ಡಾ. ಹೆಚ್.ಸಿ ಮಹಾದೇವಪ್ಪ ಸಮಾಜ ಕಲ್ಯಾಣ ಸಚಿವರನ್ನು ಲೋಕಸಭಾ ಚುನಾವಣೆಗೆ ಸ್ಪರ್ಧಿಸದಂತೆ ಒತ್ತಾಯಿಸಿ ಪ್ರತಿಕಾ ಗೋಷ್ಟಿ ನಡೆಸಲಾಯಿತು.
ಹೊಸಪೇಟೆ ಫೆಬ್ರುವರಿ.7

ದಿನಾಂಕ 7/2/23 ರಂದು ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಶ್ವರ ಸಂಘ (ರಿ.) ಪತ್ರಿಕಾ ಗೋಷ್ಠಿ ಕರ್ನಾಟಕ ಪತ್ರಕರ್ತರ ಸಂಘ (ರಿ) ಕಚೇರಿಯಲ್ಲಿ ನಡೆಸಲಾಯಿತು.ಸೋಮಶೇಖಕ ಬಣ್ಣದಮನೆ ಮಾತನಾಡಿದರುಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ| ಹೆಚ್.ಸಿ.ಮಹಾದೇವಪ್ಪ ನವರು ಈಗಾಗಲೆ ಸರ್ಕಾರದ ಮಹತ್ವಾಕಾಂಕ್ಷೀಯ 5 ಗ್ಯಾರೆಂಟಿ ಯೋಜನಗಳನ್ನು ರೂಪಿಸಿ ಇಡೀ ರಾಜ್ಯದ ಶೋಷಿತ ಸಮುದಾಯಗಳನ್ನು ಮುನ್ನೆಲೆಗೆ ತರುವ ಮತ್ತು ಅವುಗಳನ್ನು ಜಾರಿಗೆ ತಂದು, ಕಾಂಗ್ರೇಸ್ ಪಕ್ಷಕ್ಕೆ ಬಹುದೊಡ್ಡ ಯಶಸ್ಸು ಮತ್ತು ಶಕ್ತಿಯನ್ನು ತಂದು ಕೊಡುವಂತಹ ಕೆಲಸ ಮಾಡಿದ್ದಾರೆ.ವಿಶೇಷವಾಗಿ ಇಂದು ದಲಿತ ಹಿಂದುಳಿದ ಸಮುದಾಯಗಳನ್ನು ರಾಜ್ಯಾದ್ಯಂತ ಒಗ್ಗೂಡಿಸಿ ಅವರಿಗೆ ಅರಿವು, ಸಾಮಾಜಿಕ ನ್ಯಾಯ, ಶೋಷಿತ ಸಮುದಾಯಗಳ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಈ ದಿನ ಮಾನದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ಕೇಂದ್ರ ಸಮಿತಿಗಳು ಇಂತಹ ಮನಸ್ಥಿತಿಯಿಂದ ಹೊರಬರಬೇಕು ಎಂದು ಹೇಳಿದರು.ಟಿ.ವಾಸುದೇವ್ ಮಾತನಾಡಿದರುಈಗಾಗಲೇ ಪಕ್ಷದ ಮೇಲೆ ಕೆಲವು ಅಪಾದನೆಗಳಿವೆ. ಅವೇನೆಂದರೆ ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡವ ಸಂದರ್ಭದಲ್ಲಿ ಖರ್ಗೆರವರನ್ನು ಮುಖ್ಯಮಂತ್ರಿ ಸ್ಥಾನದಿಂದ ತಪ್ಪಿಸುವುದಕ್ಕಾಗಿಯೇ ಅವರನ್ನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಹೇಳಿ ಅವರನ್ನು ರಾಜ್ಯದಿಂದ ಹೊರದಬ್ಬಿದರು ಎನ್ನುವ ಆಪಾದನೆ ಇದ್ದು,ಹಾಗೂ ಅದೇ ರೀತಿ ಡಾ|| ಜಿ.ಪರಮೇಶ್ವರ್ ಅವರು 2013ರ ಚುನಾವಣೆಯಲ್ಲಿ ಪಕ್ಷದ ಕೆಲವು ಹಿರಿಯರು ಅವರನ್ನು ಸೋಲಿಸಲು ಜೇಡರ ಬಲೆ ಹೆಣೆದು ಅವರನ್ನು ಸೋಲಿಸಿ ಮುಖ್ಯಮಂತ್ರಿ ಪದವಿಯಿಂದ ಹಿಂದೆ ಸರಿಸಲು ವ್ಯವಸ್ಥಿತವಾಗಿ ಪಿತೂರಿ ನಡೆಸಿದರು ಎನ್ನುವ ಆಪಾದನೆಯೂ ಇದೆ.ಇಂಥಹ ಹಲವಾರು ಆಪಾದನೆ ಇದ್ದಾಗಲೂ ಸಹ ಮತ್ತೊಬ್ಬ ಹಿರಿಯ ರಾಜಕೀಯ ಮುತ್ಸದಿ ಮತ್ತು ದಲಿತ, ಶೋಷಿತ ಸಮುದಾಯಗಳ ಚಿಂತಕರಾದ ಡಾ| ಹೆಚ್.ಸಿ. ಮಹಾದೇವಪ್ಪರವರನ್ನೂ ಸಹ ಈ ರಾಜ್ಯ ಸರ್ಕಾರವು ರಾಜ್ಯ ರಾಜಕಾರಣದಿಂದ ಹೊರ ದಬ್ಬುವ ಕೆಲಸ ಮಾಡುತ್ತಿದೆ. ಇಂತಹ ರಾಜಕೀಯ ಪಿತೂರಿಯನ್ನು ನಮ್ಮ ಸಂಘವು ತೀವ್ರವಾಗಿ ಖಂಡಿಸುತ್ತದೆ ಇಲ್ಲವಾದಲ್ಲಿ,ಒಂದು ವೇಳೆ ಸಚಿವ ಮಹಾದೇವಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರೇರೆಪಿಸಿದ್ದೇ ಆದರೆ, ಕಾಂಗ್ರೆಸ್ ಪಕ್ಷವು ರಾಜ್ಯದ ಎಲ್ಲಾ 28 ಕ್ಷೇತ್ರದಲ್ಲಿ ದಲಿತ ಮತಗಳು ಅನಿವಾರ್ಯವಾಗಿ ಛಿದ್ರಗೊಂಡು ಪಕ್ಷಕ್ಕೆ ತುಂಬಾ ನಷ್ಟ ಅನುಭವಿಸುವ ಸಂಭವವಿದೆ ಮತ್ತು ಈ ಕುತಂತ್ರದ ವಿರುದ್ಧ ರಾಜ್ಯದ ಎಲ್ಲಾ ದಲಿತ ಸಮುದಾಯ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು ಈ ಸಂದರ್ಭದಲ್ಲಿ ಮುಖಂಡರುಗಳಾದ ಸೋಮಶೇಖಕ ಬಣ್ಣದಮನೆ ಪ್ರಧಾನ ಕಾರ್ಯದರ್ಶಿ,ಟಿ.ವಾಸುದೇವ್ .ಅಧ್ಯಕ್ಷರು, ತಮನೆಳಪ್ಪ ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷರು,ಯರ್ರಿಸ್ವಾಮಿ ಕಾರಿಗನೂರುಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷರು,ಸಣ್ಣಮಾರೆಪ್ಪ ಕರ್ನಾಟಕ ರಾಜ್ಯ ಅಲೆಮಾರಿ ಸಂಘದ ರಾಜ್ಯ ಅಧ್ಯಕ್ಷ ರು,ಜೆ ಶಿವಕುಮಾರ್ಅಧ್ಯಕ್ಷರು ಯುವ ಘಟಕ, ಮೋಹನ್, ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ