ದೀಪದಾನ-ದೀಪಾವಳಿ…..

ದೀಪಾವಳಿ ಎಂದ್ರೆ ಎರಡು ಹಣತೆ ಒಂದು ಬತ್ತಿ ಅಲ್ಲ ಎಣ್ಣೆ ಬೆಂಕಿ ಈ ಮೂರು ಸೇರಿಸಿ ದೀಪ ಹಚ್ಚಿದರೆ ದೀಪಾವಳಿ ಆಗುತ್ತೆ ಎನ್ನುತ್ತಾರೆ ಆದರೆ ನನ್ನ ಪ್ರಕಾರ ಅದು ಆಚರಣೆಯಾಗುತ್ತದೆ. ಅದನ್ನು ಕಾರ್ಯ ರೂಪಕ್ಕೆ ತರಬೇಕು ಅದು ಹೇಗೆ ಎಂದರೆ ಉದಾಹರಣೆಗೆ ಬಡವರಿಗೆ ಎಣ್ಣೆ ಇದ್ದರೆ ಪಣತೆ ಇರಲ್ಲ ಪಣತೆ ಇದ್ದರೆ ಬತ್ತಿ ಇರಲ್ಲ ಹೀಗಿರುವಾಗ ಕಡು ಬಡವ ಜನರು ಏನು ಮಾಡಬೇಕು ಮತ್ತು ಹೇಗೆ ದೀಪಾವಳಿ ಆಚರಿಸಬೇಕು ನೀವೇ ಹೇಳಿ ಇದೇ ಸಂದರ್ಭದಲ್ಲಿ. ವಿಜಯಪುರದ ಜ್ಞಾನ ಯೋಗಾಶ್ರಮದ ಲಿಂಗಕ್ಯೆ ಶ್ರೀ ಶಿದ್ದೇಶ್ವರ ಶ್ರೀಗಳು ಒಂದು ಕಡೆ ಪ್ರವಚನದಲ್ಲಿ ಹೀಗೆ ಹೇಳುತ್ತಾರೆ ಬಡವರ ಮನೆ ದೀಪ ಶ್ರೀಮಂತರ ಮನೆ ದೀಪ ಬೇರೆ ಬೇರೆಯಾದರು ದೀಪದ ಬೆಳಕು ಮಾತ್ರ ಒಂದೇ ಅದೇ ರೀತಿ ಸಂತರು ಶರಣರು ಬೇರೆ ಬೇರೆಯಾದರು ಅನುಭವಗಳು ಮಾತ್ರ ಒಂದೇ ಜೀವನದಲ್ಲಿ ಜ್ಞಾನ ದೀಪದ ಬೆಳಕು ಶಾಶ್ವತವಾಗಿ ಬೆಳಗುವಂತೆ ನಮ್ಮ ಬದುಕನ್ನು ರೂಪಿಸಿ ಕೊಳ್ಳಬೇಕು. ಮತ್ತು ಶ್ರೀಗಳು ಹೇಳಿದಂತೆ ದೀಪಗಳು ಮಾತ್ರ ಬೆಳಕು ಬಿರುವದುದು ಅದರ ಜೊತೆಗೆ ಅಜ್ಞಾನದ ದೀಪ ಆರಿಸಿ ಜ್ಞಾನದ ದೀಪದ ಬೆಳಕು ಶಾಶ್ವತವಾಗಿ ಬೆಳಗಬೇಕು ಎನ್ನುತ್ತಾರೆ ಆದರೆ ಬಡತನದಲ್ಲಿ ಹುಟ್ಟಿದಂತಹ ಬಡ ಮಕ್ಕಳಿಗೆ ವಿದ್ಯಾದೀಪ ಹಚ್ಚಿ ಅವರ ಬಾಳು ಬೆಳಗುವುದು ಅದರ ಜೊತೆಗೆ ಹೊಟ್ಟೆಗೆ ಅನ್ನ ಮೈ ಮೇಲೆ ಬಟ್ಟೆ ಇರುವದಕ್ಕೆ ಸೂರು ಕಲ್ಪಿಸಬೇಕು.ಉಪನಿಷತ್ತಿನಲ್ಲಿ ಒಂದು ಮಾತು ಇದೆ. ಅಸತೋಮಾ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತoಗಮಯ.ಅಂದರೆ ಅಸತ್ಯದಿಂದ ಸತ್ಯದ ಕಡೆಗೆ ಅಂಧಕಾರ ದಿಂದ ಪ್ರಕಾಶಕ್ಕೆ ಮೃತ್ಯವಿನಿಂದ ಕರೆದುಕೊಂಡು ಹೋಗು ಎಂದಾಗಿದೆ ಕತ್ತಲೆ ಲೋಕದಿಂದ ಬೆಳಕಿನ ಲೋಕಕ್ಕೆ ಕರೆದುಕೊಂಡು ಹೋಗಬೇಕು ಜ್ಞಾನ ದೀಪ ಹಚ್ಚುವಂತೆ ಮಾಡಬೇಕು.ನಮ್ಮ ಭಾರತ ದೇಶದಲ್ಲಿ ಕೆಲವೊಂದು ಕಡೆ ಬೆಳಕು ಅಂಧವನ್ನು ಕಾಣದೆ ಇರುವವರು ಇದ್ದಾರೆ ಅಂತವರನ್ನು ಬೆಳಕಿಗೆ ತರಬೇಕು ಸರಿದಾರಿ ತೋರಬೇಕು ಅವರ ಬಾಳಲಿ ನಿತ್ಯ ನಿರಂತರ ದೀಪಾವಳಿ ಆಗಬೇಕು ಖ್ಯಾತ ಕವಿ ವಿಮರ್ಶೆಕ ಹಾಗೂ ವೈಚಾರಿಕ ಬರಹಗಾರರಾದ ನಿತ್ಯೋತ್ಸವ ಕವಿ ಡಾ. ಪ್ರೊ. ಕೆ. ಎಸ್. ನಿಸಾರ್ ಅಹ್ಮದ್ ಅವರು ನಿತ್ಯೋತ್ಸವದ ಕವನ ಸಂಕಲದಲ್ಲಿ ದೀಪಗಳ ಕವಿತೆ ಹೀಗೆ ಹೇಳುತ್ತಾರೆ ಎಂದೋ ಒಮ್ಮೆ ಅನಿರೀಕ್ಷಿತ ಮುಗಿವಿ ನೆಲದ ಸಭೆ ಒಂದು ದಿವ್ಯ ಗಳಿಗೆ ಫಲವೇ ನಿಮ್ಮ ಪ್ರಭೆ ಹೂವು ಗರಿಯ ಹೃದಯಗಳೆ ಕಿಡಿಯ ತೊದಲ ನುಡಿಗಳೇ ಬೆಳದಿಂಗಳ ಮರಿಗಳೇ ನಡೆದಿದ್ದರು ಗಾಳಿ ನಗುದಿದ್ದರು ಕತ್ತಲು ಬೆದರದಂತೆ ಹರಾಡುತ್ತಿದೆ ಬೆಳಕು ನಿಮ್ಮ ಸುತ್ತಲೂ.ದೀಪದ ಬಗ್ಗೆ ಈ ರೀತಿ ಹೇಲಿರುವಾಗ ನೀವೇಕೆ ಅವರು ನುಡಿದಂತೆ ನಡೆಯಬಾರದು ಹೆದರದೆ ಬೆದರದೆ ಹರಡುತ್ತಿರಲಿ ನಿಮ್ಮ ಜ್ಞಾನದ ಬೆಳಕು ಜಗದ ಅಗಲದವರಿಗೆ ಅವಾಗ ನೀವು ಈ ಭೂಮಿ ಮೇಲೆ ಜನ್ಮ ತಾಳಿದಕ್ಕೂ ಸಾರ್ಥಕವಾಗುತೆ ನಿಮ್ಮ ಜನ್ಮ ಪಾವನವಾಗುತ್ತದೆ ದೀಪ ಹಚ್ಚಿದ ಮೇಲೆ ಹೇಗೆ ಬೆಳಕು ಬಿರುತ್ತದೆಯೋ ಹಾಗೆ ದಾನ ದೀಪದ ಬೆಳಕು ಮೊಲೆಯಲಿ ಹರಡುತ್ತಿರಲಿ ಒಟ್ಟಿನಲ್ಲಿ ಹೇಳಬೇಕೆಂದರೆ ಶೋಭಾಯಮಾನರಾಗಿರಿ ಅವಾಗ ದೀಪಾವಳಿ ಹಬ್ಬ ಜನ್ಮ ತಾಳಿದಕ್ಕೂ ಜನ್ಮ ಸಾರ್ಥಕವಾಗುತ್ತೆ.

✍️ ಅಮರ. ಎನ್. ಕಾಂಬಳೆ( ಭಿರಡಿ )

ಬೆಳಗಾವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button