ಶೌರ್ಯ ಸಾಹಸದ ಪ್ರತಿರೂಪ ಕಿತ್ತೂರು ರಾಣಿ ಚೆನ್ನಮ್ಮ – ಕೆ. ನೇಮರಾಜ್ ನಾಯ್ಕ್.
ಕೊಟ್ಟೂರು ಅಕ್ಟೋಬರ್.23

ಭಾರತದ ಸ್ವತಂತ್ರದ ಪ್ರಪ್ರಥಮ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಆಚರಣೆ ಪ್ರಯುಕ್ತ ಸೋಮವಾರ ಚಪ್ಪರದಹಳ್ಳಿಯ ಕೊಂಡಿ ಬಸವಣ್ಣನ ದೇವಸ್ಥಾನದಿಂದ ಹೊರಟು ಮೆರವಣಿಗೆ ಕರಿನಂದಿ ಬಸವಣ್ಣನ ದೇವಸ್ಥಾನದವರಿಗೆ ಟ್ರ್ಯಾಲಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಭಾವ ಚಿತ್ರವನ್ನು ಇರಿಸಿ ಪುಷ್ಪ ಅಲಂಕಾರಿತ ಮೆರವಣಿಗೆ ನಡೆಸಲಾಯಿತು.

ಹಗರಿಬೊಮ್ಮನಹಳ್ಳಿ ಕ್ಷೇತ್ರದ ಮಾನ್ಯ ಶಾಸಕರು ಕೆ ನೇಮರಾಜ್ ನಾಯ್ಕ್ ಮೆರೆವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು ಇಂದು ಪ್ರತಿಯೊಂದು ಮನೆಯಲ್ಲೂ ಸಹ ಚನ್ನಮ್ಮನ ಶೌರ್ಯ-ಸಾಹಸದ ಕಥೆ ಹೇಳುವ ಮೂಲಕ ಹೆಣ್ಣು ಮಕ್ಕಳನ್ನು ಸಬಲರನ್ನಾಗಿಸಬೇಕೆಂದು ಹೇಳಿದರು.ನಂತರ ಎಂ ಎಂ ಜೆ ಹರ್ಷವರ್ಧನ್ ಅವರು ಮಾತನಾಡಿ ಬ್ರಿಟಿಷರ ವಿರುದ್ಧ ಹೋರಾಡಿದ ಕನ್ನಡರ ಅಪ್ರತಿಮಾ ಕೆಚ್ಚೆದೆಯ ಹೋರಾಟಗಾತಿ .ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಶೌರ್ಯ ಮತ್ತು ಧೈರ್ಯದಿಂದ ಇಂದಿಗೂ ನಮಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿವಿಧ ಹಾಡುಗಳು ಮಕ್ಕಳಲ್ಲಿ ನೃತ್ಯ ಪ್ರದರ್ಶನ ನೀಡಿದರು ಹಾಗೂ ಮೆರವಣಿಗೆಯಲ್ಲಿ ಮಕ್ಕಳು ಕಿತ್ತೂರಾಣಿ ಚೆನ್ನಮ್ಮನ ವೇಷ ಧರಿಸಿ ಗಮನ ಸೆಳೆಯಲಾಯಿತು.ಈ ಸಂದರ್ಭದಲ್ಲಿ ಕೆ.ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾಕ್ಷಿ, ಉಪಾಧ್ಯಕ್ಷೆ ಸುಮಾ ಹರಳು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಕೊಟ್ರೇಶ್, ರೇಣುಕಾ, ಬಸವನಗೌಡ್ರು ಹರಳು, ಅಡವಿ ಸ್ವಾಮಿ, ನಂದಪ್ಪ, ತೋಪುರಾಜಪ್ಪ, ಗೌಡ್ರು ಈರಣ್ಣ, ನಾಗೇಶ್ ಟೈಲರ್, ಇನ್ನೂ ಪ್ರಮುಖ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು