ಸರಿಯಾಧ ಸಮಯಕ್ಕೆ ಬಸ್ಸ್ ವ್ಯವಸ್ಥೆ ಕಲ್ಪಿಸಿಕೊಡಿ-ವಿದ್ಯಾರ್ಥಿಗಳು ಆಗ್ರಹ.
ಕಾನಾ ಹೊಸಹಳ್ಳಿ ನವೆಂಬರ್.21

ಪಟ್ಟಣದಿಂದ ಚಿತ್ರದುರ್ಗಕ್ಕೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಿ ಕೊಂಡು ದಿನ ನಿತ್ಯ ಚಿತ್ರದುರ್ಗಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದಾರೆ, ಆದರೆ ಇವರಿಗೆ ಸರಿಯಾದ ಬಸ್ ವ್ಯವಸ್ಥೆಯಿಲ್ಲ, ಬೆಳಗಿನ ಜಾವ 9ಗಂಟೆಗೆ ಕಾಲೇಜ್ ಇರುವುದರಿಂದ, ಹೊಸಹಳ್ಳಿ ಯಿಂದ ಚಿತ್ರದುರ್ಗಕ್ಕೆ ಹೋಗಲು ಬಸ್ಸಿನ ವ್ಯವಸ್ಥೆ ಇರುವುದಿಲ್ಲ, 7.30 ಕ್ಕೆ ಬಸ್ ವ್ಯವಸ್ಥೆ ಇದ್ದರೆ ಮಾತ್ರ ಕಾಲೇಜಿಗೆ ಹೋಗಲು ಸಾಧ್ಯ, ಬೆಳಿಗ್ಗೆ ಐರಾವತ ಬಸ್ ಕಾನಾ ಹೊಸಹಳ್ಳಿಗೆ ಬರುತ್ತದೆ, ಆದರೆ ವಿದ್ಯಾರ್ಥಿಗಳ ಪಾಸಗೆ ಈ ಬಸ್ಸಿನಲ್ಲಿ ಅನುಮತಿ ಇರುವುದಿಲ್ಲ, ಈ ಹಿಂದೆ ಸಂಡೂರು ಘಟಕದಿಂದ ಬಸ್ಸಿನ ಸೌಲಭ್ಯವಿತ್ತು, ಸರಿಯಾದ ಸಮಯಕ್ಕೆ ನಾವು ಚಿತ್ರದುರ್ಗಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದು, ಈಗ ಇದು ಕೂಡ, ಬರುವುದಿಲ್ಲ. ಕಾರಣ ಸಂಬಂಧಪಟ್ಟ ಘಟಕ ವ್ಯವಸ್ಥಾಪಕರು ಕೂಡ್ಲಿಗಿಯಿಂದ ಕಾನಾ ಹೊಸಹಳ್ಳಿ ಗೆ ಬೆಳಗ್ಗೆ,7-30-ಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಮಾಡಿದರೆ, ಕಾನಾ ಹೊಸಹಳ್ಳಿ, ಬಣವಿಕಲ್ಲು ಆಲೂರು, ದೊಣ್ಣೆಹಳ್ಳಿ ಯಿಂದ ಕಾಲೇಜಿನ ಸಮಯ ಒಂಬತ್ತು ಗಂಟೆಗೆ ಸರಿಯಾಗಿ ಚಿತ್ರದುರ್ಗಕ್ಕೆ ಹೋಗುವ ವಿದ್ಯಾರ್ಥಿಗಳಿಗೆ, ಅನುಕೂಲವಾಗುತ್ತದೆ, ಆದ್ದರಿಂದ ಹೊಸಹಳ್ಳಿ, ಹಾಗೂ ಆಲೂರು, ಸುತ್ತ ಮುತ್ತಲಿನ ಹಳ್ಳಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಸಂಬಂಧಪಟ್ಟ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು ಪ್ರಯೋಜನವಿಲ್ಲ ಎನ್ನುತ್ತಾರೆ ಕೆ ತಿಪ್ಪೇಸ್ವಾಮಿ ಹೊಸಮನಿ ವಿದ್ಯಾರ್ಥಿಗಳ ಚಿಂತಕರು ಹಾಗೂ ವಿದ್ಯಾರ್ಥಿಗಳು ಆದಷ್ಟು ಬೇಗನೆ ಕ್ರಮ ಕೈಗೊಂಡು ಬಸ್ ವ್ಯವಸ್ಥೆ ಮಾಡಲು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ