ಸಿದ್ದಾಪುರ ವಡ್ಡರಹಟ್ಟಿ ಸ.ಹಿ.ಪ್ರಾ ಶಾಲೆಯಲ್ಲಿ ಘೋಷಣಾ ಅಭಿಯಾನ.
ಸಿದ್ದಾಪುರ ವಡ್ಡರಹಟ್ಟಿ ಡಿಸೆಂಬರ್.11





ಕಾನ ಹೊಸಹಳ್ಳಿ ಹೋಬಳಿಯ ಸಮೀಪದ ಗುಂಡುಮುಣುಗು ಗ್ರಾ.ಪಂ ವ್ಯಾಪ್ತಿಯ ಸಿದ್ದಾಪುರ ವಡ್ಡರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲ್ಲೂಕು ಪಂಚಾಯತ್ ಅಕ್ಷರ ದಾಸೋಹ ಕಚೇರಿಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೋಷಣಾ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಆಯೋಜಿಸಲಾಯಿತು. ಈ ವೇಳೆ ಶಾಲೆಯ ಮುಖ್ಯ ಗುರುಗಳು ದುರುಗಪ್ಪ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಿದ್ದು ಸಮತೋಲನ ಆಹಾರವನ್ನು ಸೇವಿಸಲು ಅರಿವು ಮೂಡಿಸಬೇಕಿದೆ. ಹಣ್ಣು ತರಕಾರಿಗಳನ್ನು ಶುದ್ಧ ನೀರಿನಲ್ಲಿ ಸ್ವಚ್ಚಗೊಳಿಸಿ ಬಳಸಬೇಕು, ಮಕ್ಕಳ ಕುಂಠಿತ ಬೆಳವಣಿಗೆ, ರಕ್ತಹೀನತೆ, ಅನಾರೋಗ್ಯಗಳನ್ನು ತಡೆಯಲು ಶುದ್ಧನೀರು, ಮಕ್ಕಳಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯವನ್ನು ಗುರಿಯನ್ನಾಗಿಸಿಆಹಾರ ಸೇವನೆ, ಆರೋಗ್ಯ ಕ್ರಮಗಳು ಅಗತ್ಯವಿದೆ ಎಂದರು. ವಿವಿಧ ಆಹಾರ ವಸ್ತುಗಳು, ತರಕಾರಿಗಳು, ಸೊಪ್ಪು, ಹಣ್ಣುಗಳನ್ನು ಜೋಡಿಸಿದ್ದ ಪ್ರದರ್ಶನಕ್ಕೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಸಿ ಆರ್ ಪಿ ಬೋರಯ್ಯ, ಶಾಲೆಯ ಶಿಕ್ಷಕರಾದ ಶಾಂತ ಬಾಯಿ, ಎಸ್ ಶೃತಿ, ಲತಾ ಸಿಟಿ, ಸುನಂದ ಎನ್ ಹಾಗೂ ಎಸ್ಡಿಎಂಸಿ ಅಧ್ಯಕ್ಷ ಕೆ ವಿ ತಿಪ್ಪೇಸ್ವಾಮಿ, ಸೇರಿದಂತೆ ಎಸ್ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು, ಅಡಿಗೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ