ದಲಿತರ ಸಮಸ್ಯೆ ಹಿಡೇರಿಸಿ — ಹರಮಗಟ್ಟ ರಂಗಪ್ಪ.
ಶಿವಮೊಗ್ಗ ಜೂನ್.3

ಸುಮಾರು 50 ವರ್ಷಗಳಿಂದ ಶಿವಮೊಗ್ಗ ತಾಲ್ಲೂಕು ಚೆನ್ನಳ್ಳಿ ಗ್ರಾಮದ ಸರ್ವೆ ನಂಬರ್ 53 ರಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ದಲಿತರ ಜಮೀನಿನ ಮಧ್ಯೆ ಉದ್ದೇಶ ಪೂರಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಡವಾಳ ಶಾಹಿಗಳಿಂದ ಹಣ ಪಡೆದು, ಹಣ ಕೊಡದವರ ಜಮೀನಿಗೆ ತೊಂದರೆ ಕೊಡುತ್ತಿದ್ದಾರೆ ಟ್ರಂಚ್ ಹೊಡೆದಿರುವುದನ್ನು ಖಂಡಿಸಿ ಕ ದ ಸಂ ಸ ,ಮಹಾತ್ಮ ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ರಿ, ನಂ,386 / 2020 -21 ಸಂಘಟನೆಯ ಜಿಲ್ಲಾ ಸಂಚಾಲಕ ರಾಮಘಟ್ಟ ರಂಗಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಯೊಂದಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿದ್ದಾರೆ. ದಲಿತರು ಹಿಂದುಳಿದವರು ಅಲ್ಪಸಂಖ್ಯಾತರು ಪಾರಂಪರಿಕ ಅರಣ್ಯ ಕಾಯ್ದೆಯಡಿ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಅವರೆಲ್ಲರಿಗೂ ಭೂಮಿ ಮಂಜೂರಾತಿ ಮಾಡಿಕೊಡಬೇಕು. ನವಲೆ ಗ್ರಾಮದ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸಿಕೊಡಬೇಕು. ಡಾ. ಬಿಆರ್ ಅಂಬೇಡ್ಕರ್, ದೇವರಾಜ ಅರಸು, ತಾಂಡ, ಬೋವಿ ಅಭಿವೃದ್ಧಿ ನಿಗಮದಿಂದ ಕೊಟ್ಟಿರುವ ಸಾಲ ಮನ್ನಾ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ,ಬಿ ಸಿ ಎಂ ಇಲಾಖೆ ಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡಬೇಕು. ಎಸ್ ಸಿ ಪಿ,/ಟಿ ಎಸ್ ಪಿ, ಯೋಜನೆಯಲ್ಲಿ ಲೋಪ ದೋಷ ಮಾಡಿರುವ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ದಲಿತ ನೌಕರರಿಗೆ ಬಡ್ತಿ ನೀಡಬೇಕು. ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಬೇಡಿಕೆಗೆ ಅನುಗುಣವಾಗಿ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಬೇಕು. ಬಗರ್ ಹುಕುಂ ಸಾಗುವಳಿ ಸಕ್ರಮ ಮಾಡಿ ಸಾಗುವಳಿ ಚೀಟಿ ಕೊಡಿಸಿಕೊಡಬೇಕು. ಭದ್ರಾವತಿ ನಗರಸಭೆಯಿಂದ ನಿವೇಶನ ರಹಿತರಿಗೆ ನಿವೇಶನಗಳನ್ನು ಮಂಜೂರಾತಿ ಮಾಡಿ ಕೊಡಬೇಕು. ಸರ್ವರಿಗೂ ಸಾಮಾಜಿಕ ನ್ಯಾಯ ಕೊಡಿಸಬೇಕು ಎಂದು ವಿವಿಧ ಬೇಡಿಕೆಗಳನ್ನು ಹಿಡೇರಿಸಲು ಒತ್ತಾಯಿಸಿದರು. ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾಗವಹಿಸಿದ್ದರು. ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್, ಜಿಲ್ಲಾ ಸಂಘಟನಾ ಸಂಚಾಲಕರಾದ ಡಿಕೆ ರಮೇಶ್, ಎಸ್ ಲೂಯಿಸ್ , ಹ ರಕೆರೆ ರಾಜಪ್ಪ, ಜಿಟಿ ಸದಾಶಿವ, ಶಿವಮೊಗ್ಗ ತಾಲೂಕು ಸಂಚಾಲಕ ಆರ್ ಶೇಷಪ್ಪ, ಶಿಕಾರಿಪುರ ತಾಲೂಕು ಸಂಚಾಲಕ ರವಿಕುಮಾರ್, ಹೊಸನಗರ ತಾಲೂಕು ಸಂಚಾಲಕ ಅಣ್ಣಪ್ಪ, ಸೊರಬ ತಾಲೂಕು ಸಂಚಾಲಕ ಬಂಗಾರು ನಾಯ್ಕ, ನಗರ ಸಂಚಾಲಕ ಎಚ್ ಗೋಪಿ, ಶಿವಮೊಗ್ಗ ತಾಲೂಕು ಸಂಘಟನಾ ಸಂಚಾಲಕ ಆರ್ ಹರೀಶ್, ಸಾಗರ ತಾಲೂಕು ಸಂಘಟನಾ ಸಂಚಾಲಕ ಸೋಮಶೇಖರ್, ಮುಂತಾದವರು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ