ಭೀರಪ್ಪ ಹೊಸೂರ ಕಾ.ನಿ.ಪ ಸಂಘದ ಇಂಡಿ – ತಾಲೂಕಾ ಉಪಾಧ್ಯಕ್ಷರಾಗಿ ಆಯ್ಕೆ.
ಇಂಡಿ ಡಿ.12

ಕಾರ್ಯನಿರತ ಪತ್ರಕರ್ತರ ಸಂಘದ ಇಂಡಿ ತಾಲೂಕಾ ಉಪಾಧ್ಯಕ್ಷರಾಗಿ ಇಂಡಿ ಪಟ್ಟಣದ ಭೀರಪ್ಪ ಹೊಸೂರ ಆಯ್ಕೆ ಯಾಗಿದ್ದಾರೆ. ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕಾ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಭೀರಪ್ಪ ಹೊಸೂರ ನಾಮ ಪತ್ರ ಸಲ್ಲಿಸಿದ್ದರು ಅವರು ಚುನಾವಣೆಯಲ್ಲಿ 13 ಮತಗಳು ಪಡೆದು ಆಯ್ಕೆ ಯಾಗಿದ್ದಾರೆ ಎಂದು ಚುನಾವಣಾ ಉಸ್ತುವಾರಿಗಳಾದ ದೇವೇಂದ್ರ ಹೇಳವರ, ರಾಜು ಕೊಂಡಗೂಳಿ ಘೋಷಣಾ ಪತ್ರ ನೀಡಿದರು.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಪ್ಪ.ಬಿ ಹರಿಜನ ಇಂಡಿ

