ವೀರರಾಣಿ ಕಿತ್ತೂರು ಚನ್ನಮ್ಮನವರ ಆದರ್ಶಪ್ರಾಯ ವ್ಯಕ್ತಿತ್ವ ಇಂದಿಗೂ ಮಾದರಿ – ಶಂಕರಪ್ಪ ನೇಗಲಿ.
ಹುನಗುಂದ ಅಕ್ಟೋಬರ್.25

ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ದ ಕೆಚ್ಚೆದೆಯಿಂದ ಹೋರಾಡಿದ ವೀರವನಿತೆ ಮಹಿಳೆ ವೀರರಾಣಿ ಕಿತ್ತೂರ ಚನ್ನಮ್ಮನವರು ಆದರ್ಶಪ್ರಾಯ ವ್ಯಕ್ತಿತ್ವ ಇಂದಿಗೂ ಮಾದರಿಯಾಗಿದೆ ಎಂದು ಲಿಂಗಾಯತ ಪಂಚಮಸಾಲಿ ಸಮಾಜ ತಾಲೂಕ ಅಧ್ಯಕ್ಷ ಶಂಕ್ರಪ್ಪ ನೇಗಲಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವೀರರಾಣಿ ಕಿತ್ತೂರ ಚನ್ನಮ್ಮನವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ನಾಡನ್ನು ಪರಕೀಯರ ಸಂಕೋಲೆಯಿಂದ ಬಿಡಿಸಲು ದಿಟ್ಟತನದಿಂದ ಹೋರಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಇಂದು ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಈ ನಾಡಿನ ಅನ್ನದಾತ ಸಂಕಷ್ಟದಲ್ಲಿದ್ದು.ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆಯನ್ನು ಮಾಡದೇ ಸರಳ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದರು.

ವಿ.ಮ.ಬ್ಯಾಂಕ್ ನಿರ್ದೇಶಕ ಮಹಾಂತೇಶ ಅವಾರಿ ಮಾತನಾಡಿ ಕಿತ್ತೂರ ಚನ್ನಮ್ಮನವರನ್ನು ಒಂದು ಜಾತಿಗೆ ಸೀಮಿತಗೊಳಿಸದೇ ಎಲ್ಲ ಜಾತಿ ಜನಾಂಗದವರು ಸೇರಿ ಎಲ್ಲಾ ಮಹಾತ್ಮರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದಾಗ ಮಾತ್ರ ಅದಕ್ಕೊಂದು ಅರ್ಥ ಬರಲಿದೆ.ಅವರು ಈ ಸಮಾಜಕ್ಕೆ ಆದರ್ಶ ಪ್ರಾಯರಾದವರು ಅಂತವರ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಅವಶ್ಯ ಎಂದರು.ಉಪನ್ಯಾಸಕ ಡಾ.ನಾಗರಾಜ ನಾಡಗೌಡ್ರ ಮಾತನಾಡಿ ಕಿತ್ತೂರ ಸಂಸ್ಥಾನ ನಾಡಿನಲ್ಲಿಯೇ ಶ್ರೀಮಂತ ಮತ್ತು ಹೆಸರು ವಾಸಿಯಾಗಿತ್ತು ಈ ಸಂಸ್ಥಾನವನ್ನು ಕಬಳಿಸ ಬೇಕೆಂದು ಹುನ್ನಾರು ಮಾಡಿದ ಬ್ರಿಟಿಷ್‌ರ ವಿರುದ್ದ ಕಿತ್ತೂರ ಚನ್ನಮ್ಮಾಜೀ ಹೋರಾಟ ಮಾಡುತ್ತಾರೆ ಮೊದಲ ಯುದ್ದದಲ್ಲಿ ತ್ಯಾಕರೇ ಚನ್ನಮ್ಮನವರಿಗೆ ಸೋತು ಚನ್ನಮ್ಮಜೀ ಕೈ ಮೇಲಾಗುತ್ತಿದೆ.ಚನ್ನಮ್ಮನವರ ಹೋರಾಟದ ಕಿಚ್ಚು,ಛಲ,ಅದಕ್ಕೆ ಪೂರಕವಾಗಿ ರಾಯಣ್ಣನಂತ ಬಲಗೈ ಬಂಟನ ಸಹಕಾರದಿಂದ ಕಿತ್ತೂರ ಸಂಸ್ಥಾನ ಉಳಿಸಿಕೊಳ್ಳಲು ಹೋರಾಡಿ ಕೊನೆಗೆ ವೀರ ಮರಣವನ್ನು ಅಪ್ಪತ್ತಾರೆ.ಅಂತಹ ದಿಟ್ಟ ಮಹಿಳೆಯ ವೀರತನ ಇಂದಿನ ಮಹಿಳೆಯಿಗೆ ಮಾದರಿಯಾಗಿದೆ ಎಂದರು.ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಕೊಂಡು ತಹಶೀಲ್ದಾರ ನಿಂಗಪ್ಪ ಬಿರಾದಾರ ಮಾತನಾಡಿದರು.ಈ ಸಂದರ್ಭದಲ್ಲಿ ಸಮಾಜ ಮುಖಂಡರಾದ ಶೇಖರಪ್ಪ ಬಾದವಾಡಗಿ,ಶಿವಾನಂದ ಕಂಠಿ,ಸಂಗಪ್ಪ ಹೂಲಗೇರಿ,ಶಂಕ್ರಪ್ಪ ತಾಳಿಕೋಟಿ,ಸಂಗಣ್ಣ ಗಂಜೀಹಾಳ,ಸಿದ್ದಪ್ಪ ಹೊಸೂರ,ಸಿಪಿಐ ಎಸ್.ಎ.ಸವದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ