ಆತ್ಮ ಜ್ಞಾನವನ್ನು ಅನುಗ್ರಹಿಸುವವನು ಸದ್ಗುರು – ಶ್ರೀಶಾರದಾಶ್ರಮದ ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಜು.14





ಶಿಷ್ಯನಿಗೆ ಆತ್ಮ ಜ್ಞಾನವನ್ನು ಅನುಗ್ರಹಿಸುವವನು ನಿಜವಾದ ಸದ್ಗುರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು. ನಗರದ ವಾಸವಿ ಕಾಲನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಶ್ರೀಗುರುಪೂರ್ಣಿಮೆ” ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಗುರುವಿನ ಶ್ರೇಷ್ಠತೆ ಗಿಂತ ಶಿಷ್ಯನ ಶ್ರದ್ಧೆ ದೊಡ್ಡದು. ಗುರು ಶಿಷ್ಯನ ಪಾಪಗಳನ್ನು ತೆಗೆದು ಕೊಳ್ಳುತ್ತಾನೆ. ಅವನ ಅಜ್ಞಾನವನ್ನು ತೊಲಗಿಸಿ ಸುಜ್ಞಾನವನ್ನು ದಯಪಾಲಿಸುವ ಗುರು ಕರ್ಮ ಬಂಧವನ್ನು ನಾಶಪಡಿಸುತ್ತಾನೆ. ಆದ್ದರಿಂದ ಶಿಷ್ಯನ ಆಧ್ಯಾತ್ಮಿಕ ಉನ್ನತಿಯಲ್ಲಿ ಸದ್ಗುರುವಿನ ಪಾತ್ರ ಹಿರಿದು ಎಂದು ಮಾತಾಜೀ ಬಣ್ಣಿಸಿದರು. ಈ ಸಂದರ್ಭದಲ್ಲಿ ಅವರು ಮಹರ್ಷಿ ವೇದ ವ್ಯಾಸರ ಸಾಹಿತ್ಯಿಕ ಕೊಡುಗೆ ಗಳನ್ನು ಸ್ಮರಿಸಿದರು.
ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಗುರು ಭಜನೆ ಹಾಗೂ 108 ಬಾರಿ ಶ್ರೀರಾಮಕೃಷ್ಣ ನಾಮಸ್ಮರಣೆ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಹೂವಿನ ಲಕ್ಷ್ಮೀದೇವಮ್ಮ, ವಿಮಲಾ, ಡಾ, ಬಸವರಾಜಪ್ಪ, ನಾಗರತ್ನಮ್ಮ, ಶಾರದಾಮ್ಮ, ದೊಡ್ಡಜ್ಜಯ್ಯ, ಗೋವಿಂದರೆಡ್ಡಿ, ಯತೀಶ್ ಎಂ ಸಿದ್ದಾಪುರ, ಮಂಜುಳ, ವಿಮಲಾ,ಸಿರಿ, ವನಜಾಕ್ಷಿ ಮೋಹನ್, ಮಾಣಿಕ್ಯ ಸತ್ಯನಾರಾಯಣ, ಗೀತಾ ವೆಂಕಟೇಶರೆಡ್ಡಿ, ಅನ್ವಿಕಾ, ಕವಿತಾ, ಋತಿಕ್, ಸಂತೋಷ್, ಡಾ, ಭೂಮಿಕ, ಗೀತಾ ನಾಗರಾಜ್, ಮಮತ ಕೃಷ್ಣ, ಮೀನಾಕ್ಷಿ, ಪದ್ಮ ನಾಗರಾಜ್, ರಶ್ಮಿ ಪಂಡಿತಾರಾಧ್ಯ, ಉಷಾ ಸೇರಿದಂತೆ ಸದ್ಭಕ್ತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

