ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆ ನಾವು ಬಹಿಷ್ಕಾರ ಮಾಡುತ್ತೇವೆ – ಜಿಲ್ಲಾಧ್ಯಕ್ಷ ಸಣ್ಣ ಬಾಲಪ್ಪ.
ಕೂಡ್ಲಿಗಿ ನವೆಂಬರ್.20

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಸೋಮವಾರ ರಂದು ತಾಲೂಕು ಆಡಳಿತ ಸೌಧದ ಮುಂದೆ ಕರ್ನಾಟಕ ರಾಜ್ಯ ಕಾಡು ಗೊಲ್ಲರ ಸಂಘದ ಜಿಲ್ಲಾ ಹಾಗೂ ತಾಲೂಕು ಸಮಿತಿ ಯಿಂದ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದು, ಈ ಸಂರ್ಭದಲ್ಲಿ ತಾಲೂಕಿನಿಂದ ಸುಮಾರು 500ಕ್ಕೂ ಹೆಚ್ಚು ಗೊಲ್ಲರ ಸಮುದಾಯದ ಮುಖಂಡರು ಹಾಗೂ ಯುವಕರು ಹಾಗೂ ಜನರು ಈ ಧರಣಿಯಲ್ಲಿ ಭಾಗವಹಿಸಿದ್ದರು.ಕಾರಣ ‘ಕಾಡು ಗೊಲ್ಲ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಬೇಡಿಕೆಯಾಗಿತ್ತು.ಹಾಗೂ ಕಾಡು ಗೊಲ್ಲರ ಸಮುದಾಯವನ್ನು ಎಸ್. ಟಿ ಜಾತಿಗೆ ಸೇರ್ಪಡೆ ಮಾಡುವಂತೆ ಮುಖ್ಯವಾದ ಬೇಡಿಕೆ ಗಳೊಂದಿಗೆ ಸುಮಾರು 11.ಬೇಡಿಕೆಗಳನ್ನು ಇಟ್ಟುಕೊಂಡು ಸೋಮವಾರ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕಚೇರಿಯ ಮುಂದೆ ಒಂದು ದಿನದ ಶಾಂತಿಯುತ ಪ್ರತಿಭಟನೆ ಮಾಡಲಾಗಿಯಿತು,

ಕಾಡು ಗೊಲ್ಲರ ಜನಾಂಗಕ್ಕೆ ತಕ್ಕಹಾಗೆ ಸರ್ಕಾರದ ಮೂಲಭೂತ ಸೌಲಭ್ಯಗಳು ನಮ್ಮ ಸಮುದಾಯಕ್ಕೆ ಹಾಗೂ ನಾವು ವಾಸಿಸುವ ಹಟ್ಟಿಗಳಲ್ಲಿ ಸರ್ಕಾರದ ಯಾವುದೇ ಸೌಲಭ್ಯ ಸಿಗದೇ ನಮ್ಮ ಜನರು ಅನೇಕ ಅನಿಷ್ಟ ಪದ್ಧತಿಗಳನ್ನು ಅನುಸರಿಸಿದ್ದಾರೆ, ಆದ್ದರಿಂದ ನಮ್ಮ ಜನರಿಗೆ ಸರಿಯಾದ ಶಿಕ್ಷಣದಲ್ಲಿ ರಾಜಕೀಯದಲ್ಲಿ ಆರ್ಥಿಕವಾಗಿ ಹಿಂದುಳಿದಿದ್ದರೆ ಆಳುವಂತ ಸರ್ಕಾರಗಳು ನಮ್ಮಿಂದ ಓಟುಗಳನ್ನು ಪಡೆದುಕೊಂಡು ನಮಗೆ ಸರ್ಕಾರದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ, ಎoದು ಜಿಲ್ಲಾ ಧ್ಯಕ್ಷರಾದ ಸಣ್ಣ ಬಾಲಪ್ಪ ಮಾತನಾಡಿದರು. ನಮ್ಮ ಸಮುದಾಯವನ್ನು ಕಡೆಗಣಿಸಿದರೆ ನಾವು ಮುಂಭರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತೇವೆ ಎಂದು ಜಿ ಪಿ. ಗುರುಲಿಂಗಪ್ಪ ಗೌರವಾಧ್ಯಕ್ಷರು ಸರಕಾರಕ್ಕೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಎಂ.ರೇಣುಕಾ ರವರಿಗೆ ತಾಲೂಕು ಗೊಲ್ಲರ ಸಂಘದ ಅಧ್ಯಕ್ಷರಾದ ಜಿ.ಎಸ್ ದೊಡ್ಡಪ್ಪ, ಹಾಗೂ ಮುಖಂಡರುಗಳು ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿರಿಯಪ್ಪ ಗೌರವಧ್ಯಕ್ಷರು, ವಿರುಪಾಕ್ಷಪ್ಪ ಪ್ರಧಾನ ಕಾರ್ಯದರ್ಶಿ,ರಾಘವೇಂದ್ರ ಪ್ರಧಾನ ಕಾರ್ಯದರ್ಶಿ, ಸಣ್ಣಯ್ಯ ಉಪಾಧ್ಯಕ್ಷರು, ಸಣ್ಣ ಕೆಂಚಪ್ಪ ಸಹ ಕಾರ್ಯದರ್ಶಿ, ಕಾಡಪ್ಪ, ನಿಂಗಪ್ಪ, ದೊಡ್ಡಪ್ಪ, ಬಡಪ್ಪ, ಗೌಡ, ಚಿತ್ತಪ್ಪ,ತಿಮ್ಮಣ್ಣ, ಮಹಾಲಿಂಗಪ್ಪ,ಹಾಗೂ ಸಮುದಾಯದ ಗೌಡ ಪೂಜಾರಿಗಳು ದಳವಾಯಿಗಳು ಧರಣಿಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ. ಕೂಡ್ಲಿಗಿ