ಕೂಡ್ಲಿಗಿ:ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸಾಲುಮನಿ ರಾಘವೇಂದ್ರ.
ಕೂಡ್ಲಿಗಿ ಅಕ್ಟೋಬರ್.4
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಕೂಡ್ಲಿಗಿ ತಾಲೂಕು ಅಧ್ಯಕ್ಷರನ್ನಾಗಿ, ಸಾಲುಮನಿ ರಾಘವೇಂದ್ರ ರವರನ್ನು ಆಯ್ಕೆ ಮಾಡಲಾಗಿದೆ. ಅ. 3 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆಯಲ್ಲಿ, ಸರ್ವ ಸದಸ್ಯರ ಸಹ ಮತದೊಂದಿಗೆ ರಾಘವೇಂದ್ರ ರವರನ್ನು ಆಯ್ಕೆ ಮಾಡಲಾಯಿತು. ಈ ಹಿಂದೆ ಇದ್ದ ಸಂಘದ ತಾಲೂಕಾಧ್ಯಕ್ಷರಾಗಿ, ಬಡಿಗೇರ ನಾಗರಾಜ ರವರು ಸಂಘದಿಂದ ವಿಮುಕ್ತರಾದ ಹಿನ್ನಲೆಯಲ್ಲಿ. ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸಂಘದ ರಾಜ್ಯ ಸಮಿತಿ ಸದಸ್ಯರಾದ, ಕೆ.ಎಸ್.ಮುರುಳೀಧರ ಶೆಟ್ರು ಹಾಗೂ ಸಿದ್ದಾಪುರ ಬಿ.ಎಮ್.ಈಶ್ವರಪ್ಪ ರವರ ನೇತೃತ್ವದಲ್ಲಿ ಜರುಗಿದ. ಸಂಘದ ಸರ್ವ ಸದಸ್ಯರ ಸಭೆಯಲ್ಲಿ, ಅಧ್ಯಕ್ಷರನ್ನಾಗಿ ಸಾಲುಮನಿ ರಾಘವೇಂದ್ರ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಸಭೆಯಲ್ಲಿ ಕರ್ನಾಟ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ, ಶ್ರೀಮತಿ ಟಿ.ಭಾಗ್ಯಮ್ಮ ಸೋಮಪ್ಪ. ಜುಮ್ಮೋಬನಹಳ್ಳಿ ಹೊನ್ನೂರಪ್ಪ, ಜಿಲ್ಲಾ ಸಮಿತಿಯ ಗಂಡುಗಲಿ ನಂದೀಶ ನಾಯಕ, ಹೂಡೇಂ ಮಂಜುನಾಥ, ಅಮ್ಮನಕೇರಿ ಬಸವರಾಜ ಸ್ವಾಮಿ, ಲಿಂಬ್ಯಾನಾಯ್ಕ, A2Z ಮೀನಕೇರಿ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು. *ಹರಿದು ಬಂದ ಅಭಿನಂದನೆಗಳ ಮಹಾಪೂರ*- ಸಾಲುಮನಿ ರಾಘವೇಂದ್ರ ರವರು ಪತ್ರಕರ್ತರ ಸಂಘದ ಅಧ್ಯಕ್ಷರಾದ ಹಿನ್ನಲೆಯಲ್ಲಿ, ಅವರನ್ನು ಕೂಡ್ಲಿಗಿಯ ಹಿರಿಯ ಪತ್ರಕರ್ತರು. ಪಟ್ಟಣ ಸೇರಿದಂತೆ ತಾಲೂಕಿನ, ಸಮಸ್ತ ಪತ್ರಕರ್ತರು. ಸ್ನೇಹಿತರು ಮಾದಿಗ ದಂಡೋರ ಸಂಘಟನೆಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು. ವಿವಿಧ ಸಮುದಾಯಗಳ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ. ವಿವಿಧ ಜನಪ್ರತಿನಿಧಿಗಳು, ವಿವಿಧ ದಲಿತ ಪರ ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು. ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು. ಕಾರ್ಮಿಕರು ಹಾಗೂ ರೈತರು ನಾಗರಿಕರು, ಮತ್ತು ಗಣ್ಯ ಮಾನ್ಯರು ಅಭಿನಂದಿಸಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ ಕೂಡ್ಲಿಗಿ