ಪ್ರಕೃತಿ-ಭೂಮಿ ಮೇಲಿನ ಅದ್ಬುತ…..

ನಿಜ ನನಗೆ ದುಃಖವಾದಾಗ, ಮನಸ್ಸು ಸರಿಯಿಲ್ಲದಾಗ, ಒತ್ತಡದಲ್ಲಿದ್ದಾಗ ನಾನು ಜಾಸ್ತಿ ಸಮಯ ಕಳೆಯುವುದು ಈ ಪ್ರಕೃತಿಯಲ್ಲಿ. ಅದೇ ರೀತಿ ಸಂತೋಷದಲ್ಲಿದ್ದಾಗಲು ಸಹ ಪ್ರಕೃತಿಯ ನೋಡಿ ಮುಗುಳ್ನಗೆ ಬೀರುವುದು ನನಗೆ ಹವ್ಯಾಸವಾಗಿದೆ. ನಿಜ ಅದು ಎಷ್ಟು ಮನಸ್ಸಿಗೆ ಮುದ ನೀಡುತ್ತದೆಂದರೆ, ಆ ತರಹದ ಸಂತೋಷದ ಭಾವನೆ ಬೇರೆ ಏನನ್ನಾದರೂ ಮಾಡುವುದರಿಂದಲೂ ನನಗೆ ಸಿಗಲಿಕ್ಕಿಲ್ಲ. ನಾನಂತೂ ಈ ಪ್ರಕೃತಿಯಲ್ಲಿ ಏನನ್ನಾದರೂ ಸುಂದರ ದೃಶ್ಯಗಳು ಕಂಡುಬಂದರೆ ಸಾಕು ನನ್ನ ಮೊಬೈಲನ್ನೆ ಹುಡುಕುತ್ತಿರುತ್ತೇನೆ,ಆ ಸುಂದರ ದೃಶ್ಯಗಳನ್ನು ಸೆರೆಹಿಡಿದು ಅವುಗಳನ್ನು ಆಗಾಗ ನೋಡುವುದು ಮಾಡುತ್ತಿರುತ್ತೆನೆ. ನನ್ನ ಪಾಲಿಗೆ ಪ್ರಕೃತಿಯೊಂದು ಅದ್ಭುತವೆ, ನಿಜ . ಆ ಹಚ್ಚ ಹಸಿರು, ತಣ್ಣನೆಯ ಗಾಳಿ, ಜುಳು-ಜುಳು ಹರಿವ ನೀರು, ಹಕ್ಕಿಗಳ ಚಿಲಿಪಿಲಿ ನಾದ, ಮುಂಜಾನೆಯ ಇಬ್ಬನಿ, ಮಳೆ, ಬಿಸಿಲು, ಮಳೆ ಮತ್ತು ಬಿಸಿಲು ಸೇರಿದಾಗ ಮೂಡುವ ಮನಮೋಹಕ ಕಾಮನಬಿಲ್ಲು.. ಆಹಾ!! ನೋಡಲು ಎರಡು ಕಣ್ಣುಗಳು ಸಾಲದು. ನಾನು ಬೆಳೆದಲ್ಲಿ ಕಾಡು-ಮೇಡು, ಗಿಡಗಳು ಮತ್ತು ಮಲೆನಾಡಿನಂತ ಸೊಬಗಿರುವುದು ಕಡಿಮೆ. ಕಡಿಮೆ ಗಿಡಮರಗಳಿದ್ದಲ್ಲೇ ಅವುಗಳ ನೋಡಿ ಮೈಮರೆವ ನಾನು,ಇನ್ನು ಮಲೆನಾಡು, ಆಗುಂಬೆ ಆ ಭಾಗದಲ್ಲಿದ್ದಿದ್ದರೆ ಪ್ರಕೃತಿಯ ಮಡಿಲಲ್ಲೇ ಕಳೆದೋಗುತ್ತಿದ್ದೇನೋ ಏನೋ ನನಗೆ ಗೊತ್ತಿಲ್ಲ..ಇಂತಹ ಸುಂದರ ಪ್ರಕೃತಿಯು ನಾಶವಾಗುತ್ತಿರುವುದು ನೆನೆಸಿಕೊಂಡು ನನಗೆ ಆಗಾಗ ದುಃಖವಾಗುತ್ತಿರುತ್ತದೆ. ಹೀಗೆ ಮುಂದೊಂದು ದಿನ ಅಳಿವಿನಂಚಿಗೆ ಬಂದು ಈ ಭೂಮಿ ತನ್ನ ವೈಶಿಷ್ಟ್ಯವನ್ನೆಲ್ಲಿ ಕಳೆದುಕೊಳ್ಳುತ್ತದೆನೋ ಎಂದು ಭಯವಾಗುತ್ತದೆ. ಪ್ರಕೃತಿಯ ಜೊತೆ ಜೊತೆಗೆ ಪ್ರಾಣಿ-ಪಕ್ಷಿ ಸಂಕುಲದಲ್ಲೂ ವರ್ಷವರ್ಷಕ್ಕೂ ಇಳಿಕೆಯಾಗುತ್ತ ಬರುತ್ತಲೇ ಇದೆ. ಆದರೆ ಏನು ಮಾಡಲಾಗುತ್ತಿಲ್ಲವೆಂಬ ಕೊರಗು ಸಹ ಹಾಗೆ ಕಾಡುತ್ತಲೆ ಇದೆ.ಪರಿಸರ ಪ್ರೇಮಿಗಳೆಂದು ಹೇಳಿಕೊಳ್ಳುವವರಲ್ಲಿ ೫೦% ಜನರು ತಮ್ಮ ವೈಯಕ್ತಿಕ ಬೆಳವಣಿಗೆಗೆಂದೆ ಹಾಗೆ ನಾಮಫಲಕವನ್ನು ಹಾಕಿಕೊಂಡಿರುತ್ತಾರೆ. ಮತ್ತೆ ಇನ್ನುಳಿದವರು ಈ ಪರಿಸರಕ್ಕೊಸ್ಕರ ಹೋರಾಡುತ್ತಾ ಜೀವವನ್ನೆ ಕೊಟ್ಟುಬಿಡುತ್ತಾರೆ. ಅದನ್ನು ಕಾಪಾಡಲು ಹೋರಾಡುತ್ತಿರುವವರನ್ನು ಪರಿಸರ ಪ್ರೇಮಿಗಳೆಂದು ಯಾರು ಒಪ್ಪಿಕೊಳ್ಳಲ್ಲು ತಯಾರಿರುವುದೇ ಇಲ್ಲ. “ಇದೆಲ್ಲಾ ಅವರಿಗ್ಯಾಕೆ ಬೇಕು ಅವರವರ ಪಾಡಿಗೆ ಸುಮ್ಮನಿರಬಾರದೆ” ಎಂದೆನ್ನುವವರೇ ಜಾಸ್ತಿ. ಆದರೆ ಅವರ ಹವಣಿಕೆ ಅವರಿಗರ್ಥವಾಗದು.. ಈ ಅದ್ಭುತವನ್ನು ಭೂಮಿಯ ಮೇಲೆ ಕೊನೆವರೆಗೂ ಉಳಿಸಬೇಕು, ಅದಕ್ಕಾಗಿ ಈಗಿರುವ ಪರಿಸರವನ್ನು ನಾವು ಕಾಪಾಡಬೇಕು, ಸಾಧ್ಯವಾದಷ್ಟು ಗಿಡಗಳನ್ನು ಬೆಳೆಸಬೇಕು.. ನೀವೆನಂತಿರಿ???
✍️ ತ್ರಿವೇಣಿ. ಆರ್. ಹಾಲ್ಕರ್
ಗೊಬ್ಬರವಾಡಿ, ಕಲಬುರ್ಗಿ ಜಿಲ್ಲೆ