಾರದಾ ಜೈರಾಮ್. ಬಿ, ಸುಮಾ ರಾಜಶೇಖರ್, ಶಿವಕುಮಾರ್, ವಿನಾಯಕ್, ಶಿವಾನಂದ್, ಮುದ್ದುರಾಜ್, ತಿಪ್ಪಮ್ಮ ನಾಗರಾಜ್, ಸತೀಶ್ ಕುಮಾರ್, ಜಲೀಲ್ ಸಾಬ್, ಶಿವರುದ್ರಪ್ಪ, ಮೀರಾ ನಾಡಿಗ್, ಜಯದೇವ್ ಮೂರ್ತಿ, ಗೌರಮ್ಮ, ರಾಜೇಶ್ವರಿ, ಮುದ್ದು ರಾಜ್, ಸಾದತ್,ಬೆಳಕು ಪ್ರಿಯ, ಪ್ರವೀಣ್, ವೀರೇಶ್, ದುರ್ಗಪ್ಪ ದಾಸಣ್ಣನವರ್ ಗೋಕಾಕ್, ಚಳ್ಳಕೆರೆಯ ಕವಯಿತ್ರಿ ಶಬ್ರಿನಾ ಮಹಮದ್ ಅಲಿ, ಶ್ರೀಮತಿ ಪರ್ವೀನ್, ಡಾ, ನವೀನ್ ಸಜ್ಜನ್, ಸಾಹಿತಿಗಳು ಹಾಗೂ ಪತ್ರಕರ್ತರು ಆದ ಕೊರ್ಲುಕುಂಟೆ ತಿಪ್ಪೇಸ್ವಾಮಿ, ಸತ್ಯಪ್ರಭ ವಸಂತ್ ಕುಮಾರ್, ಯತೀಶ್, ಮೆಹಬೂಬ್, ಕೆ.ಟಿ ಶಾಂತಮ್ಮ, ಧನಂಜಯ್, ಪವಿತ್ರಾ, ಅನಿತಾ, ಸುಜಾತ ಪ್ರಾಣೇಶ್, ಮಲ್ಲಿಕಾರ್ಜುನ್, ನಿರ್ಮಲ,ರೇಣುಕಾ,ಸವಿತಾ ಮುದ್ಗಲ್, ಸಾಹಿತಿಗಳು ಆದ ಈ.ರವೀಶ್ ಡಾ, ಡಿ. ಧರಣೇಂದ್ರಯ್ಯ ಬಸವರಾಜ್ ಹರ್ತಿ, ಜಯಪ್ರಕಾಶ್, ಡಾ, ಪ್ರಕಾಶ್, ಕಾದಂಬರಿಕಾರರು ಆದ ರಾಜು.ಎಸ್ ಸೋಲೇನಹಳ್ಳಿ , ಕವಿಗಳಾದ ಕನಕ ಪ್ರೀತೇಶ್ಕವಯಿತ್ರಿ ಸರಸ್ವತಿ ನಾಗರಾಜ್, ಪತ್ರಕರ್ತರಾದ ಆಲೂರು ಹನುಮಂತರಾಯಪ್ಪ , ಪ್ರಕಾಶ್,ಕಿರಣ್ ಮಿರಜ್ಜಕರ್, ಬಸವರಾಜ್ ರವೀಂದ್ರನಾಥ್ ಅಲ್ಲದೆ ಎಲ್ಲ ಸಾಹಿತ್ಯ ಆಸಕ್ತರು,ಕಲಾ ವಿದರು,ಕವಿಗಳು, ಕನ್ನಡಾಭಿಮಾನಿಗಳು ಮುಂತಾದವರು ಉಪಸ್ಥಿತರಿದ್ದರು. ಎಲ್ಲರ ಸಹಕಾರ ದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button