ರೈತರ ಜೀವನ ನಿರ್ವಹಣೆಗೆ 1.ಲಕ್ಷ ರೂ ಮುಂಗಡ ಸಾಲ ನೀಡಿ – ಅವೈಜ್ಞಾನಿಕ ಕೃಷಿ ನೀತಿಯನ್ನು ಕೈ ಬಿಡಿ.

ಹುನಗುಂದ ನವೆಂಬರ್.20

ಭಾರತದ ಅವೈಜ್ಞಾನಿಕ ಕೃಷಿ ನೀತಿಯಿಂದ ರೈತರಿಗೆ ನಿರಂತರ ಅನ್ಯಾಯವಾಗುತ್ತಿದೆ.ಅನ್ನದಾತ ನಿರಂತರ ದಾಸೋಹಿ.ನಮ್ಮನ್ನು ಆಳುವ ಸರ್ಕಾರಗಳು ಪುಡಿಗಾಸಿನ ಆಸೆಯನ್ನು ತೋರಿಸಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕಟ್ಟಲು ಹಿಂದೇಟು ಹಾಕುತ್ತಿವೆ ಎಂದು ಗಚ್ಚಿನಮಠದ ವೇ.ಮೂ.ಮಹಾಂತಯ್ಯ ಗಚ್ಚಿನಮಠ ಸರ್ಕಾರದ ವಿರುದ್ದ ಕಿಡಿ ಕಾರಿದರು.ಸೋಮವಾರ ಪಟ್ಟಣದ ಗಚ್ಚಿನಮಠದಲ್ಲಿ ಬರಗಾಲ ಕಾಮಗಾರಿ ಕೈಕೊಳ್ಳುವುದು ಮತ್ತು ಬರ ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ಕರೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರ ಬರಗಾಲ ಘೋಷಣೆ ಮಾಡಿ ಒಂದುವರೆ ತಿಂಗಳ ಗತಿಸಿದರೂ ಕೂಡಾ ಯಾವದೇ ಬರ ಪರಿಹಾರ ರೈತರ ಖಾತಗೆ ಬಂದಿಲ್ಲ.ಬರ ಕಾಮಗಾರಿ ಆರಂಭವಾಗಿಲ್ಲ.ಪ್ರತಿಯೊAದು ಸರ್ಕಾರಗಳು ತಮ್ಮ ಅಧಿಕಾರದ ದುರಾಸೆಯಿಂದ ಹಗ್ಗದ ಜನಪ್ರಿಯತೆಯನ್ನು ಪ್ರಚಾರ ಮಾಡಿ ರೈತರ ಹೆಸರಿನಲ್ಲಿ ಸರ್ಕಾರ ನಡೆಸಿ ರೈತರ ಬೆಳೆದ ಬೆಳೆಗೆ ಸೂಕ್ತ ಬೆಲೆ ನಿಗಧಿ ಮಾಡುತ್ತಿಲ್ಲ.ಸರ್ಕಾರ ಘೋಷಿಸುವ ಸೌಲಭ್ಯಗಳೆಲ್ಲ ಕಾಗದಲ್ಲಿವೆ ಅವುಗಳು ರೈತರಿಗೆ ತಲಪುತ್ತಿಲ್ಲ.ಸರ್ಕಾರ ರೈತರಿಗೆ ಅನುಕೂಲವಾಗುವ ಶಾಶ್ವತ ಯೋಜನೆ ಮತ್ತು ಸೌಲಭ್ಯಗಳನ್ನು ಒದಗಿಸುವ ಕಾರ್ಯವಾಗಬೇಕು ಎಂದರು.ರೈತ ಮುಖಂಡ ಕೃಷ್ಣ ಜಾಲಿಹಾಳ ಮಾತನಾಡಿ ಮಳೆಯಿಲ್ಲದೇ ಭೀಕರ ಬರಗಾಲ ಆವರಿಸಿ ರೈತ ಕುಲ ಸಂಕಷ್ಟದಲ್ಲಿದೆ.ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದರೂ ಕೂಡಾ ಯಾವದೇ ಪರಿಹಾರ ಬಂದಿಲ್ಲ.ಮಳೆಯಾಗುತ್ತೆದೆಂದು ಆಶಾದಾಯಕವಾಗಿ ರೈತರು ಸಾಲ ಸೂಲ ಮಾಡಿ ಬಿತ್ತನೆ ಮಾಡಿದ್ದರೇ ಮಳೆಯಿಲ್ಲದೇ ಬೆಳೆ ನಾಶವಾಗಿ ತೀವ್ರ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು ಮತ್ತು ಜೀವನ ನಿರ್ವಹಣೆಗೆ ಪ್ರತಿಯೊಂದು ಪಿಕೆಪಿಎಸ್ ಮೂಲಕ ಮುಂಗಡ ೧ ಲಕ್ಷ ರೂ ಸಾಲ ಮಂಜೂರ ಮಾಡಬೇಕು,ಗೋ ಶಾಲೆಗಳನ್ನು ಸ್ಥಾಪಿಸಿ ಮೇವು ಪೊರೈಕೆ ಮಾಡಬೇಕು.ಡಿಸಿಸಿ ಬ್ಯಾಂಕಿನಿಂದ ರೈತರಿಗೆ ನೀಡುವ ೧೦ ರಿಂದ ೧೧ ಲಕ್ಷ ಸಾಲ ಸೌಲಭ್ಯಗಳನ್ನು ಸ್ಥಳೀಯ ಪಿಕೆಪಿಎಸ್‌ನಿಂದ ಕೊಡವ ವ್ಯವಸ್ಥೆಯಾಗಬೇಕು,ಪ್ರತಿ ಬೆಳೆಯ ಕಟಾವು ಪೂರ್ವದಲ್ಲಿ ಬೆಂಬಲ ಬೆಲೆ ಘೋಷಿಸಬೇಕು,ಸಹಕಾರಿ ಸಂಘಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ೩ ಲಕ್ಷದಿಂದ ೫ ಲಕ್ಷ ರೂ ಸಾಲ ಸೌಲಭ್ಯ ಕೊಡುತ್ತೇವೆ ಎಂದು ಘೋಷಿಸಿದ್ದರೂ ಕೂಡಾ ಇಲ್ಲಿವರಿಗೂ ಪ್ರತಿಯೊಬ್ಬ ರೈತರಿಗೆ ೫೦ ಸಾವಿರ ಹೊರತು ಹೆಚ್ಚಿಗೆ ಸಾಲ ನೀಡುತ್ತಿಲ್ಲ ಅದನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುವ ಚಳಗಾಲದ ಅಧಿವೇಶನದಲ್ಲಿ ಸರ್ಕಾರ ಗಂಭೀರವಾಗಿ ಆಲೋಚಿಸಿ ನಿರ್ಧಾರ ತಗೆದುಕೊಳ್ಳಬೇಕು ಎಂದರು.ರೈತ ಸಂಘದ ಮಾಜಿ ಅಧ್ಯಕ್ಷ ಮಲ್ಲಣ್ಣ ತುಂಬದ ಮಾತನಾಡಿ ವಿಧಾನ ಮಂಡಲದಲ್ಲಿ ರಾಜಕಾರಣಿಗಳ ಹಗರಣ,ಭ್ರಷ್ಟಾಚಾರ ಸೇರಿದಂತೆ ತಮ್ಮ ವೈಯಕ್ತಿಕ ಚರ್ಚೆಯಲ್ಲಿ ವ್ಯರ್ಥ ಕಾಲಹರಣ ಮಾಡುತ್ತಾರೇ ಹೊರತು ರೈತಪರ ಚರ್ಚೆಗಳು ನಡಯುತ್ತಿಲ್ಲ.ದೇಶಕ್ಕೆ ಅನ್ನ ಹಾಕುವ ರೈತ ಇಂದು ಭೀಕ್ಷೆ ಬೇಡುವ ಪರಸ್ಥಿತಿ ಬಂದಿದೆ.ಪಕ್ಕದ ಜಿಲ್ಲೆ ಕೊಪ್ಪಳದ ರೈತರಿಗೆ ರಾಜ್ಯ ಸರ್ಕಾರದಿಂದ ಪ್ರತಿ ರೈತರ ಖಾತೆಗೆ ೧೨ ಸಾವಿರ ಪರಿಹಾರ ಬಂದಿದೆ.ನಮ್ಮ ಜಿಲ್ಲೆಯ ರೈತರು ಏನು ಪಾಪ ಮಾಡಿದ್ದೇವೆ.ನಮಗ್ಯಾಕಿಲ್ಲ ಪರಿಹಾರ.ರೈತರು ಜಾಗೃತರಾಗಿ ಒಗ್ಗಟ್ಟಾದರೇ ಖಂಡಿತ ಸರ್ಕಾರ ಉಳಿಯಲು ಸಾಧ್ಯವಿಲ್ಲ ಎಂದರು.ಗಚ್ಚಿನಮಠದ ಅಮರೇಶ್ವರ ದೇವರು,ಪುರಸಭೆ ಸದಸ್ಯ ಸಾಂತಪ್ಪ ಹೊಸಮನಿ,ಶೇಖರಪ್ಪ ಬಾದವಾಡಗಿ,ಮಲ್ಲನಗೌಡ ಗೌಡರ,ಬಸಯ್ಯ ಹಿರೇಮಠ,ಬಸವರಾಜ ಕರಂಡಿ,ಬಿ.ವೈ.ಕೊಡಗಾನೂರ ಮಾತನಾಡಿ ಬರಗಾಲ ಪರಿಹಾರ,ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು.ಚನ್ನಬಸಪ್ಪ ಇಳಕಲ್ಲ,ಸೋಮಶೇಖರಗೌಡ ಪೈಲ,ಗಿರಮಲ್ಲಪ್ಪ ಹಳಪೇಟಿ,ಮಹಾಂತೇಶ ಮಠ,ಸಂಗಪ್ಪ ಹಡಪದ,ಕಿಡಿಯಪ್ಪ ಹೂಲಗೇರಿ,ಮುತ್ತಣ್ಣ ಪಲ್ಲೇದ,ಸಂಗಪ್ಪ ಗಾಣಗೇರ,ಗುರಸಂಗಪ್ಪ ತೊಂಡಿಹಾಳ,ಚನ್ನಪ್ಪ ಹೊನವಾಡ,ಈಶ್ವರಪ್ಪ ಹವಲ್ದಾರ ಸೇರಿದಂತೆ ಅನೇಕರು ಇದ್ದರು.ಬಾಕ್ಸ್ ಸುದ್ದಿ-ರೈತರಿಗೆ ಆಗುತ್ತಿರುವ ನಿರಂತರ ಅನ್ಯಾಯದ ವಿರುದ್ದ ಸರ್ಕಾರವನ್ನು ಎಚ್ಚರಿಸಲು ಸಾವಿರಾರು ಸಂಖ್ಯೆಯಲ್ಲಿ ರೈತರು ಒಗ್ಗಟ್ಟಾಗಿ ಉಗ್ರ ಹೋರಾಟ ಮಾಡಿದಾಗ ಮಾತ್ರ ರೈತರ ಹಕ್ಕು ಸೌಲಭ್ಯಗಳು ಸಿಗಲು ಸಾಧ್ಯ.ಅಮರೇಶ್ವರ ದೇವರು ಗಚ್ಚಿನಮಠ ಹುನಗುಂದ.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button