ಶಾಂತಿ ಮತ್ತು ಅಹಿಂಸೆಯ ಮಾರ್ಗಗಳನ್ನು ಅಸ್ತ್ರವಾಗಿಸಿ ಕೊಂಡಿದ್ದ ಗಾಂಧಿಜಿ – ಅಂಚೆ ಕೊಟ್ರೇಶ್.
ಕೂಡ್ಲಿಗಿ ಅಕ್ಟೋಬರ್.2
ಗಾಂಧೀಜಿಯ ಒಂದು ಮಾತು ದೆಹಲಿಯಿಂದ ಹಳ್ಳಿಯವರೆಗೆ ಮಿಂಚಿನಂತೆ ಸಂಚಾರವಾಗುತ್ತಿತ್ತು, ಆ ಮಟ್ಟದ ಸತ್ಯ ಪ್ರಾಮಾಣಿಕತೆ ಒಳಗೊಂಡ ಜನರು ಬಾಯಿಂದ ಬಾಯಿಗೆ ಸುದ್ದಿ ಯನ್ನುಬ್ಬಿಸುತ್ತಿದ್ದರು, ಬ್ರಿಟಿಷರ ವಿರುದ್ಧ ಯಾವುದೇ ಚಳುವಳಿ ನಡೆದರೂ ಅತ್ಯಾಧುನಿಕ ಸಂಪರ್ಕ ಸಾಧನಗಳಿಲ್ಲದ ಕಾಲದಲ್ಲಿ ಗಾಂಧೀಜಿಯು ಆಡಿದ ನುಡಿ ದೇಶದ ತುಂಬೆಲ್ಲಾ ಇರುವ ಸ್ವತಂತ್ರ ವೀರರನ್ನು ಬಡಿದೆಬ್ಬಿಸುತ್ತಿತ್ತು, ಕ್ವಿಟ್ ಇಂಡಿಯಾ ಚಳುವಳಿ, ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿಗಳೇ ಇದಕ್ಕೆ ಸಾಕ್ಷಿ ಎಂದು ಕೂಡ್ಲಿಗಿಯ ಅಂಚೆ ಪಾಲಕ ಅಂಚೆ ಕೊಟ್ರೇಶ್ ಅವರು 154 ನೇ ಗಾಂಧಿ ಜಯಂತಿ ಹಾಗೂ 119ನೇ ಲಾಲ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಅಂಚೆ ಕಚೇರಿಯಲ್ಲಿ ನೆರವೇರಿಸಿ ಮಾತನಾಡಿದರು, ಅಹಿಂಸೆ ಯನ್ನು ಅಸ್ತ್ರ ಮಾಡಿಕೊಂಡು ಸತ್ಯ ಗ್ರಹಗಳನ್ನೇ ಸಿಡಿ ಗುಂಡಾಗಿಸಿ ಚಲೇಜಾವ್ ಚಳುವಳಿಗಳನ್ನು ದೇಶದ ತುಂಬೆಲ್ಲಾ ಹಬ್ಬಿಸಿ ಬ್ರಿಟಿಷರನ್ನು ಭಾರತದಿಂದ ಓಡಿಸಿ ತ್ಯಾಗ ಬಲಿದಾನಗಳ ಮೂಲಕ ಭಾರತಕ್ಕೆ ಸ್ವಾತಂತ್ರ ತಂದುಕೊಟ್ಟ ಸಾಕಷ್ಟು ಮಂದಿ ಮಹನೀಯರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಇದರ ಜೊತೆ ಜೊತೆಯಲಿ ಕೋಟ್ಯಾನು ಕೋಟಿ ಭಾರತೀಯರು ಬ್ರಿಟಿಷರ ಚಿತ್ರ ವಿಚಿತ್ರ ಹಿಂಸೆಗಳನ್ನು ಅನುಭವಿಸಿ ಪ್ರಾಣ ತ್ಯಾಗವನ್ನು ಮಾಡಿದ್ದನ್ನು ಇಲ್ಲಿ ಸ್ಮರಿಸಬೇಕು,
ಸತ್ಯ ಮತ್ತು ಸರಳತೆ, ಪ್ರಾಮಾಣಿಕತೆ ಹಾಗೂ ಆತ್ಮ ವಿಶ್ವಾಸವನ್ನು ಇಂದಿನ ಜನಗಳು ಕಲಿಯಬೇಕು, ಗಾಂಧೀಜಿಯವರ ಬದುಕು ಬರಹಗಳನ್ನು ಓದಬೇಕು, ಗಾಂಧೀಜಿ ಅರ್ಥವಾದರೆ ಅವರ ಸಿದ್ಧಾಂತಗಳು ಅರ್ಥವಾಗುತ್ತವೆ ಮತ್ತು ರೂಢಿಗೊಳ್ಳುತ್ತವೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ಗಾಂಧೀಜಿ ವಿಶ್ವಕ್ಕೆ ಮಾದರಿಯಾದ ಮನುಷ್ಯ, ಅವರ ಅಸಹಕಾರ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿ, ಉಪ್ಪಿನ ಸತ್ಯಾಗ್ರಹ, ಸರಳವಾಗಿ ಕಂಡರೂ ಇದರ ಪ್ರಭಾವಳಿ ದೇಶದ ತುಂಬೆಲ್ಲಾ ಆಗಿದ್ದು ,ಇದರ ತಾಕಲಾಟ ತಾಳಲಾರದೆ ಬ್ರಿಟಿಷರು ಭಾರತದಿಂದ ತೊಲಗಿದ್ದು ಇತಿಹಾಸ, ಇಂಥ ಮಹಾತ್ಮ ಭಾರತದಲ್ಲಿ ಜನಿಸಿದ್ದು, ಇಂಥ ನಾಯಕರ ಜಯಂತಿಯನ್ನು ನಾವು ಆಚರಿಸುವುದೇ ನಮ್ಮೆಲ್ಲರ ಪುಣ್ಯ ಎಂದು ಕೂಡ್ಲಿಗಿ ಉಪ ವಿಭಾಗದ ಅಂಚೆ ನಿರೀಕ್ಷಕರಾದ ರಾಜಪ್ಪ ಬಾರಿಕರ್ ಅವರು ಗಾಂಧೀಜಿ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಗಾಂಧೀಜಿ ಮತ್ತು ಅವರ ತತ್ವ ಸಿದ್ಧಾಂತಗಳು ನಮ್ಮ ದೇಶಕ್ಕೆ ಮಾತ್ರವಲ್ಲದೆ ಸೀಮಿತವಲ್ಲ, ಪ್ರಪಂಚದ ಎಲ್ಲಾ ರಾಷ್ಟ್ರಗಳು ಇಂದು ಗಾಂಧಿಜೀಯನ್ನು ನೆನೆಪು ಮಾಡಿಕೊಳ್ಳಲು ಮುಂದಾಗಿದ್ದಾವೆ.ವಿಶ್ವಕ್ಕೆ ಮಾದರಿಯಾದವರು ಮಹಾತ್ಮ ಗಾಂಧೀಜಿ ಎಂದು ಅಖಿಲ ಭಾರತ ಅಂಚೆ ನೌಕರರ ಸಂಘಗಳ ಹೊಸಪೇಟೆ ವಿಭಾಗದ ಕಾರ್ಯದರ್ಶಿಯಾದ ಸುರೇಶ್ ಕುಮಾರ್ ಎಲ್, ಎಸ್, ಮಾತನಾಡಿದರು,
ಎರಡು ಅರಿವೆಗಳನ್ನು ಹೊದ್ದ ಬಡಕಲು ಶರೀರ ಸೂರ್ಯ ಮುಳುಗದ ಸಾಮ್ರಾಜ್ಯದ ಬ್ರಿಟಿಷರನ್ನು ಎದುರಿಸಿ ಭಾರತ ದೇಶಕ್ಕೆ ಸ್ವತಂತ್ರ ತಂದುಕೊಟ್ಟದ್ದು ನಮ್ಮೆಲ್ಲರ ಸೌಭಾಗ್ಯ ಎಂದು ಹಗರಿಬೊಮ್ಮನಹಳ್ಳಿಯ ಅಂಚೆ ಸಹಾಯಕರಾದ ರಮೇಶ್ ನವಲಿ ಮಾತನಾಡಿದರು, ಸ್ವಚ್ಛ ಭಾರತ ಅಡಿಯಲ್ಲಿ ಪ್ರಕೃತಿಯನ್ನು ಉಳಿಸಬೇಕು ಮತ್ತು ಬೆಳೆಸಬೇಕು ಎನ್ನುವ ಹಿನ್ನೆಲೆಯಲ್ಲಿ ಕೂಡ್ಲಿಗಿ ಅಂಚೆ ಕಚೇರಿಯ ಕಾಂಪೌಂಡಿನ ಒಳಗೆ ಗಿಡಗಳನ್ನು ನೆಟ್ಟು ಗಾಂಧ ಜಯಂತಿಯನ್ನು ಆಚರಿಸಿದರು, ಮೇಲ್ ಓರ್ಸಿಯರ್ ಗಳಾದ ರವಿಕುಮಾರ್ ಹಾಗೂ ಗಂಗಪ್ಪ, ಅಂಚೆ ಪೇದೆಗಳಾದ ಪರಸಪ್ಪ, ಕುರಿ ಚಿಕ್ಕಪ್ಪ, ಮಹಮ್ಮದ್ ರಫೀಕ್, MTS ಗಳಾದ ಅಂಬಿಕಾ, ಸಂಜನಾ, ಗ್ರಾಮೀಣ ಅಂಚೆ ಸೇವಕರಾದ ಹೆಚ್ ಏನ್ ಸಿದ್ದೇಶ್ ಕುಮಾರ್, ಹುಲಿ ರಾಜ, ಚಂದ್ರಶೇಖರ, ಗುರುರಾಜ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ