ನಮ್ಮೆಲ್ಲರ ಬದುಕಿಗೆ ನೀನಾದೆ ಪ್ರೇರಕ. ನಿನ್ನ ಕಂಡು ನಮ್ಮ ಬದುಕು ಸಾರ್ಥಕ.

ದೊಡ್ಡಮನೆಯ ಕುವರ,
ಸ್ವಾರ್ಥವಿಲ್ಲದೆ ಕರ್ನಾಟಕವನ್ನಾಳಿದ
ಸಾಹುಕಾರ.
ಅಳಿಸಿದೆ ನೀ ಬಡವರ ಜೀವನದಲ್ಲಿನ ಕಪ್ಪು,
ಎಂದೆಂದಿಗೂ ಅಜರಾಮರ ನೀ ಅಪ್ಪು.
ನಗುಮುಖದ ರಾಜಕುಮಾರ,
ನೀನೆಂದಿಗೂ ನಮ್ಮ ಹೃದಯದಲ್ಲಿ ಅಮರ.
ಕಾಯುತ್ತಿದೆ ಜನತೆ ನೀ ಬರಲು ಮಗುವಾಗಿ,
ಮರಳಿ ಬಾ ಮತ್ತೆ ನೀ ನಮ್ಮೆಲ್ಲರ ನಗುವಾಗಿ..
ಜೊತೆಗಿರದ ಜೀವ
ಎಂದಿಗಿಂತ ಜೀವಂತ
✍️ ಕು|| ತ್ರಿವೇಣಿ ಆರ್. ಹಾಲ್ಕರ್
ಗೊಬ್ಬರವಾಡಿ,ಕಲಬುರ್ಗಿ ಜಿಲ್ಲೆ
ಕೃಷಿ ಮಹಾವಿದ್ಯಾಲಯ
ಕಲಬುರ್ಗಿಯ ವಿದ್ಯಾರ್ಥಿನಿ