ನ.7 ರಂದು ಗ್ರಾ.ಪಂ ನೌಕರರ ವಿವಿಧ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರು ಚಲೋ – ಚನ್ನದಾಸರ.
ಹುನಗುಂದ ನವೆಂಬರ್.6

ಗ್ರಾಮ ಪಂಚಾಯತ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇದೇ ನ.೭ ರಂದು ಮಂಗಳವಾರ ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಹುನಗುಂದ ತಾಲೂಕಿನ ಗ್ರಾ.ಪಂ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಗ್ರಾ.ಪಂ ನೌಕರರ ಸಂಘದ ತಾಲೂಕಾಧ್ಯಕ್ಷ ಮಾರುತಿ ಚನ್ನದಾಸರ ತಿಳಿಸಿದ್ದಾರೆ.ರವಿವಾರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು ಗ್ರಾ.ಪಂಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ ವಸೂಲಿಗಾರ,ಕ್ಲರ್ಕ್,ಡಾಟಾ ಎಂಟ್ರಿ ಅಪರೇಟರ್,ನೀರು ಗಂಟಿಗಳು,ಜವಾನ,ಸ್ವಚ್ಚತಾಗಾರರನ್ನು ಏಕಕಾಲದಲ್ಲಿ ಸರ್ಕಾರಿ ನೌಕರರು ಎಂದು ಘೋಷಿಸಬೇಕು,ಬೆಲೆ ಏರಿಕೆ ಅನುಗುಣವಾಗಿ ಕನಿಷ್ಠ 31 ಸಾವಿರ ಸಂಬಳವನ್ನು ನಿಗಧಿಪಡಿಸಬೇಕು,ನಿವೃತ್ತಿ ಮತ್ತು ಮರಣ ಹೊಂದಿದ ಪಂಚಾಯತ ನೌಕರರಿಗೆ ಪ್ರತಿ ತಿಂಗಳು 6 ಸಾವಿರ ಪಿಂಚಣೆ ನೀಡುವುದು ಮತ್ತು ಗ್ರಾ.ಪಂಯಲ್ಲಿ ವಾಟರ್‌ಮನ್,ಜವಾನ,ಸ್ವೀಪರ್‌ಗಳಲ್ಲಿ ಕಂಪ್ಯೂಟರ್ ಜ್ಞಾನ ಮತ್ತು ವಿದ್ಯಾರ್ಹತೆ ಯುಳ್ಳವರಿಗೆ ಅವಕಾಶ ನೀಡುವುದು ಸೇರಿದಂತೆ 16 ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಳಬಟ್ಟಿ ಮಾತನಾಡಿ ಗ್ರಾ.ಪಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಯಲಿರುವ ಪ್ರತಿಭಟನೆ ಬೆಂಗಳೂರ ರೈಲು ನಿಲ್ದಾಣದಿಂದ ಪ್ರೀಡ್‌ಂ ಪಾರ್ಕ್ದವರಗೆ ಬೃಹತ್ ಮೆರವಣೆಗೆ ನಡೆಸಿ ಬೇಡಿಕೆ ಈಡೀರಿಕೆಯಾಗುವರಿಗೂ ಧರಣೆ ನಡೆಸಲಾಗುವುದು ಎಂದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ