ಅನಾರೋಗ್ಯದಲ್ಲಿ ಮಾನಸಿಕ ಸಮಸ್ಯೆಗೆ ಒಳಗಾದವರನ್ನು ಯಾರು ಕೀಳು ದ್ರಷ್ಟಿಯಿಂದ ನೋಡಬಾರದು – ಮಲ್ಲಿಕಾರ್ಜುನಯ್ಶ.
ಕೂಡ್ಲಿಗಿ ಅಕ್ಟೋಬರ್.14





ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ಪಟ್ಟಣದ ಶ್ರೀಮತಿ ಅಂಗಡಿ ವೀರಮ್ಮ ತಿರುಕಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಲ್ಲಿ. ಅ.13 ರಂದು, ತಾಲೂಕು ಕಾನೂನು ಸೇವೆಗಳ ಸಮಿತಿ. ತಾಲೂಕಾ ವಕೀಲರ ಸಂಘ, ತಾಲೂಕಾ ಸಾರ್ವಜನಿಕ ಆಸ್ಪತ್ರೆ. ಆರೋಹಣ ಸೊಸೈಟಿ ಫಾರ್ ಸೋಶಿಯಲ್ ಡೆವಲಪ್ಮೆಂಟ್ ಸಂಸ್ಥೆ, ಹಾಗೂ ಶ್ರೀಮತಿ ಅಂಗಡಿ ವೀರಮ್ಮ ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಸಂಯುಕ್ತ ಆಶ್ರಯದಲ್ಲಿ. “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ”, ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು. ಕಿರಿಯ ಶ್ರೇಣಿ ನ್ಯಾಯಾಧೀಶರಾದ, ಶ್ರೀಮತಿ ಸಿ ಮಹಾಲಕ್ಷ್ಮಿ ರವರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಮಾನಸಿಕ ಆರೋಗ್ಯವು ನಮ್ಮ ಭಾವನಾತ್ಮಕ ಮಾನಸಿಕ ಮತ್ತು ಸಾಮಾಜಿಕ ಯೋಗ ಕ್ಷೇಮವನ್ನು ಸೂಚಿಸುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವು, ಸಾಮಾನ್ಯವಾಗಿ ಜೊತೆ ಜೊತೆಯಾಗಿ ಇರುತ್ತದೆ. ನಮ್ಮ ಆಲೋಚನೆಗಳು ಉತ್ತಮವಾಗಿದ್ದರೆ, ಸರಿಯಾದ ಮಾನಸಿಕ ಸ್ಥಿರತೆಯನ್ನು ಸಹ ಕಾಪಾಡಿ ಕೊಳ್ಳಬಹುದು. ಉತ್ತಮ ಸಮಾಜವನ್ನು ನಿರ್ಮಿಸಿ ಕೊಳ್ಳಲು, ತಮ್ಮ ಸಹಕಾರ ಅತಿ ಮುಖ್ಯವಾಗಿರುತ್ತದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಜಿ.ಎಂ ಮಲ್ಲಿಕಾರ್ಜುನಯ್ಯ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಉತ್ತಮ ಸಮಾಜವನ್ನು ನಿರ್ಮಿಸಲು ಬದ್ಧರಾಗಿರಬೇಕು. ತಮ್ಮ ಜೊತೆಗೆ ಯಾವಾಗಲೂ ಕಾನೂನು ಕೈ ಜೋಡಿಸುತ್ತದೆ, ಯಾರು ಕೂಡ ಕಾನೂನು ವಿರೋಧಿ ಕೆಲಸಗಳನ್ನು ಮಾಡಬಾರದು. ಕಾನೂನು ಬಾಹಿರ ಕೆಲಸ ಕಾರ್ಯಗಳಲ್ಲಿ ತೊಡಗ ಬಾರದು, ನೆರವು ನಮ್ಮದು ನ್ಯಾಯ ನಿಮ್ಮದು ಎಂದರು. ಆಪ್ತ ಸಮಾಲೋಚಕರಾದ ಜಿಗೇನಹಳ್ಳಿ ಕೆ.ಪ್ರಶಾಂತ್ ಕುಮಾರ್ ಹಾಗೂ ಓಬಣ್ಣ ರವರು, ಮಾನಸಿಕ ಆರೋಗ್ಯದ ಕುರಿತು ಉಪನ್ಯಾಸ ನೀಡಿದರು. ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಭವನೀಯ ಕಾರಣಗಳು, ಮಾನಸಿಕ ಆರೋಗ್ಯ ಮತ್ತು ಅನಾರೋಗ್ಯದ ಬಗ್ಗೆ ಮಾತನಾಡಿದರು. ಮಾನಸಿಕ ಸಮಸ್ಯೆಯನ್ನು ಯಾರು ಅನುಭವಿಸುತ್ತಾರೆ, ಮಾನಸಿಕ ಸಮಸ್ಯೆಗೆ ಒಳಗಾದವರನ್ನು ಯಾರು ಕೂಡ ಕೀಳು ದೃಷ್ಟಿಯಿಂದ ನೋಡಬಾರದು. ಅವರನ್ನು ಕೂಡ ಎಲ್ಲರಂತೆ ಸಮಾನವಾಗಿ ಪರಿಗಣಿಸಿ, ಅವರನ್ನು ಮುಖ್ಯ ವಾಹಿನಿಗೆ ತರಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು. ಯುವ ರೆಡ್ ಕ್ರಾಸ್ ಮತ್ತು ಎನ್.ಎಸ್.ಎಸ್ ಸಂಚಾಲಕರಾದ ಆರ್. ಮಂಜುನಾಥ ಮಾತನಾಡಿ, ಮಾನಸಿಕ ಅನಾರೋಗ್ಯಕ್ಕೆ ನಿರ್ದಿಷ್ಟ ಕಾರಣಗಳು ಚಿಕಿತ್ಸೆ ಸೇವೆಗಳ ಬಗ್ಗೆ ತಿಳಿ ಹೇಳಿದರು.

ಹಾಗೂ ಗುಂಪುಗಳಲ್ಲಿ ಉತ್ತಮವಾದ ನಡೆ ನುಡಿಗಳು ಇರಬೇಕು ಎಂದು, ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ, ಎನ್. ಕಲ್ಲಪ್ಪ ವಹಿಸಿ ಮಾತನಾಡಿದರು. ವಯಸ್ಸಿಗೆ ಬಂದಾಗ ನಮ್ಮಲ್ಲಿ ಭಿನ್ನ-ಭಿನ್ನ ಯೋಚನೆ ಆಲೋಚನೆಗಳು ಬರುವುದು ಸಹಜ, ಆದರೆ ಸಮಾಜಕ್ಕೆ ಬೇಕಾಗಿರುವಂತಹ ಉತ್ತಮ ನಡೆ ನುಡಿಗಳನ್ನು ರೂಢಿಸಿ ಕೊಳ್ಳಬೇಕಿದೆ. ಒಳ್ಳೆಯ ನಿರ್ಧಾರಗಳನ್ನು ಕೈಗೊಳ್ಳುತ್ತಾ, ಉತ್ತಮ ಸಮಾಜಕ್ಕೆ ನಾವೆಲ್ಲರೂ ಮಾನಸಿಕವಾಗಿ ಸದೃಢರಾಗಿರಬೇಕಿದೆ ಎಂದರು. ಸಹಾಯಕ ಸರ್ಕಾರಿ ಅಭಿಯೋಜಕರಾದ ವೈ.ಶಿಲ್ಪ, ಹಾಗೂ ಕಾನೂನು ಸೇವಾ ಸಮಿತಿ ಕಾರ್ಯನಿರತ ಸದಸ್ಯ ಕಾರ್ಯದರ್ಶಿ ಅನಿಲ್ ಕುಮಾರ್, ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್. ವಕೀಲರ ಸಂಘದ ಉಪಾಧ್ಯಕ್ಷ ಹೆಚ್.ವೆಂಕಟೇಶ್, ಸತೀಶ್ ಕೋರ್ಟ್ ಸಿಬ್ಬಂದಿ ಸೋಗಿ ಸತೀಶ, ಪ್ರಯೋಗ ಶಾಲಾ ತಂತ್ರಜ್ಞರಾದ ಜೆ.ಜಿ ಸೋಮಶೇಖರ್, ಗುರು ಬಸವರಾಜ. ಶ್ರೀಮತಿ ಅಂಗಡಿ ವೀರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ವಿದ್ಯಾರ್ಥಿ ವಿದ್ಯಾರ್ಥಿನಿಯರು. ಆರೋಹಣ ಸೊಸೈಟಿ ಸಿಬ್ಬಂದಿಯವರು, ತಾಲೂಕು ಆಸ್ಪತ್ರೆ ಸಿಬ್ಬಂದಿಯವರು. ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಯವರು, ವಿದ್ಯಾರ್ಥಿ ಹುಲಿಗೇಶ್ ಪ್ರಾರ್ಥಿಸಿದರು, ಮತ್ತು ಪ್ರಿಯದರ್ಶಿನಿ ಸ್ವಾಗತಿಸಿದರು. ಕುಮಾರಿ ಅರ್ಪಿತ ವಂದಿಸಿದರು, ಕುಮಾರಿ ನಂದಿನಿ ಹಾಗೂ ವಿದ್ಯಾರ್ಥಿ ಅಭಿಲಾಶ್ ನಿರೂಪಿದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ ಕೂಡ್ಲಿಗಿ