ಒಳ ಮೀಸಲಾತಿಯ ಹೋರಾಟಗಾರ ಪಾರ್ಥ ಸಾರಥಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಕೆ.
ಮಸ್ಕಿ ಜು.10

ದಲಿತ ಚಳುವಳಿ ಯ ಒಡನಾಡಿ ಒಳ ಮೀಸಲಾತಿಯ ಹೋರಾಟಗಾರ ಪಾರ್ಥ ಸಾರಥಿಯವರು ತುಮಕೂರುನಲ್ಲಿ ನಿಧನ ಹೊಂದಿದ್ದು ಅವರಿಗೆ ಮಸ್ಕಿಯ ಗಾಂಧಿನಗರದ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪಾರ್ಕಿನಲ್ಲಿ ಅವರಿಗೆ ಭಾವಪೂರ್ಣ ಶ್ರದಾಂಜಲಿಯನ್ನು ಮಸ್ಕಿಯ ದಲಿತ ಸಂಘಟನೆಯ ಮುಖಂಡ ದೊಡ್ಡಪ್ಪ ಮುರಾರಿ ರವರು ಮಾಲಾರ್ಪಣೆ ಮಾಡಿ ಅವರ ಹೋರಾಟದ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಮೌನೇಶ್ ಜಿ ಮುರಾರಿ ಪುರಸಭೆ ಮಾಜಿ ಅಧ್ಯಕ್ಷರು, ಮಲ್ಲಯ್ಯ ಬಳ್ಳಾ, ಹನುಮಂತ ಪರಾಪುರ, ಯಮನಪ್ಪ ಮುದಗಲ್, ಕಾಸಿಮಪ್ಪ ಡಿ ಮುರಾರಿ ಡಿ ಎಸ್ ಎಸ್ ತಾಲೂಕು ಸಂಚಾಲಕರು, ಅಶೋಕ್ ಡಿ ಮುರಾರಿ,ಕಿರಣ್ ವಿ ಮುರಾರಿ, ಬಾಲಸ್ವಾಮಿ ಜಿನ್ನಾಪುರ, ತುರುಮುಂದೆ ಪ್ಪಕಟ್ಟಿಮನಿ, ವೆಂಕಟೇಶ್ ಮುರಾರಿ, ಸಿದ್ದಪ್ಪ ಹೂವಿನಭಾವಿ, ಮೋಹನ್ ಎಂ ಮುರಾರಿ, ಮಲ್ಲಿಕಾರ್ಜುನ ಕೊಠಾರಿ,ಮರಿಸ್ವಾಮಿ ಬೆನಕನಾಳ್ ಬಸವರಾಜ್ ಆರ್ ಡಿ ಉದ್ಬಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ.ಇಲಕಲ್ಲ.