ಶ್ರೀ ನಂದಿ ಸ್ಟೀಲ್ ಮತ್ತು ಸಿಮೆಂಟ್ ಅಂಗಡಿ ತಂಡದಿಂದ – ಸ್ವಚ್ಛತೆ.
ಕೊಟ್ಟೂರು ಅಕ್ಟೋಬರ್.6

ತಾಲೂಕು ವಿದ್ಯಾನಗರದ 7 ನೇ ವಾರ್ಡಿನ ಪಟ್ಟಣ ಪಂಚಾಯಿತಿಗೆ ಒಳಪಟ್ಟಿರುವ ಸಾರ್ವಜನಿಕರ ಉದ್ಯಾನ ವನದಲ್ಲಿ ಸಿಪಿಎಡ್ ಕಾಲೇಜ್ ಎದುರುಗಡೆ ಇರುವ ಶ್ರೀ ನಂದಿ ಸ್ಟಿಲ್ಸ್ ಅಂಡ್ ಸಿಮೆಂಟ್ ತಂಡದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಉದ್ಯಾನ ವನದಲ್ಲಿ ಒಳಗಡೆ ಸುತ್ತಮುತ್ತ ಕಸ ಮುಳ್ಳಿನ ಗಿಡವನ್ನು ಕಡಿದು ಸ್ವಚ್ಛ ಗೊಳಿಸಿದರು ಇಲ್ಲಿ ಬರುವಂತಹ ಸಾರ್ವಜನಿಕರಿಗೆ ಉದ್ಯಾನ ವನದಲ್ಲಿ ಯಾವುದೇ ರೀತಿಯ ತೊಂದರೆಗಳು ಆಗಬಾರದು ಹಾಗೂ ಇಲ್ಲಿ ಶುದ್ಧವಾದ ಗಾಳಿ ಉತ್ತಮವಾದ ಪರಿಸರ ಸವಿಯನ್ನು ಬಂದ ಮಕ್ಕಳು ಮತ್ತು ಪೋಷಕರು ಮತ್ತಿತರರು ಎಲ್ಲಾ ರೀತಿಯ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಬರುವಂತಹ ಎಲ್ಲರಿಗೂ ಸುರಕ್ಷಿತವಾದ ಆರೋಗ್ಯವನ್ನು ನೀಡಬೇಕೆಂಬ ಉದ್ದೇಶದಿಂದ ಶ್ರೀ ನಂದಿ ಸ್ಟೀಲ್ ಮತ್ತು ಸಿಮೆಂಟ್ ತಂಡ ಶೆಟ್ಟಿ ರಾಜು,ಪ್ರವೀಣ್,ನಾಗರಾಜ, ಕಿಟ್ಟಿ ,ಮಂಜು,ಕೆಂಚಪ್ಪ,ಅಭಿ, ಬುಜ್ಜಿ ಮಹೇಶ್ ಉದ್ಯಾನ ವನದಲ್ಲಿ ಸ್ವಚ್ಛ ಮಾಡುವುದರ ಮೂಲಕ ಸಾರ್ವಜನಿಕರಿಗೆ ಮಾದರಿಯಾಗಿದ್ದಾರೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು