ಹೂವಿನ ಹಡಗಲಿ ರೈತರಿಂದ ಪೈಪ್ ಲೈನ್ ಗಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಯಶಸ್ವಿಯಾದ – ಶಾಸಕ-ಡಾ. ಶ್ರೀನಿವಾಸ್ ಎನ್.ಟಿ

ಕೂಡ್ಲಿಗಿ ಅಕ್ಟೋಬರ್.30

74 ಕೆರೆಗಳಿಗೆ ನೀರು ತುಂಬಿಸಲು ದಿ. 30-10-23 ರಂದು ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ಗಣ್ಯ ಮಾನ್ಯರೊಂದಿಗೆ ತೆರಳಿ ಹೂವಿನ ಹಡಗಲಿ ಸಿಂಗಟಲೂರು ಏತಾ ನೀರಾವರಿ  ಮತ್ತು  ರಾಜವಾಳ ಗ್ರಾಮದ “ಕೂಡ್ಲಿಗಿ ಜಾಕ್ ವಾಲ್” ( ಕೂಡ್ಲಿಗಿ  74 ಕೆರೆಗಳಿಗೆ ನೀರು ತುಂಬಿಸುವ ಪಂಪ್ ಸೆಟ್ )ಗೆ ಭೇಟಿ ನೀಡಿ ವಿಸ್ತೃತವಾದ ವರದಿ ಗಮನಿಸಿ ಇಂಜಿನೀಯರ್ ಗಳಾದ ಐಗಳ ಪ್ರಕಾಶ ಇಇ , ಶಿವಮೂರ್ತಿ ಇಇ, ರಾಘವೇಂದ್ರ ಎ ಇಇ , ರಾಜ ಡಿ.ಎನ್ ಗಳೊಂದಿಗೆ  ಪರಿಶೀಲಿಸಿದರು.  ಒಂಬತ್ತು ಕಿ. ಮೀ. ಪೈಪ್ ಲೈನ್ ಸಮಸ್ಯೆಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುಂಠಿತವಾಗಿತ್ತು. ನ್ಯಾಯಯುತ  ಪರಿಹಾರಕ್ಕಾಗಿ ಆಗ್ರಹಿಸಿ ಹೂವಿನ ಹಡಗಲಿ  ಹಳ್ಳಿಗಳ  ರೈತರು ತಡೆ ಹಿಡಿದಿದ್ದರು. ಭೂಮಿ ಸ್ವಾಧೀನ ಪಡಿಸಿಕೊಳ್ಳಲು  ಕೂಡ್ಲಿಗಿ ಭಾಗದ ಜನರ ಒಳಿತಿಗಾಗಿ ಕೆರೆಗಳಿಗೆ ನೀರು ತುಂಬಿಸಲು ಅವಕಾಶ ಮಾಡಿ ಕೊಡಬೇಕು ಎಂದೂ ಶಾಸಕರು ಒತ್ತಾಯಿಸಿದರು.‌

ಶಾಸಕರು ಮಾತನಾಡಿ,  ಕೂಡ್ಲಿಗಿ ರೈತರು ಸುಖವಾಗಿಲ್ಲ. ಪ್ಲೋರೈಡ್ ನೀರಿನಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಬರ ಗಾಲದಿಂದ ಜನ ತತ್ತರಿಸಿ ನಿತ್ಯ ಗುಳೇ  ಹೋಗುತ್ತಿದ್ದಾರೆ.  ನಮ್ಮ ಒಳಿತಿಗಾಗಿ ಒಂದು ಹೆಜ್ಜೆ ಮುಂದೆ ಇಡುತ್ತಿದ್ದೇವೆ.  ನೀವು ಒಂದು ಹೆಜ್ಜೆ ನಮಗಾಗಿ ಮುಂದೆ ಇಡಬೇಕು.  ಶಕ್ತಿ ಮೀರಿ ನಿಮ್ಮ ಪರ ನಿಲ್ಲುತ್ತೇವೆ ಎಂದರು.  ಶಾಸಕರ ಮನದಾಳದ ಮಾತಿನಿಂದ ಅನಕನಹಳ್ಳಿ –  ರಾಜ ವಾಳಗ್ರಾಮದ ರೈತರು ಮನಃ ಪೂರ್ವಕವಾಗಿ ಭೂಮಿ ಕೊಡಲು  ಒಪ್ಪಿದರು. ರೈತ ಬಾಂಧವರ ಸ್ಪಂದನೆಗೆ  ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಪರವಾಗಿ ತುಂಬು ಹೃದಯದ ಅಭಿನಂಧನೆಗಳನ್ನು ತಿಳಿಸುತ್ತೇವೆ.  ರೈತರ ಪರ ಧ್ವನಿ ಎತ್ತಿದ  ಶಾಸಕರು  ಮಾತಿನ ಜಾಣ್ಮೆ ಮತ್ತು ಬುದ್ಧಿ ವಂತಿಕೆಯಿಂದ ಹೂವಿನ ಹಡಗಲಿ ರೈತರ ಮನಸ್ಸನ್ನು ಗೆದ್ದಿರುವುದು ಇದೆ.‌  

ಹೂವಿನ ಹಡಗಲಿ ತಾಲೂಕಿನ ರಾಜವಾಳದ  – ಶ್ರೀನಿವಾಸ್ ರೆಡ್ಡಿ ,  ಅನಕನಹಳ್ಳಿ ಗ್ರಾಮದವರಾದ  ದೇವರಾಜ ರೆಡ್ಡಿ , ಹೆಚ್, ಎಮ್, ಮಳೇಸ್ವಾಮಿ, ಕೆ. ಎಲ್, ರೆಡ್ಡಿ,  ಹಾಲೇಶ,  ದೇವೆಂದ್ರಪ್ಪ ರೆಡ್ಡಿ, ಶಿವಾರೆಡ್ಡಿ, ಹನುಮರೆಡ್ಡಿ, ರಾಜರೆಡ್ಡಿ, ಕೆ.ದೇವರಾಜ, ಕೆ. ನಾಗರಾಜ, ಶೇಖರ ರೆಡ್ಡಿ, ಜೆ. ಮಲ್ಲೇಶ, ಸಚಿನ್ ರೆಡ್ಡಿ, ಮೌನೀಶ್ ರೆಡ್ಡಿ, ಸುರೇಶ್ ಮಲಿಕಿ ಒಡಿಯರ್ , ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯರಾದ ಬಸವರಾಜ ಮತ್ತು  ಐಗಳ ಚಿದಾನಂದಪ್ಪನವರು  ಉಪಸ್ಥಿತರಿದ್ದರು.  ಕೂಡ್ಲಿಗಿ ತಾಲೂಕಿನ  ಮುಖಂಡರಾದ ನಾಗರಕಟ್ಟೆ ರಾಜಣ್ಣ, ಗುಂಡು ಮುಣುಗು ತಿಪ್ಪೇಸ್ವಾಮಿ, ಕೆ. ಎಮ್.‌ಶಶಿಧರ, ಎಮ್. ಗುರುಸಿದ್ಧನ ಗೌಡ, ಕಾವಲಿ ಶಿವಪ್ಪನಾಯಕ, ಅಜ್ಜನ ಗೌಡ, ರಾಘವೇಂದ್ರ, ರೈತ ಸಂಘದ ಮಹೇಶ, ನಿಂಬಳಗೆರೆ ಕಲ್ಲೇಶಣ್ಣ, ಇಒ ಬಸಣ್ಣ, ನಜೀರ್ ಸಾಬ್, ಕುರಿಹಟ್ಟಿ ಬೋಸಣ್ಣ, ಖಾನಹೊಸಹಳ್ಳಿ  ದುಗ್ಗಪ್ಪ, ಎಸಿ ಚೆನ್ನಬಸಪ್ಪ, ಮಲ್ಲಿಕಾರ್ಜುನ ಗೌಡ, ಶಾಮಿಯಾನ ಚಂದ್ರು, ಹೂಡೇಂ ಬೋಸೆಮಲ್ಲಯ್ಯ , ಮಾಂತೇಶ್, ವಿಶಾಲಕ್ಷಿ ಗುಡೇಕೋಟೆ, ಗಾಣಗಟ್ಟೆ ಮಾಂತೇಶ್ ಮತ್ತು ಇನ್ನೂ ನೂರಾರು ಮುಖಂಡರು ಉಪಸ್ಥಿತರಿದ್ದರು. 

ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button