ಬಾಲಕ ನಿಧನ – ಕುಟುಂಬಕ್ಕೆ ಶಾಸಕ ಎನ್.ಟಿ.ಶ್ರೀನಿವಾಸ್ ಅವರಿಂದ ಸಾಂತ್ವನ.

ಸೂಲದಹಳ್ಳಿ ನವೆಂಬರ್.19

ಸಮೀಪದ ಸೂಲದಹಳ್ಳಿ ಗ್ರಾಮದ ಭೀಮಪ್ಪ ಅವರ ಪುತ್ರನಾದ 10 ವರ್ಷದ ಬಾಲಕ ನಾಲ್ಕನೆಯ ತರಗತಿ ಓದುತ್ತಿರುವ ಯುವರಾಜ ಆಟ ಆಡುತ್ತಿತ್ತು ಕಾಲು ಜಾರಿ ಜುಂಜನ ಕಟ್ಟೆ ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕನ ಮನೆಗೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಮೃತ ಬಾಲಕನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹಾಗೂ ಆರ್ಥಿಕ ನೆರವು ನೀಡಿ ಸಂಬಂಧಿಸಿದ ಇಲಾಖೆಯಿಂದ ಸರ್ಕಾರದ ಪರಿಹಾರವನ್ನು ಆದಷ್ಟು ಬೇಗನೆ ಕೊಡಿಸುವ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕ್ಷೇತ್ರದ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಚಿಕ್ಕಜೋಗಿಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ನಿಧನಗೊಂಡ ಮಗುವಿನ ಸಾವಿನ ಪ್ರಕರಣ ಕುರಿತು ಮಾಹಿತಿಯನ್ನು ಪಡೆದು ಕೊಂಡರು. ತಾಲೂಕಿನ ಚಿಕ್ಕ ಮಕ್ಕಳ ಪೋಷಣೆಯಲ್ಲಿ ಪೋಷಕರು ನಿಗಾವಹಿಸಬೇಕು ಎಂದೂ ತಿಳಿ ಹೇಳಿದರು ಹಾಗೂ ಕಾನಾ ಹೊಸಹಳ್ಳಿ ಪೊಲೀಸ್ ಮತ್ತು ವೈದ್ಯಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆ ಸ್ಥಳದಲ್ಲೇ ಮಾತನಾಡಿ ಸರ್ಕಾರದಿಂದ ಬರುವಂತಹ ಪರಿಹಾರ ವ್ಯವಸ್ಥೆ ತಡ ಮಾಡದೆ ಮಾಡಿ ಕೊಡಬೇಕೆಂದು ತಿಳಿಸಿದರು. ಯುವರಾಜ ಅವರ ಕುಟುಂಬಕ್ಕೆ ಶಾಸಕರು ಸಾಂತ್ವನ ಹೇಳಿ ಹಾಗೆ ಆರ್ಥಿಕ ಸಹಾಯ ಧನ ಮಾಡಿದರು ಹಾಗೂ ದುಃಖವನ್ನು ತಡೆದು ಕೊಳ್ಳುವ ಶಕ್ತಿಯನ್ನುಆ ಭಗವಂತ ನೀಡಲಿ ಹಾಗೆಯೇ ಬಾಲಕನ ಆತ್ಮಕ್ಕೆ ಶಾಂತಿ ಸಿಗಲಿ ಎಂದೂ ದೇವರಲ್ಲಿ ಪ್ರಾರ್ಥಿಸಿದರು.

ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button