ಬಂಜಾರ ಬುಡಕಟ್ಟು ಸಂಸ್ಕೃತಿ ಉತ್ಸವ ಕರಪತ್ರ ಬಿಡುಗಡೆ.
ತರೀಕೆರೆ ಅಕ್ಟೋಬರ್.11

ಅತಿ ಹಿಂದುಳಿದ ಸಮುದಾಯಗಳ ಸಮಾಲೋಚನಾ ಸಭೆ ಹಾಗೂ ಬಂಜಾರ ಬುಡಕಟ್ಟು ಸಂಸ್ಕೃತಿ ಉತ್ಸವಕ್ಕೆ ಸಮಾಜ ಬಾಂಧವರು ಭಾಗವಹಿಸಬೇಕು ಎಂದು ಶ್ರೀ ಸೇವಾಲಾಲ್ ಸರ್ದಾರ್ ಸ್ವಾಮೀಜಿ ರವರು ಇಂದು ತಾಲೂಕಿನ ಅಮೃತಪುರ ಹೋಬಳಿ, ಹೊಸಳ್ಳಿ ತಾಂಡ್ಯದಲ್ಲಿ ಬಂಜಾರ ಬುಡಕಟ್ಟು ಸಂಸ್ಕೃತಿ ಉತ್ಸವವನ್ನು ಅಕ್ಟೋಬರ್ 26ನೇ ಗುರುವಾರ ಹಾಗೂ 27ನೇ ಶುಕ್ರವಾರ 2023 ರಂದು ದಿವಂಗತ ನಿಜಲಿಂಗಪ್ಪ ಸ್ಮಾರಕ ಭವನ ಚಿತ್ರದುರ್ಗದಲ್ಲಿ ಏರ್ಪಡಿಸಲಾಗಿದೆ ಎಂದು ಹೇಳಿದರು.
ಅವರು ಹೊಸಳ್ಳಿ ತಾಂಡ್ಯದಲ್ಲಿ ತಾಲೂಕು ಬಂಜಾರ ಸಂಘ ಅಧ್ಯಕ್ಷರಾದ ಸತ್ಯಪ್ಪ, ಮತ್ತು ಮಾಜಿ ಅಧ್ಯಕ್ಷರಾದ ಕರಕುಚ್ಚಿ ಗೋವಿಂದ ನಾಯ್ಕ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಡಿ ಹಾಲ ನಾಯ್ಕ ತಾಲ್ಲೂಕು ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷರು ಹಾಗೂ ಬಂಜಾರ ಸಂಘದ ಮಾಜಿ ಅಧ್ಯಕ್ಷರಾದ ಬಿ ಕೃಷ್ಣ ನಾಯ್ಕ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ, ಕಿರ್ಯ ನಾಯ್ಕ ವಕೀಲರಾದ ಶೇಖರನಾಯ್ಕ, ಅಮೃತಪುರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಟಿ. ಚಂದ್ರನಾಯ್ಕ, ಶಿಕ್ಷಕರಾದ ಚೆನ್ನ ನಾಯ್ಕ, ಪತ್ರಕರ್ತರಾದ ಪ್ರದೀಪ್, ಬಂಜಾರ ಯುವಕ ಸಂಘದ ಮುಖಂಡರಾದ ಎಚ್.ವಿ. ಯೋಗೇಶ್, ಕರಕುಚ್ಚಿ ಕುಮಾರ್, ರವರೊಂದಿಗೆ ಬಂಜಾರ ಬುಡಕಟ್ಟು ಸಂಸ್ಕೃತಿ ಉತ್ಸವ 2023-24ರ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.ಅತಿ ಹಿಂದುಳಿದ ಸಮುದಾಯಗಳ ಸಮಾಲೋಚನೆ ಸಭೆಗೆ ಕರ್ನಾಟಕ ಸರ್ಕಾರದ ಮಂತ್ರಿಗಳಾದ ಸತೀಶ್ ಜಾರಕಿಹೊಳಿ , ಶಿವರಾಜ್ ತಂಗಡಗಿ, ಡಿ.ಸುಧಾಕರ್, ಉಪಸಭಾಪತಿ ರುದ್ರಪ್ಪ ಲಮಣಿ, ಪ್ರಕಾಶ್ ರಾಥೋಡ್,ಸಾಹಿತಿಗಳಾದ ಬಿ.ಟಿ ಲಲಿತನಾಯ್ಕ ರವರು ಹಾಗೂ ರಾಜ್ಯದಲ್ಲಿರುವ ಬುದ್ಧಿ ಜೀವಿಗಳು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿರುವರು. ಹಾಗೂ ಲೋಕ ಕಲ್ಯಾಣಾರ್ಥಕವಾಗಿ ಸಾಮೂಹಿಕ ಸಂಕಲ್ಪ ಪೂಜಾ ಕಾರ್ಯಕ್ರಮವನ್ನು ಆನಂದ ಗುರೂಜಿ ರವರು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ