ದೇವರ ಸಮಾನ ರೈತ…..

ಮರೆಯಲಾಗುವುದಿಲ್ಲ ಅನ್ನದಾತನ
ಉಪಕಾರ,
ನೀಡುವವವನವನು ಮಾನವ ಕುಲಕ್ಕೆಲ್ಲಾ
ಆಹಾರ,
ಆದರೆ ಅವನಿಗೆ ಸಾಲುತ್ತಿಲ್ಲ ನಮ್ಮಯ
ಸಹಕಾರ,
ಕೆಲವೊಮ್ಮೆ ಕಡೆಗಣಿಸುತ್ತದವನ ಸರಕಾರ.
ಬರುವವವನಿಗೆ ಕಷ್ಟಗಳು ಧಾರಾಕಾರ,
ತೋರಿಸುತ್ತಿಲ್ಲವನಿಗಾರು ಮಮಕಾರ,
ಕಷ್ಟದಲ್ಲಿದ್ದಾಗವನಿಗೆ ನೀಡಬೇಕು ಪರಿಹಾರ,
ಅದುವೇ ಅವನಿಗೆ ಮಾಡುವ ಚಿಕ್ಕ ಉಪಕಾರ.
ದೇಶಕ್ಕವನು ಅನ್ನದಾತ,
ಅನ್ನವ ನೀಡಲವನು ತಾ ಸವೆದಾತ,
ದೇಶಕ್ಕೆ ಬೆನ್ನೆಲುಬಾದವನಾತ,
ದೇವರ ಸಮಾನ ನಮ್ಮ ಈ ರೈತ.
✍🏻 ತ್ರಿವೇಣಿ ಆರ್. ಹಾಲ್ಕರ್
ಗೊಬ್ಬರವಾಡಿ, ವಿದ್ಯಾರ್ಥಿನಿ
ಕೃಷಿ ಮಹಾವಿದ್ಯಾಲಯ, ಕಲಬುರ್ಗಿ