ಕೂಡಲ ಸಂಗಮ – ನರೇಗಾ ಕೂಲಿ ಕಾರ್ಮಿಕರಿಂದ ಬೇಡಿಕೆ ಸಂಗ್ರಹಣೆಗೆ ಚಾಲನೆ.
ಕೂಡಲ ಸಂಗಮ ಅಕ್ಟೋಬರ್.16
ಹುನಗುಂದ ತಾಲೂಕಿನ 2024-25ನೇ ಕಾರ್ಮಿಕರ ಆಯವ್ಯಯ ತಯಾರಿಸುವ ಸಲುವಾಗಿ ಅಕ್ಟೋಬರ್ ರಿಂದ ಒಂದು ತಿಂಗಳವರೆಗೆ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನಕ್ಕೆ ಕೂಡಲ ಸಂಗಮ ಗ್ರಾಮ ಪಂಚಾಯತಿಯಲ್ಲಿ ಚಾಲನೆ ನೀಡಲಾಯಿತು.ಈ ವೇಳೆ ಮಾತನಾಡಿದ ತಾಲೂಕಿನ ಕಾರ್ಯಕ್ರಮ ವ್ಯವಸ್ಥಾಪಕ ಯು. ಆರ್. ಗೋನಾಳ ಮಾತನಾಡಿ, ಜಾಬ್, ಕೂಲಿ ಬೇಡಿಕೆ ಸೇರಿದಂತೆ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸಿಗುತ್ತಿರುವ ಯೋಜನೆಗಳು ಮತ್ತು ಅವರ ಹಕ್ಕು ಮತ್ತು ಕರ್ತವ್ಯಗಳು ಬಗ್ಗೆ ತಿಳಿಸಿದರು. ಜೊತೆಗೆ 15ನೇ ಹಣಕಾಸು ಆಯೋಗದ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು.ಬಳಿಕ ಮಾತನಾಡಿದ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಮುಂಬರುವ ಕಾರ್ಮಿಕ ಆಯವ್ಯಯ ತಯಾರಿಸುತ್ತಿದ್ದು, ಕೃಷಿ ಹೊಂಡ ಬದು ನಿರ್ಮಾಣ, ಬಚ್ಚಲು ಗುಂಡಿ ಸೇರಿದಂತೆ ನರೇಗಾ ಯೋಜನೆಯಡಿ ಸಿಗುತ್ತಿರುವ ವೈಯಕ್ತಿಕ ಕಾಮಗಾರಿಗಳ ಹಾಗೂ ಸಮುದಾಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ಕೂಲಿ ಕಾರ್ಮಿಕರ ಬೇಡಿಕೆಯನ್ನು ಪಡೆದು ಕೊಳ್ಳಲಾಯಿತು.ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ತಾಲೂಕಿನ ಕಾರ್ಯಕ್ರಮ ವ್ಯವಸ್ಥಾಪಕ ಯು. ಆರ್. ಗೋನಾಳ, ಬಿಲ್ ಕಲೆಕ್ಟರ್ ಬಸವರಾಜ ಮೇಲಿನಮನಿ, ಸಮಾಜಿಕ ಪರಿಶೋಧನೆ ಸಿಬ್ಬಂದಿ ವರ್ಗ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಕಾಯಕ ಬಂಧುಗಳು ಉಪಸ್ಥಿತರಿದ್ದರು.