3000 ಮೀ. ಓಟದಲ್ಲಿ ಎನ್.ಮಹಾಲಕ್ಷ್ಮಿ ಪ್ರಥಮ – ರಾಜ್ಯ ಮಟ್ಟಕ್ಕೆ ಆಯ್ಕೆ.
ಕಾನಾ ಹೊಸಹಳ್ಳಿ ಅಕ್ಟೋಬರ್.29

ಸಮೀಪದ ಪೂಜಾರಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಎನ್. ಮಹಾಲಕ್ಷ್ಮಿ ಜಿಲ್ಲಾ ಮಟ್ಟದ 3000 ಮೀಟರ್, ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಹರಪನಹಳ್ಳಿ ಕ್ರೀಡಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಎನ್. ಮಹಾಲಕ್ಷ್ಮಿ ಜಿಲ್ಲಾ ಮಟ್ಟದ 3000 ಮೀಟರ್, ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಹರ್ಷ ಜಿ.ಬಿ 1500 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದರಂತೆ ಅಥ್ಲೆಟಿಕ್ ವಿಭಾಗದಲ್ಲಿ ಇದೇ ಪ್ರೌಢ ಶಾಲೆಯ ವಿಧ್ಯಾರ್ಥಿನಿ ಮಾನಸ ಎಲ್.ಎಂ. 800 ಮೀಟರ್ ಓಟದಲ್ಲಿ ಹಾಗೂ ನಂದೀಶ್ ಡಿ.ಎಂ 5 ಕಿಲೋಮೀಟರ್ ಕಾಲು ನೆಡೆಗೆ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮತ್ತು ಕೆ.ಎಂ. ಅನುಸೂಯಮ್ಮ 3 ಕಿ.ಮೀ ಕಾಲುನಡಿಗೆ ಓಟದಲ್ಲಿ ದ್ವಿತೀಯ ಸ್ಥಾನ ಗೆಲುವು ದಾಖಲಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಈ ಸಾಧನೆಗೆ ಪೂಜಾರಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಕೆ ಬಸಯ್ಯ ಹಾಗೂ ದೈಹಿಕ ಶಿಕ್ಷಕರಾದ ನಾಗಭೂಷಣ ಸೇರಿದಂತೆ ಶಾಲೆಯ ಎಲ್ಲಾ ಸಹ ಶಿಕ್ಷಕರುಗಳು ಮತ್ತು ಪೋಷಕರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ರಾಜಕೀಯ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ