ಸಾಹಿತ್ಯ ಮನುಷ್ಯನ ಸಂಬಂಧ ಬೆಸೆಯುವುದರ ಜೊತೆ ವರ್ತಮಾನದ ತಲ್ಲಣಗಳ ಮೇಲೆ ಬೆಳಕು ಚೆಲ್ಲುತ್ತವೆ – ಚಂದರಶೇಖರ ಹೆಗಡೆ.
ಹುನಗುಂದ ನವೆಂಬರ್.6

ಮನುಷ್ಯ ಸಂಬಂಧಗಳನ್ನು ಬೆಸೆಯುವದರ ಜೊತೆಗೆ ಪ್ರಸಕ್ತ ವರ್ತಮಾನದ ತಲ್ಲಣಗಳನ್ನು ದೂರಿಕರಿಸುವಲ್ಲಿ ವಿಮರ್ಶೆ ಲೇಖನಗಳು ಮತ್ತು ಕವನಗಳು ಬಹಳ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಬಾದಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಚಂದ್ರಶೇಖರ ಹೆಗಡೆ ಅಭಿಪ್ರಾಯಪಟ್ಟರು.ರವಿವಾರ ಪಟ್ಟಣದ ಹೊನ್ನಕುಸುಮ ಸಾಹಿತ್ಯ ವೇದಿಕೆ ಹಾಗೂ ವಿಜಯ ಮಹಾಂತೇಶ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಾಧ್ಯಪಕ ಎಂ.ಡಿ. ಚಿತ್ತರಗಿ ಅವರ ಮಥನ (ವಿಮರ್ಶಾ ಲೇಖನಗಳು) ಹಾಗೂ ಗಾಯಗೊಂಡಿವೆ ಬಣ್ಣ (ಕವನ ಸಂಕಲನ) ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಗಾಯಗೊಂಡಿವೆ ಬಣ್ಣ ಕೃತಿ ಬಾವೋನ್ಮಾದ ಲೋಕಕ್ಕೆ ಕರೆದೊಯ್ಯುವುದಾಗಿದೆ. ಸಾಮಾಜಿಕ ಕಳಕಳಿ ಹಾಗೂ ವೈಚಾರಿಕಕ ನೆಲೆಗಟ್ಟಿನಲ್ಲಿ ಕಾವ್ಯ ಮೂಡಿ ಬಂದಿದೆ.ಕಾವ್ಯಗಳು ಸಮಾಜದ ಅನೇಕ ವಿಚಾರಗಳನ್ನು ಜನಮಾನಸಕ್ಕೆ ತಿಳಿಸುವ ಒಂದು ಪ್ರಮುಖ ವೇದಕೆಯಾಗಿದೆ ಎಂದರು. ಬಾಗಲಕೋಟೆ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಸುಮಂಗಲಾ ಮೇಟಿ ಅವರು ಮಥನ ಪುಸ್ತಕ ಕುರಿತು ಮಾತನಾಡಿ, ವಿಮರ್ಶಾ ಲೋಕಕ್ಕೆ ಸೇರ್ಪಡೆಗೊಂಡ ಅತ್ಯಧ್ಬುತ ಕೃತಿ ಇದಾಗಿದೆ.ಸಮಾಜದಲ್ಲಿ ಜೀವಂತವಿರುವ ಅಸಹನೀಯ ಪದ್ಧತಿಗಳ ಬಗ್ಗೆ ವಿಮರ್ಶಾ ಲೇಖನದಲ್ಲಿ ಬೆಳಕು ಚೆಲ್ಲುವ ಕಾರ್ಯ ಮಾಡಿದ್ದಾರೆ.ಪುಸ್ತಕ ಓದುವ ಸಂಸ್ಕೃತಿ ಹೆಚ್ಚಬೇಕು ಎಂದರೆ ಮಥನದಂತಹ ವಿಮರ್ಶಾ ಕೃತಿಗಳು ಹೊರಬರಬೇಕು ಎಂದರು.ವಿಜಯ ಮಹಾಂತೇಶ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಚ್ .ಎಸ್. ಬೋಳಿಶೆಟ್ಟರ್ ಮಾತನಾಡಿ, ಸೃಜನಶೀಲ ಕೃತಿಗಳನ್ನು ರಚಿಸುವುದು ಕಠಿಣ ಕೆಲಸ.ಆ ಕೆಲಸವನ್ನು ಎಂ.ಡಿ.ಚಿತ್ತರಗಿ ಅವರ ಯಶಸ್ವಿ ಆಗಿ ಮಾಡಿದ್ದಾರೆ ಅವರಿಂದ ಇನ್ನು ಅನೇಕ ಇಂತಹ ಕೃತಿಗಳು ಮೂಡಿಬರಲಿ ಎಂದರು.ವಿಜಯ ಮಹಾಂತೇಶ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಶಶಿಕಲಾ ಮಠ ಅಧ್ಯಕ್ಷತೆವಹಿಸಿಕೊಂಡು ಮಾತನಾಡಿದರು.ಕೃತಿ ಕರ್ತೃ ಹಾಗೂ ಪ್ರಾಧ್ಯಾಪಕ ಎಂ.ಡಿ. ಚಿತ್ತರಗಿ ತಮ್ಮ ಅನುಭವಗಳನ್ನು ಹಂಚಿಕೊAಡರು.ಈ ಸಂದರ್ಭದಲ್ಲಿ ಪ್ರೊ. ಕೆ.ಎ.ಬನ್ನಟ್ಟಿ,ಪ್ರೊ, ಬಿ.ಬಿ. ಕಡ್ಲಿ,ನಿವೃತ್ತ ಶಿಕ್ಷಕ ಮಹಾಂತೇಶ ತೆನಹಳ್ಳಿ,ಎಸ್.ಎನ್. ಹಾದಿಮನಿ,ಕಸಾಪ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಸೇರಿದಂತೆ ಅನೇಕ .ಸಾಹಿತ್ಯಾಶಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.ಅಭಿಷೇಕ ಮುಡಪಲದಿನ್ನಿ ಪ್ರಾರ್ಥಿಸಿದರು.ಹೊನ್ನ ಸಾಹಿತ್ಯ ವೇದಿಕೆ ಅಧ್ಯಕ್ಷ ಸಂಗಣ್ಣ ಮುಡಪಲದಿನ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕ ಗೀತಾ ತಾರಿವಾಳ ಸ್ವಾಗತಿಸಿ ನಿರೂಪಿಸಿದರು. ಬಾಕ್ಸ್ ಸುದ್ದಿ- ಸಾಹಿತ್ಯ ಕ್ಷೇತ್ರ ಸಾಗರವಿದ್ದಂತೆ ಇಲ್ಲಿ ಬರಹಗಾರರಿಗೆ ಹಮ್ಮು ಬಿಮ್ಮು ಇರಬಾರದು.ಹಿರಿಯ ಲೇಕಕರು ಕಿರಿಯ ಮತ್ತು ಯುವ ಬರಹಗಾರರಿಗೆ ಸೂಕ್ತ ಮಾರ್ಗದರ್ಶನ, ಮುಕ್ತವಾದ ಸಲಹೆ ಸೂಚನೆಗಳನ್ನು ನೀಡಿ ಈ ಕ್ಷೇತ್ರವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಬೇಕು. ಎಂ.ಡಿ. ಚಿತ್ತರಗಿ.ಲೇಖಕರು ಮತ್ತು ಪ್ರಾಧ್ಯಾಪಕ ಹುನಗುಂದ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ