ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಒದಗಿಸಿ.

ರಾಜ್ಯದಲ್ಲಿ ಮಳೆಯಾಗದ ಕಾರಣ ಬರಗಾಲದಿಂದ ರೈತರು ಕಂಗಾಲಾಗಿ ಹೋಗಿದ್ದಾರೆ.ಹೊಳೆ, ಬಾವಿ ಮೂಲಕ ನೀರಾವರಿ ಸೌಭ್ಯವನ್ನು ಮಾಡಿಕೊಳ್ಳಲು ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ.ಕೇವಲ ಮೂರು ತಾಸು ವಿದ್ಯುತ್ ನೀಡುತ್ತಿದ್ದ ಕಾರಣ ಬೆಳೆಗಳಿಗೆ ನೀರು ಪೂರೈಕೆಯಾಗದೆ ಒಣಗಿ ಹೋಗುತ್ತಿವೆ.
ಸರ್ಕಾರದವರು ಕೆಲಸಕ್ಕೆ ಬಾರದ ಸೌಲಭ್ಯ ಕೊಡುವ ಬದಲು ರೈತರಿಗೆ ಗೊಬ್ಬರ ಮತ್ತು ಕೀಟನಾಶ ಔಷಧ ಇಂತಹವುಗಳ ಬೆಲೆ ಕಡಿಮೆ
ಮಾಡಿದ್ರೆ ಉಪಯೋಗವಾಗುತ್ತದೆ.ರಾತ್ರಿ ಹೊತ್ತು ಕೊಟ್ರೆ ಯಾವಾಗ ನೀರು ದೊರಕಬೇಕು,ರಾತ್ರಿಯಲ್ಲಿ ಸರಕಾರಿ ಅಧಿಕಾರಿಗಳು ಕೆಲಸ ಮಾಡಲ್ಲ,ಯಾವ ರಾಜಕಾರಣಿಯೂ ಮನೆ ಬಿಟ್ಟು ಆಚೇನೆ ಬರಲ್ಲ,ಅಂತದ್ರಲ್ಲಿ ನೀವು ರಾತ್ರಿ ಹೊಲಕ್ಕೆ ಹೋಗಿ ನೀರು ನಮ್ಮ ರೈತರು ಬಿಡಬೇಕು, ರಾತ್ರಿ ನೀವು ಕೊಡುವ ಲೈನ್ ಪಾಳೆ ಸಲುವಾಗಿ ನಿದ್ದೆಗೆಡಬೇಕು,ಅದನ್ನು ಸರಿಯಾಗಿ ನೀಡುತ್ತಿಲ್ಲ. ಲೋಡ್ ಶೆಡ್ಡಿಂಗ್ ಕಾರಣಕ್ಕೆ ಪಂಪ್ ಸೆಟ್‌ಗಳು ಸ್ಥಗಿತಗೊಂಡಿರುವುದರಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ನೀರಿಲ್ಲದೆ ಮತ್ತು ತಾಪಮಾನ ಹೆಚ್ಚಳದಿಂದ ಬೆಳೆಗಳು ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.ಬೆಳೆ ಕೈಗೆ ಬರುವ ಲಕ್ಷಣಗಳಿಲ್ಲ ಆದ್ದರಿಂದ ಕನಿಷ್ಠ 7 ತಾಸು ವಿದ್ಯುತ್ ನೀಡಬೇಕು.ಹಾಗೂ ಅವರಿಗೆ ಅನುಕೂಲ ಆಗುವಂತೆ ಮುಂಜಾನೆ ಲೈನ್ ಪಾಳೆ ಕೊಡಬೇಕು.
ರೈತ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲಾ.ಆದರಿಂದ
ಸರ್ಕಾರದವರು ಮೊದಲು ಅವರ ಕಷ್ಟಕ್ಕೆ ಸ್ಪಂದಿಸಿ.
ಸಂಪಾದಕೀಯ:- ಭೂಮಿಕಾ ರಂಗಪ್ಪ ದಾಸರಡ್ಡಿ, ಬಿದರಿ ( ವಿಧ್ಯಾರ್ಥಿನಿ )