ಅಪಘಾತದಲ್ಲಿ ಮೃತ ಹೊಂದಿರುವ ಗೋವಿಂದನ ಕುಟುಂಬಕ್ಕೆ ಸಾಂತ್ವನ ಹೇಳಿದ – ಸಚಿವರಾದ ಬಿ. ನಾಗೇಂದ್ರ ಅಭಿಮಾನಿಗಳು.
ಗುಡೇಕೋಟೆ ಅಕ್ಟೋಬರ್.23

ಇತ್ತೀಚೆಗೆ ಶುಕ್ರವಾರದಂದು ನಡೆದ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಕೆರೆಯ ಹತ್ತಿರ ಹುಣಸೆಮರದ ಕ್ರಾಸಿಂಗ್ ನಲ್ಲಿ ನಡೆದ ಮುಖಾ ಮುಖಿ ಭೀಕರ ಬೈಕ್ ಅಪಘಾತಕ್ಕೆ ಯರೋಬಯ್ಯನಹಟ್ಟಿ ಗ್ರಾಮದ ನಿವಾಸಿ ಗೋವಿಂದ ಮತ್ತು ಋಷಿ ತಂದೆ ಮಗಳು ಇಬ್ಬರೂ ಶುಕ್ರವಾರ ಮೃತಪಟ್ಟ ಪರಿಣಾಮ ಬಳ್ಳಾರಿ ಉಸ್ತುವಾರಿ ಸಚಿವರು, ಹಾಗೂ ಪರಿಶಿಷ್ಟ ಪಂಗಡಗಳ ರಾಜ್ಯಸಚಿವ ಬಿ.ನಾಗೇಂದ್ರ ಅವರ ಅಭಿಮಾನಿಗಳು, ಹಾಗೂ ಗಂಡಬೋಮ್ಮನಹಳ್ಳಿ ಗ್ರಾಪಂ ವಿ.ಎಸ್.ಎಸ್.ಎನ್. ಅದ್ಯಕ್ಷ ಕೆ.ದಿಬ್ಬದಹಳ್ಳಿ ಗಜಾನನ ಏರ್ರಿಸ್ವಾಮಿ ರವರು ಸೋಮವಾರ ಮನೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಚಿವರ ಪರವಾಗಿ ವೈಯಕ್ತಿಕ 20,000 ರೂಪಾಯಿಗಳನ್ನು ನೀಡಿ ಸಾಂತ್ವನ ಹೇಳಿದರು.ಕೆ.ದಿಬ್ಬದಹಳ್ಳಿ ಗ್ರಾಮದ ಏರ್ರೀಸ್ವಾಮಿ ರವರು ಈ ಹಿಂದಿನಿಂದಲೂ ತಾಲೂಕಿನಲ್ಲಿ ಒಂದಿಲ್ಲೊಂದು ಸಮಾಜ ಸೇವೆ, ಕ್ರೀಡೆ ಜೊತೆಗೆ ಬಡ ವಿದ್ಯಾರ್ಥಿಗಳ ಕಲಿಕೆಗೆ ಸಹಾಯ,ಕಲೆ, ಸಾಂಸ್ಕೃತಿಗೆ ಒತ್ತು ನೀಡುತ್ತ, ರಾಜಕೀಯ ಗುರುಗಳಾದ ಈಗಿನ ಕ್ರೀಡಾ ಮಂತ್ರಿ ಬಿ.ನಾಗೇಂದ್ರ ರವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡ ಗಜಾನನ ಏರ್ರಿಸ್ವಾಮಿ ರವರು ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ಹಲವಾರು ಸಮಾಜಮುಖಿ ಕೆಲಸಗಳನ್ನು ತಮ್ಮ ಕೈಲಾದಷ್ಟು ಸಹಾಯ ಮಾಡಿ ಇಡೀ ತಾಲೂಕಿನಾದ್ಯಂತ ಚಿರ ಪರಿಚಿತರಾಗಿದ್ದಾರೆ, ಯರ್ರೋಬಯ್ಯನಹಟ್ಟಿ ಗ್ರಾಮದ ಅಪಘಾತ ಹೊಂದಿದ ಮೃತ ಗೋವಿಂದ ರವರ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿದ ಅವರು,ಮನೆಗೆ ಬೇಕಾಗುವ ಅಕ್ಕಿ ಮತ್ತು ಇನ್ನೂ ಇತರೆ ಪದಾರ್ಥಗಳನ್ನು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಬಿಜೆಪಿ ಹಿರಿಯ ಮುಖಂಡ ಮುತ್ತೆಪಾಲಯ್ಯ, ಕೃಷ್ಣ, ಮಲ್ಲಯ್ಯ, ಬೋರಯ್ಯ, ಇತರರಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ. ಕೂಡ್ಲಿಗಿ