ಎರಡು ಕಾಲಿನ ವಿಶಿಷ್ಟ ಕರುವಿಗೆ ಜನ್ಮ ನೀಡಿದ ಹಸು.
ಹಾರಕಬಾವಿ ಅಕ್ಟೋಬರ್.24

ಕಾನಾ ಹೊಸಹಳ್ಳಿ ಹೋಬಳಿಯ ಸಮೀಪದ ಹಾರಕಬಾವಿ ಗ್ರಾಮದಲ್ಲೊಂದು ಹಸು 2 ಕಾಲುಗಳನ್ನು ಹೊಂದಿರುವ ಕರುವಿಗೆ ಜನ್ಮ ನೀಡಿದೆ. ಕರುವಿಗೆ ಎರಡೇ ಕಾಲು ಇರೋದು ಕಂಡು ಗ್ರಾಮಸ್ಥರಿಗೆ ಆಶ್ಚರ್ಯವಾಗಿದೆ. ಸದ್ಯ ಕರು ಹಾಗೂ ತಾಯಿ ಹಸು ಆರೋಗ್ಯವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕಳೆದ ವರ್ಷಗಳ ಹಿಂದೆ ಕೂಡ್ಲಗಿ ತಾಲೂಕಿನ ಚೌಡಪುರ ಹಾಗೂ ಗುಡೆಕೋಟೆ ಗ್ರಾಮದಲ್ಲೂ ಎರಡು ಕಾಲು ಇರೋ ಕರು ಜನನವಾಗಿತು, ಇಂತಹ ಅಪರೂಪದ ಕರು ಇದೀಗ ಹಾರಕಬಾವಿ ಗ್ರಾಮದಲ್ಲಿ ಜನಿಸಿದೆ. ಕರುವಿಗೆ ಎರಡೇ ಕಾಲು ಇರೋದು ಕಂಡು ಗ್ರಾಮಸ್ಥರಿಗೆ ಆಶ್ಚರ್ಯವಾಗಿದೆ. ಸದ್ಯ ಕರು ಹಾಗೂ ತಾಯಿ ಹಸು ಆರೋಗ್ಯವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಎರಡು ಮುಂಗಾಲುಗಳನ್ನು ಹೊಂದಿರದೆ ಕೇವಲ ಎರಡು ಹಿಂಗಾಲುಗಳನ್ನು ಹೊಂದಿದ ಹೋರಿ ಕರುವಿಗೆ ಜನನ. ಇದು ಗ್ರಾಮಸ್ಥರಲ್ಲಿ ಬಹು ಅಚ್ಚರಿ ಮೂಡಿಸಿದೆ. ಮಾತ್ರವಲ್ಲದೆ ಸುದ್ದಿ ತಿಳಿದ ನೆರೆ ಹೊರೆಯ ಗ್ರಾಮಗಳ ಗ್ರಾಮಸ್ಥರು, ನೆಂಟರು ಕರುವನ್ನು ನೋಡಲು ಧಾವಿಸುತ್ತಿದ್ದಾರೆ. ಆಕಳು ಹಾಗೂ ಅದರ ಕರು ಆರೋಗ್ಯವಾಗಿದೆ ಎಂದು ರೈತ ಹಡಪದ ಬಸಣ್ಣ ತಿಳಿಸಿದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ