ಉಚಿತ ಸ್ಕೂಲ್ ಬ್ಯಾಗ್ ಮತ್ತು ನೋಟ್ ಬುಕ್ – ವಿತರಣಾ ಕಾರ್ಯಕ್ರಮ.

ವಿಜಯಪುರ ಜು.10

ದಿನಾಂಕ 10/07/2025 ರಂದು ಸರಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಮಾದರಿ ಹಿರಿಯ ಪ್ರಥಮಿಕ ಶಾಲೆ ನಂ – 49 ಅಫಜಲಪುರ ಟಿಕ್ಕೆ ವಿಜಯಪುರ ನಗರ ಶಾಲೆಯಲ್ಲಿ ವಿಜಯಪುರ ನಗರ. ಮತ ಕ್ಷೇತ್ರದ ಶಾಸಕರಾದ ಸನ್ಮಾನ ಶ್ರೀ ಬಸನಗೌಡ.ರಾ ಪಾಟೀಲ (ಯತ್ನಾಳ) ಅವರ ನೇತ್ರತ್ವದಲ್ಲಿ ರಾಷ್ಟ್ರೀಯ ಗ್ರಾಮೀಣ ಸ್ವಾಸ್ಥ್ಯ ಮಿಷನ್ ನವ ದೆಹಲಿ ಇವರು ಮಕ್ಕಳಿಗೆ ಉಚಿತವಾಗಿ ಕೊಡ ಮಾಡಿದ ಶಾಲಾ ಬ್ಯಾಗ್ ಗಳು ಹಾಗೂ ಕರ್ನಾಟಕದ ಅಗ್ರಗಣ್ಯ ಔಷಧಿ ಮಳಿಗೆಯಾದ ಮಾರುತಿ ಮೆಡಿಕಲ್ಸ್ ಸ್ಕೋರ್ಸ್ ಬೆಂಗಳೂರು ಇವರು ಕೊಡ ಮಾಡಿದ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮ ಜರುಗಿಸಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸನ್ಮಾನ್ಯ ಶ್ರೀ ಸಂಗಮೇಶ ಬಬಲೇಶ್ವರ ಅಧ್ಯಕ್ಷರು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಇವರು ಮಾತನಾಡುತ್ತಾ ಮಕ್ಕಳ ಸರ್ವೋತ್ತಮ ಅಭಿವೃದ್ಧಿಗಾಗಿ ಸರಕಾರಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ಬುಕ್ ಗಳನ್ನು ದಾನಿಗಳಿಂದ ಸಂಗ್ರಹಿಸಿ ವಿತರಿಸುತ್ತಿರುವ ಕಾರ್ಯಕ್ರಮ ಶ್ಲಾಘನೀಯ ಮತ್ತು ಶಾಲೆಯಲ್ಲಿ ಮಕ್ಕಳು ನಡೆಸಿದ ಶಿಸ್ತು ಬದ್ಧ ಶಾಲಾ ಚಟುವಟಿಕೆ ರೀತಿ ಮಾದರಿಯಾಗಿದೆ ಎಂದು ಹೇಳಿದರು ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಸೆಲೆಬ್ರೆಟಿಗಳಾಗ ಬೇಕು ಮತ್ತು ನೀವು ನಡೆದುಕೊಂಡು ಬರುವಾಗ ಎಲ್ಲರೂ ನಿಮ್ಮ ಜೊತೆ ನಿಂತು ಸೆಲ್ಸಿ ತೆಗೆದು ಕೊಳ್ಳುವಂತೆ ಬೆಳೆಯಬೇಕು ಎಂದು ಪ್ರೋತ್ಸಾಹಿಕ ಮಾತುಗಳನ್ನಾಡಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.ಮುಖ್ಯ ಅತಿಥಿಗಳಾದ ಸನ್ಮಾನ್ಯ ಶ್ರೀ ಅಲ್ತಾಫ ಇಟಗಿ ಮಹಾನಗರ ಪಾಲಿಕೆ ಸದಸ್ಯರು ಮಾತನಾಡಿ ಈ ಶಾಲೆಯಲ್ಲಿ ಕಲಿತ 5 ವಿದ್ಯಾರ್ಥಿಗಳು ಮುರಾರ್ಜಿ ವಸತಿ ಶಾಲೆಗೆ ಆಯ್ಕೆ ಯಾಗಿರುವುದು ಸಂತೋಷ ತಂದಿದೆ ಎಂದು ಹೇಳಿದರು.ಶ್ರೀ ಎ.ಕೆ ದಳವವಾಯಿ ಶಿಕ್ಷಣ ಸಂಯೋಜಕರು ಮಾತನಾಡುತ್ತಾ ಗುರು ಪೂರ್ಣಿಮೆ ದಿನ ಬಾಲ ವಿಕಾಸ ಅಕಾಡೆಮಿ ಧಾರವಾಡದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಸಂಗಮೇಶ ಬಬಲೇಶ್ವರ ರವರು ಶಾಲೆಗೆ ಆಗಮಿಸಿರುವುದು ಸಂತಸ ತಂದಿದೆ.

ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು ಮತ್ತು ಮುಖ್ಯ ಗುರುಗಳು ಈ ರೀತಿ ದಾನಿಗಳಿಂದ ಸುಮಾರು 27 ಲಕ್ಷರೂಪಾಯಿಗಳ ವರೆಗಿನ ವಸ್ತುಗಳನ್ನು ದಾನ ಪಡೆದು ಬಡ ಶಾಲಾ ಮಕ್ಕಳಿಗೆ ತಲುಪಿಸುತ್ತಿರುವ ಕಾರ್ಯ ವಿಜಯಪುರ ನಗರ ವಲಯದಲ್ಲಿ ಮಾದರಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಯೋಗೇಶ ಕುಮಾರ ನಡುವಿನಕೇರಿ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು ತಮ್ಮ ಅವಧಿಯಲ್ಲಿ ನೂತನ ಧ್ವಜಸ್ತಂಭ ನಿರ್ಮಾಣ, ಆಪ್ಟಿಕಲ್ ವೆಚ್ ಬೋರ್ಡ ಮತ್ತು ನೋಟ್ ಬುಕ್. ಮತ್ತು 125 ಬೆಂಚುಗಳನ್ನು ಶ್ರೀ ವಿಶ್ವನಾಥ ಸಿಂದಗಿ ಸಂಯೋಜಕರು ತಾವಿದಾಸ, ತುಳಸಿದಾಸ ವ್ಯಜದಾಸ ಚಾರಿಟೇಬಲ್ ಟ್ರಸ್ಟ್ ಮುಂಬೈ ಇವರ ಮುಖಾಂತರ ಪಡೆಯಲಾಯಿತೆಂದು ತಿಳಿಸಿದರು. ಮಂಡಾ ಫೌಂಡೇಶನ್ ಬೆಂಗಳೂರು ಇವರಿಂದ ಸ್ಮಾರ್ಟ್ ಕ್ಲಾಸ, ಹಾಗೂ ಭೂಸೇನಾ ನಿಗಮದ ವತಿಯಿಂದ ಮಕ್ಕಳಿಗೆ ಹೌಸ್ ಡ್ರೆಸ್, ಲಾಡಿ ಫೌಂಡೇಶನ್ ವತಿಯಿಂದ ಹೆಣ್ಣು ಮಕ್ಕಳಿಗೆ ಹೈ ಟೆಕ್ ಶೌಚಾಲಯ, ಹಾಗೂ ಶಾಸಕರ ಅನುದಾನದಲ್ಲಿ ಶಾಲೆಗೆ ಹೈ ಮಾಸ್ಕ, ಶಾಲಾ ರಿಪೇರಿ, ವಾಟರ್ ಫಿಲ್ಮರ್. ಹಾಗೂ ವಿವೇಕ ಯೋಜನೆಯಡಿಯಲ್ಲಿ 2 ಶಾಲಾ ತರಗತಿ ಕೋಣೆಗಳನ್ನು ಮಂಜೂರಿಸಿರುವುದರ ಜೊತೆಗೆ ನನ್ನನ್ನು ವಿಧಾನ ಸಭಾ ಕ್ಷೇತ್ರದ ತಾಲೂಕು ಮಟ್ಟದ ಶಿಕ್ಷಣ ಸುಧಾರಣಾ ಸಮಿತಿಗೆ ನಾಮನಿರ್ದೇಶನ ಮಾಡಿದ್ದಕ್ಕಾಗಿ ಸನ್ಮಾನ ನಗರ ಶಾಸಕರು ಶ್ರೀ ಬಸನಗೌಡ.ರಾ ಪಾಟೀಲ್ (ಯತ್ನಾಳ) ರವರಿಗೆ ಅಭಿನಂದನೆಗಳನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಮೂಹ ಸಂಪನ್ಮೂಲ ವ್ಯಕ್ತಿ ಬಸವರಾಜ ಪಡಗಾನುರ, ಗ್ರಾಮಸ್ಮರಾದ ಆರೀಫ್ ಜತ್ತ ಬಂದೇನವಾಜ ನಗಾರ್ಚಿ, ಮಹಾದೇವ ದೊಡಮನಿ, ಶರಣಪ ಚಲವಾದಿ, ಸಂತೋಷ ಲವಗಿ ಸಾಬು ಹೆಳವರ ರವರು ಭಾಗವಹಿಸದ್ದರು.ಶ್ರೀ ಚಂದ್ರಕಾಂತ ಕನಸೆ ಮುಖ್ಯ ಗುರುಗಳು ಸ್ವಾಗತಿಸಿದರು, ಶ್ರೀ ಮಲ್ಲಯ್ಯ ಸ್ವಾಮಿ ಶಿಕ್ಷಕರು ನಿರುಪಣೆ ಮಾಡಿದರು. ಶ್ರೀಮತಿ ಸವಿತಾ ತಿಗಡಿ ಶಿಕ್ಷಕಿಯರು ವಂದಿಸಿದರು.

ವರದಿ:ಚಂದ್ರಕಾಂತ ಕನಸೆ, ವಿಜಯಪುರ

ಮೊಬೈಲ್:ನಂಬರ್ – 9972699087

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button