ದೇಶ ರಕ್ಷಣೆ ಮಾಡಿದ ವೀರ ಯೋಧರ ಸ್ಮಾರಕಕ್ಕೆ ಮಣ್ಣು – ಜಿ.ಎಚ್. ಶ್ರೀನಿವಾಸ್

ತರೀಕೆರೆ ಅಕ್ಟೋಬರ್.17

ದೇಶದ ಪ್ರತಿಯೊಂದು ಗ್ರಾಮಗಳಿಂದಲೂ ಮಣ್ಣು ಸಂಗ್ರಹಿಸಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಶೇಖರಿಸಿ ದೆಹಲಿಗೆ ಕಳಿಸಲಾಗುತ್ತದೆ ಎಂದು ಶಾಸಕರಾದ ಜಿ ಎಚ್ ಶ್ರೀನಿವಾಸ ಅವರು ಇಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ನೆಹರು ಯುವ ಕೇಂದ್ರ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಚಿಕ್ಕಮಗಳೂರು. ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಸಭೆ ತರೀಕೆರೆ, ಸಂಗೊಳ್ಳಿ ರಾಯಣ್ಣ ಯುವ ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ಇವರುಗಳ ಆಶ್ರಯದಲ್ಲಿ ಏರ್ಪಡಿಸಿದ್ದ ನನ್ನ ಮಣ್ಣು,ನನ್ನ ದೇಶ, ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ದೇಶಕ್ಕೆ ತ್ಯಾಗ ಬಲಿದಾನದ ಮೂಲಕ ದೇಶ ರಕ್ಷಣೆ ಮಾಡಿದ ವೀರ ಯೋಧರಿಗೆ ಒಂದು ಉದ್ಯಾನವನ ಹಾಗೂ ಸ್ಮಾರಕ ನಿರ್ಮಾಣ ಮಾಡಲು ದೇಶದ ಪ್ರತಿಯೊಂದು ಗ್ರಾಮಗಳ ಮಣ್ಣನ್ನು ಬಳಸಲಾಗುವುದು ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಗಣೇಶ್ ರವರು ಮಾತನಾಡಿ ನಮ್ಮ ದೇಶವು ಸ್ವತಂತ್ರ ಪಡೆದು 72 ವರ್ಷದ ಅಂಗವಾಗಿ ದೆಹಲಿಯ 40 ಎಕರೆ ಭೂಮಿಯಲ್ಲಿ ರಾಷ್ಟ್ರೀಯ ಉದ್ಯಾನವನಕ್ಕೆ ಸಸಿಗಳನ್ನು ನೆಟ್ಟು, ಸೈನಿಕರಿಗೆ ಸ್ಮಾರಕ ನಿರ್ಮಾಣ ಮಾಡುವ ಉದ್ದೇಶವಾಗಿದೆ. ಯೋಧರು ಮಣ್ಣಿಗಾಗಿ ಜೀವ ಅರ್ಪಿಸಿ ಮಣ್ಣಾದ ಯೋಧರ ನೆನಪು ಚಿರವಾಗಿರಲೆಂದು ತರೀಕೆರೆಯ 26 ಗ್ರಾಮ ಪಂಚಾಯಿತಿ ಹಾಗೂ ಅಜ್ಜಂಪುರ ತಾಲೂಕಿನಿಂದಲೂ ಸಹ ಮಣ್ಣು ಸಂಗ್ರಹಿಸಿ ಕಳುಹಿಸಲಾಗುವುದು. 7500 ಕಡೆಯಿಂದ ಮಣ್ಣು ಸಂಗ್ರಹಿಸಿ 7500 ಸಸಿಗಳನ್ನು ನೀಡಲಾಗುವುದು ಎಂದು ಹೇಳಿದರು. ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗೀತಾ ಶಂಕರ್ ರವರು ಪಂಚ ಪ್ರತಿಜ್ಞೆಯನ್ನು ಬೋಧಿಸಿದರು.ದೇಶದ ಅಭಿವೃದ್ಧಿ ಮತ್ತು ಏಕತೆಗಾಗಿ ದುಡಿಯೋಣ ಎಂದು ಹೇಳಿದರು.ಗ್ರಾಮ ಪಂಚಾಯಿತಿಗಳಿಂದಲೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಣ್ಣನ್ನು ತಂದು ಕೊಟ್ಟರು. ಮಾಜಿ ಸೈನಿಕರಾದ ಕಿರ್ಯ ನಾಯ್ಕ,ಅಣ್ಣಪ್ಪ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲರಾದ ಮಂಜುನಾಥ ಪುರಸಭಾ ಅಧ್ಯಕ್ಷರಾದ ಪರಮೇಶ, ಮುಖ್ಯ ಅಧಿಕಾರಿ ಪ್ರಶಾಂತ್, ರಾಷ್ಟ್ರ ಪ್ರಶಸ್ತಿ ವಿಜೇತ ಲಕ್ಷ್ಮೀದೇವಮ್ಮ ಉಪಸ್ಥಿತರಿದ್ದರು ಸಂಗೊಳ್ಳಿ ರಾಯಣ್ಣ ಯುವ ವೇದಿಕೆಯ ದರ್ಶನ್ ಸ್ವಾಗತಿಸಿ ವಂದಿಸಿದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button