ವಾರ್ಡನ್ ಗಳು ಮಕ್ಕಳನ್ನು ಓದುವಂತೆ ಪ್ರೇರೇಪಿಸಬೇಕು – ಡಾ. ಕಾಂತರಾಜ್.
ತರೀಕೆರೆ ಅಕ್ಟೋಬರ್.4
ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳು ಚೆನ್ನಾಗಿ ಓದಬೇಕು ವಿದ್ಯಾವಂತರಾಗಬೇಕು ಎಂದು ಹೆತ್ತವರು ಕನಸು ಕಂಡಿರುತ್ತಾರೆ ಎಂದು ತರೀಕೆರೆ ಉಪ ವಿಭಾಗಾ ಧಿಕಾರಿಯಾದ ಡಾ. ಕೆ ಜೆ ಕಾಂತರಾಜ್ ಹೇಳಿದರು. ಅವರು ಇಂದು ಬೆಳಗ್ಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ಅಲ್ಪಸಂಖ್ಯಾತರ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ, ದಿಢೀರ್ ಭೇಟಿ ನೀಡಿ ಪರಿವೀಕ್ಷಣೆ ಮಾಡಿದರು. ಆದರೆ ವಿದ್ಯಾರ್ಥಿ ನಿಲಯಗಳಲ್ಲಿ ಬೆಳಗ್ಗೆ 7. ಗಂಟೆಯಾದರೂ ಮಕ್ಕಳು ಎದ್ದಿರುವುದಿಲ್ಲ ಮಲಗಿರುತ್ತಾರೆ.
ಸರ್ಕಾರ ಕೋಟಿಗಟ್ಟಲೆ ಹಣ ಸಮಾಜ ಕಲ್ಯಾಣ ಇಲಾಖೆ ಮತ್ತು ಬಿ ಸಿ ಎಂ ಇಲಾಖೆಗೆ ಕೊಡುತ್ತಿದೆ ಆದರೆ ಹಾಸ್ಟೇಲ್ ಗಳನ್ನು ನಿರ್ವಹಣೆ ಮಾಡುವ ವಾರ್ಡನ್ ಗಳಾಗಲಿ, ಅಡಿಗೆಯವರಾಗಲಿ, ವಾಚ್ ಮ್ಯಾನ್ ಗಳಾಗಲಿ ತಮ್ಮ ಜವಾಬ್ದಾರಿಗಳನ್ನು ಮರೆತಿದ್ದಾರೆ. ಬೋರ್ಡ್ ನಲ್ಲಿ ಊಟದ ಮೆನು ಹಾಗೂ ಮಕ್ಕಳ ದಿನನಿತ್ಯದ ಕಾರ್ಯಕ್ರಮಗಳ ಬಗ್ಗೆ ವಿವರಣೆ ಬರೆದಿದ್ದು, ವ್ಯಾಯಾಮ, ಯೋಗಾಸನ, ಪ್ರಾರ್ಥನೆ, ವ್ಯಾಸಂಗದ ಸಮಯ ಎಲ್ಲವೂ ಬರೆದಿರುತ್ತಾರೆ, ಆದರೆ ನಾಮಕಾವಸ್ಥೆ ಎಂದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಎಲ್ಲಾ ಹಾಸ್ಟೇಲ್ ಗಳ ವಾರ್ಡನ್ ಗಳು ಮಕ್ಕಳನ್ನು ಓದುವಂತೆ ಪ್ರೇರೇಪಿಸಬೇಕು. ಅವರ ಮುಂದಿನ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಮಕ್ಕಳ ತಂದೆ ತಾಯಿ ಹಾಗೂ ಸರ್ಕಾರದ ಉದ್ದೇಶ ನೆರವೇರಿಸಲು ತಾವೆಲ್ಲರೂ ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ