ನವೆಂಬರ್ ಮಾಸಕ್ಕೆ ಮೀಸಲಾಗದಿರಲಿ ಕನ್ನಡ ರಾಜ್ಯೋತ್ಸವ.

ಜೇನಿನಂತೆ ಸವಿಯಾಗಿ,ಕೋಗಿಲೆಯಂತೆ ಮಧುರವಾಗಿ,ಕಲ್ಪತರುವಂತೆ ಸಮೃದ್ಧವಾದಂತ ಭಾಷೆ ಕನ್ನಡ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಶಾಸ್ತ್ರೀಯ ಸ್ಥಾನಮಾನ ಪಡೆದಿರುವಂತಹ , ಎಂಟು ಜ್ಞಾನಪೀಠ ಪಶಸ್ತಿ ಪುರಸ್ಕಾರ ಪಡೆದಿರುವಂತಹ , ಹೆಮ್ಮೆಯ ಹೆಗ್ಗಳಿಕೆಯ ಭಾಷೆ ನಮ್ಮ ಕನ್ನಡ ಒಬ್ಬ ವ್ಯಕ್ತಿಯ ಉತ್ತಮ ವ್ಯಕ್ತಿತ್ವ ಬೆಳವಣಿಗೆಗೆ ಬೇಕಾದಂತಹ ಸಂಸ್ಕಾರವನ್ನು ನೀಡಿ ಅವನಲ್ಲಿ ಉತ್ತಮ ಚಾರಿತ್ರ್ಯವನ್ನು ರೂಪಿಸಿ ಸನ್ಮಾರ್ಗದ ಮೂಲಕ ಸಂಪಾದನೆಯನ್ನು ಹೇಳಿ ಕೊಡುವುದರ ಜೊತೆಗೆ ಬದುಕಿನಲ್ಲಿ ನುಡಿದಂತೆ ನಡೆಯಬೇಕು ಎನ್ನುವ ತತ್ವವನ್ನು ಸಾರುವ ಹೃದಯ ಭಾಷೆಯಾಗಿದೆ ಕನ್ನಡ.ಕನ್ನಡದ ಕುಲ ಪುರೋಹಿತರಾದ ಆಲೂರು ವೆಂಕಟರಾಯರು, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪ ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.೧೯೫೬ ರ ನವೆಂಬರ್ ೧ ರಂದು, ಮದ್ರಾಸ್, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು “ಮೈಸೂರು” ಹೆಸರನ್ನು ಉಳಿಸಿ ಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ ೧, ೧೯೭೩ ರಂದು “ಕರ್ನಾಟಕ” ಎಂದು ಬದಲಾಯಿತು.ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1ರಂದು ಆಚರಿಸುತ್ತಾ ಬಂದಿದ್ದೇವೆ.ಆದರೆರಾಜ್ಯೋತ್ಸವ ವೆನ್ನುವುದು ಒಂದು ವಾರ್ಷಿಕ ಜಾತ್ರೆ ಆಗಿರುವುದು ವಿಪರ್‍ಯಾಸ. ನವೆಂಬರ್ ತಿಂಗಳು ಮುಗಿದ ಬಳಿಕ ಕನ್ನಡ- ನಾಡು ನುಡಿಯ ಕುರಿತು ನಾವ್ಯಾರೂ ತಲೆ ಕೆಡಿಸಿಕೊಳ್ಳಲು ಹೋಗದಿರುವುದು ದುರದೃಷ್ಟಕರ. ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವ ನಡೆಯಲಿ, ಅದಕ್ಕೆ ಯಾರದೂ ತಕರಾರಿಲ್ಲ. ಆದರೆ ಕನ್ನಡ ನಾಡು- ನುಡಿ ಕುರಿತ ಎಚ್ಚರ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ಅದು ವರ್ಷ ಪೂರ್ತಿ ಎಚ್ಚರವಾಗಿರಲಿ. ಕನ್ನಡ ಕುರಿತ ಕಾಳಜಿ, ಕಳವಳ ಹೀಗೆ ನಿರಂತರವಾಗಿ ನಮ್ಮೆದೆಯೊಳಗಿದ್ದರೆ ನಮ್ಮ ನಾಡು- ನುಡಿಗೆ ದೈನೇಸಿ ಸ್ಥಿತಿ ಒದಗುವ ಸಾಧ್ಯತೆ ಖಂಡಿತಾ ಬರೋಲ್ಲ.ನವೆಂಬರ್ ಮಾಸಕ್ಕೆ ಮೀಸಲಾಗದಿರಲಿ ಕನ್ನಡ ರಾಜ್ಯೋತ್ಸವ.ಸುಮಾರು ಎರಡೂವರೆ ಸಹಸ್ರ ಮಾನದ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆ ಕನ್ನಡ. ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಸಹ ಪ್ರಮುಖವಾಗಿದೆ. ಆದರೆ ವಿಷಾಧ ವೆಂದರೆ ಇಂದಿನ ಪೋಷಕರು ಹಾಗೂ ಮಕ್ಕಳಿಗೆ ನಾಡಿನ ಭಾಷೆ, ಸಂಸ್ಕೃತಿಯ ಬಗ್ಗೆ ಅಷ್ಟು ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಶಾಲೆಯಲ್ಲಿ ಬಿಡಿ ಮನೆಯಲ್ಲೂ ಕನ್ನಡ ಮಾತ ನಾಡದಂತೆ ಪೋಷಕರು ಮಕ್ಕಳಿಗೆ ತಾಕೀತು ಮಾಡುತ್ತಾರೆ ಎಂಬುದು ನಿಜಕ್ಕೂ ವಿಪರ್ಯಾಸ. ಭವಿಷ್ಯಕ್ಕಾಗಿ ಇಂಗ್ಲಿಷ್ ಬಳಕೆ ಅಥವಾ ಕಲಿಕೆ ಅನಿವಾರ್ಯವಾದರೂ ಕನ್ನಡವನ್ನು ಕಡೆ ಗಣಿಸುವುದು ಎಷ್ಟು ಸರಿ?. ನಾವು ಮನೆಗಳಲ್ಲೇ ಮಕ್ಕಳಿಗೆ ಈಗಿನಿಂದಲೇ ಕನ್ನಡ ಆಂಗ್ಲಮಯವಾಗಿ ಬೆಳಸಿದರೆ ಮುಂದೆ ಕನ್ನಡ ಭಾಷೆಯ ಅಸ್ತಿತ್ವ ಏನಾಗಬಹುದು? ಈ ಬಗ್ಗೆ ಎಲ್ಲಾ ಪೋಷಕರು ಖಂಡಿತವಾಗಿಯೂ ಚಿಂತಿಸಬೇಕಿದೆ.ಕನ್ನಡ ಎಂದಿಗೂ ನಮ್ಮನ್ನು ಹೆತ್ತ ತಾಯಿಯಾಗಿಯೇ ಉಳಿಯಲಿ, ಇತರೆ ಭಾಷೆಗಳನ್ನು ನಮ್ಮ ಸಂಬಂಧಿಕರಂತೆ ಭಾವಿಸೋಣವೇ?.ಯಾವುದೇ ಕನ್ನಡ ಪರ ಸಂಘಟನೆಗಳು ಸಹ ನವೆಂಬರ್ ಮಾಸಕ್ಕೆ ಮಾತ್ರ ಕನ್ನಡ ರಾಜ್ಯೋತ್ಸವವನ್ನು ಮೀಸಲಾಗಿಸದೇ ಕನ್ನಡ ಪರ ಹೋರಾಟಗಳನ್ನು, ಜಾಗೃತಿ ಅಥವಾ ಅರಿವು ಕಾರ್ಯಕ್ರಮಗಳನ್ನು ವರ್ಷ ಪೂರ್ತಿ ಆಯೋಜಿಸುವುದು ಕನ್ನಡ ರಾಜ್ಯೋತ್ಸವಕ್ಕೆ ಅರ್ಥ ಪೂರ್ಣ ಎನಿಸುತ್ತದೆ.ಕನ್ನಡ ಭಾಷೆಯ ಬಳಕೆ ಮತ್ತು ಭಾಷೆಯ ಬಗ್ಗೆ ಇರುವಂತಹ ಅಭಿಮಾನ ಮಾಯವಾಗುತ್ತಿದೆ ಹಾಗೂ ಪ್ರತಿಷ್ಠಿತ ಮತ್ತು ಹಲವಾರು ಕಚೇರಿಗಳಲ್ಲಿ ವ್ಯಾವಹಾರಿಕ ಭಾಷೆಯು ಇಂಗ್ಲೀಷ್ ಆಗಿರುವುದರಿಂದ ಇಂತಹ ಕಂಪನಿಗಳಲ್ಲಿ ಮತ್ತು ಕಚೇರಿಗಳಲ್ಲಿ ಕೆಲಸ ಗಿಟ್ಟಿಸಿ ಕೊಳ್ಳುವಲ್ಲಿ ಇಂಗ್ಲಿಷ್ ಭಾಷೆಯ ಪ್ರಭಾವಕ್ಕೆ ಒಳಗಾ ಗುತ್ತಿದ್ದಾರೆ ಅಂದಮಾತ್ರಕ್ಕೆ ಬೇರೆ ಭಾಷೆಯನ್ನು ದ್ವೇಷಿಸಿ ಕಂಪನಿಗಳು ಎಂದರ್ಥವಲ್ಲ ಬೇರೆ ಭಾಷೆಗಳು ನಮ್ಮ ಮನೆಯ ಕಿಟಕಿಗಳಿದ್ದಂತೆ ಇರಲಿ ನಮ್ಮ ಮಾತೃಭಾಷೆ ನಮ್ಮ ಮನೆಯ ಹೆಬ್ಬಾಗಿಲಿ ನಂತಿರಲಿ ಎಂದು ಹೇಳುತ್ತಾ ಕನ್ನಡವನ್ನು ಹೆಚ್ಚು ಹೆಚ್ಚು ಬಳಸೋಣ ಬೇರೆ ಭಾಷೆಯಲ್ಲಿನ ಸಾರವನ್ನು ಗ್ರಹಿಸಿ ನಮ್ಮ ಭಾಷೆಯನ್ನು ಮತ್ತಷ್ಟು ಸಂಪತ್ಪರಿತ ಗೊಳಿಸೋಣ . ಇದೆಲ್ಲದರ ಜೊತೆಗೆ ಕನ್ನಡಿಗರಾದ ನಾವು ಪತಿಯೊಬ್ಬರೂ ಒಬ್ಬರು ಒಬ್ಬರಿಗೆ ನಮ್ಮ ಭಾಷೆಯನ್ನು ತಿಳಿಸಿ ಕಲಿಸೋಣ . ನಮ್ಮದೇ ಆದಂತಹ ಒಂದು ಅಳಿಲು ಸೇವೆ ನಮ್ಮ ನುಡಿಗಾಗಿ ಮಾಡೋಣ , ನಮ್ಮ ಭಾಷೆಯನ್ನು ಬೇರೆಯವರಿಗೆ ಕಲಿಸುವುದರ ಜೊತೆಗೆ ನಮ್ಮ ಮಕ್ಕಳಲ್ಲಿ ನಮ್ಮ ನೆಲ – ಜಲ – ಭಾಷೆಯ ಬಗ್ಗೆ ಅಭಿಮಾನ ಗೌರವವನ್ನು ಬೆಳೆಸೋಣ , ನಾವು ನಮ್ಮ ಭಾಷಾಭಿಮಾನ ವನ್ನು , ದೇಶಾ ಭಿಮಾನವನ್ನು ಬೆಳೆಸಿಕೊಳ್ಳುತ್ತಾ , ನಮ್ಮ ಆತ್ಮ ಸಾಕ್ಷಿಯನ್ನು ನಾಡು ಸಾಕ್ಷಿಯಾಗಿರಿಸಿ ಕೊಂಡು ಕನ್ನಡದ ಕೈಂಕರ್ಯದಲ್ಲಿ ಪಾಲುದಾರರಾಗೋಣ .

ಜೈ ಕನ್ನಡಾಂಬೆ ಜೈ ಕರ್ನಾಟಕ.

ಲೇಖಕನ:ಭೂಮಿಕಾ ರಂಗಪ್ಪ ದಾಸರಡ್ಡಿ,

ಬಿದರಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button