ವಿಜಯಪುರದಲ್ಲಿ ರಾಜ್ಯಮಟ್ಟದ ವಧು ವರರ ಅನ್ವೇಷಣಾ ಸಮಾವೇಶ…..!
ವಿಜಯಪುರ( ಫೆ.12):
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೆಂಗಳೂರು, ವಿಜಯಪುರ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ 3ನೇ ರಾಜ್ಯ ಮಟ್ಟದ ವಿಶ್ವಕ ರ್ಮರ ವಧು-ವರರ ಅನ್ವೇಷಣಾ ಸಮಾವೇಶವನ್ನು ಇದೇ 2023 ಫೆಬ್ರುವರಿ 24,25,26 ಈ ಮೂರು ದಿನ ಆಯೋಜಿಸಲಾಗಿದೆ.
ವಿಜಯಪುರ ನಗರದಲ್ಲಿ ಮೂರು ದಿನಗಳ ವರೆಗೆ ನಡೆಯುವ ರಾಜ್ಯ ಮಟ್ಟದ ಉಚಿತ ವಧು-ವರರ ಅನ್ವೇಷಣಾ ಸಮಾವೇಶದಲ್ಲಿ ಮಹಾಸಭಾದ ರಾಜ್ಯಾಧ್ಯಕ್ಷರು, ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ ವಿಶ್ವಕರ್ಮ, ಸಮಾಜದ ವಿವಿಧ ಮಠಾಧೀಶರು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ.
ವಿಶ್ವಕರ್ಮ ಸಮಾಜ ಬಾಂಧವರು ಅಪೇಕ್ಷಿತ ವಧು-ವರರ ಅನ್ವೇಷಕರು, ನಿಗಧಿತ ನೋಂದಣಿ ಅರ್ಜಿ ಪಾರಮ್ ಭರ್ತಿ ಮಾಡಿ, ಇತ್ತೀಚಿನ ಭಾವಚಿತ್ರದೊಂದಿಗೆ ಸ್ಕ್ಯಾನ್ ಮಾಡಿ ವಾಟ್ಸಪ್ ಅಥವಾ ಅಂಚೆ ಮೂಲಕ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ವಿಜಯಪುರ ಉಕ್ಕಲಿ ರಸ್ತೆಯಲ್ಲಿ ಜಗದಾರಾಧ್ಯ ಜಯ ಶಾಂತಲಿಂಗೇಶ್ವರ ವಿಶ್ವಶಾಂತಿ ಭವನ ಶಿವಗಿರಿಯಲ್ಲಿ ಸಮಾವೇಶ ಆಯೋಜನೆ ಮಾಡಿದೆ.
- JOIN OUR INSTAGRAM COMMUNITY
- JOIN OUR FACEBOOK COMMUNITY
- JOIN OUR WHATSAPP COMMUNITY
- JOIN OUR TELEGRAM COMMUNITY
ಈ ಸ್ಥಳಕ್ಕೆ ವಾಟ್ಸಫ್‌ಗೆ ಕಳುಹಿಸಿದ ಅರ್ಜಿ ಪಾರಮ್ ಮತ್ತು ದಾಖಲೆಗಳೊಂದಿಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಸಮಾವೇಶದ ಸಂಘಟಕರಾದ ಪ್ರಮೋದ ಎಂ. ಬಡಿಗೇರ, ಮೊ: 9448035713, ಬಾಳು ಗಿರಿಗಾವರ್ ಮೊ: 9901740472 ಈ ನಂಬರಗಳಿಗೆ ಸಂಪರ್ಕಿಸಲು ಸಂಘಟಕರು ಪ್ರಕಟಣೆಗೆ ತಿಳಿಸಿದ್ದಾರೆ.